Viral Video: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಆಯತಪ್ಪಿ ಬಿದ್ದ ವ್ಯಕ್ತಿ, ರಕ್ಷಣೆಗೆ ಸೂಪರ್​​​ ಮ್ಯಾನ್​​ನಂತೆ ಧಾವಿಸಿದ ಸಿಬ್ಬಂದಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 29, 2024 | 1:06 PM

ರೈಲು ಬರುವ ವೇಳೆ ಹಳಿ ದಾಟುವ ತಪ್ಪು ಅಥವಾ ರೈಲು ಚಲಿಸುತ್ತಿರುವ ವೇಳೆ ಓಡಿಕೊಂಡು ಹೋಗಿ ರೈಲನ್ನು ಹತ್ತುವ ಹುಚ್ಚು ಸಾಹಸವನ್ನು ಕೂಡಾ ಮಾಡಬಾರದು. ಇದರಿಂದ ಅಪಾಯಗಳೇ ಹೆಚ್ಚು. ಹೀಗಿದ್ದರೂ ಕೂಡಾ ಜನರು ಇದೇ ತಪ್ಪುಗಳನ್ನು ಮಾಡುತ್ತಿರುತ್ತಾರೆ. ಇದೀಗ ಅಂತಹದ್ದೇ ವಿಡಿಯೋವೊಂದು ಹರಿದಾಡುತ್ತಿದ್ದು, ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಆಯತಪ್ಪಿ ಬಿದ್ದಿದ್ದಾನೆ. MSF ಸಿಬ್ಬಂದಿಯ ತ್ವರಿತ ಕಾರ್ಯಚರಣೆಯಿಂದ ಅದೃಷ್ಟವಶಾತ್ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. 

Viral Video: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಆಯತಪ್ಪಿ ಬಿದ್ದ ವ್ಯಕ್ತಿ, ರಕ್ಷಣೆಗೆ ಸೂಪರ್​​​ ಮ್ಯಾನ್​​ನಂತೆ ಧಾವಿಸಿದ ಸಿಬ್ಬಂದಿ
ವೈರಲ್​ ವಿಡಿಯೋ
Follow us on

ರೈಲಿನಲ್ಲಿ ಪ್ರಯಾಣಿಸುವಾಗ ನಾವು  ತುಂಬಾನೇ ಜಾಗರೂಕರಾಗಿರಬೇಕು. ಹೌದು ರೈಲಿನ ಫೂಟ್ ಬೋರ್ಡ್ ಬಳಿ ನಿಂತು ನೇತಾಡುವುದು, ಬಾಗಿಲ ಬಳಿ ಕುಳಿತುಕೊಳ್ಳುವಂತಹ ತಪ್ಪುಗಳನ್ನು ಮಾಡಬಾರದು. ಅದೇ ರೀತಿ ರೈಲು ಬರುವ ವೇಳೆ ಹಳಿ ದಾಟುವುದು ಅಥವಾ ರೈಲು ಚಲಿಸುತ್ತಿರುವ ವೇಳೆ ಓಡಿಕೊಂಡು ಹೋಗಿ ರೈಲನ್ನು ಹತ್ತುವ ಹುಚ್ಚು ಸಾಹಸವನ್ನು ಕೂಡಾ ಮಾಡಬಾರದು. ಈ ರೀತಿಯ ತಪ್ಪುಗಳಿಂದ ಅದೆಷ್ಟೋ ಜನರು ಅಪಾಯಕ್ಕೆ ಸಿಲುಕಿದ್ದು ಉಂಟು. ಅದೀಗ ಅದೇ ರೀತಿಯ ಘಟನೆಯೊಂದು ನಡೆದಿದ್ದು, ವ್ಯಕ್ತಿಯೊಬ್ಬ ಚಲಿಸುತ್ತಿರುವ ರೈಲು ಹತ್ತಲು ಹೋಗಿ ಪಜೀತಿಗೆ ಸಿಲುಕಿಕೊಂಡಿದ್ದಾನೆ. MSF ಸಿಬ್ಬಂದಿಯ ತ್ವರಿತ ಕಾರ್ಯಾಚರಣೆ ಹಾಗೂ ಸಮಯ ಪ್ರಜ್ಞೆಯಿಂದ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದ್ದು, ಪುಣೆ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ಲೋಕಲ್ ಟ್ರೈನ್ ಹತ್ತುಲು ಹೋಗಿ ವ್ಯಕ್ತಿಯೊಬ್ಬ ಆಯತಪ್ಪಿ ಕೆಳಬಿದ್ದಿದ್ದಾನೆ. ಆ ತಕ್ಷಣ ಅಲ್ಲಿದ್ದ MFS ಸಿಬ್ಬಂದಿ ತಮ್ಮ ಸಮಯ ಪ್ರಜ್ಞೆ ಮತ್ತು ತ್ವರಿತ ಕಾರ್ಯಾಚರಣೆಯ ಮೂಲಕ ಕೆಳಗೆ ಬಿದ್ದಂತಹ ವ್ಯಕ್ತಿಯ ಪ್ರಾಣ ರಕ್ಷಿಸಿದ್ದಾರೆ.  ಈ ದೃಶ್ಯಾವಳಿ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಹಾರಾಷ್ಟ್ರ ಭದ್ರತಾ ಪಡೆ (MSF) ಸಿಬ್ಬಂದಿ ದಿಗಂಬರ ದೇಸಾಯಿ ಅವರ ತ್ವರಿತ ಕಾರ್ಯಾಚರಣೆ ಮತ್ತು ಶೌರ್ಯಕ್ಕೆ ನೆಟ್ಟಿಗರಿಂದ ಭಾರೀ ಶ್ಲಾಘಣೆ ವ್ಯಕ್ತವಾಗಿದೆ.

ಪುಣೆಯ ಸೆಂಟ್ರಲ್ ರೈಲ್ವೆ ತನ್ನ  ಅಧೀಕೃತ ಎಕ್ಸ್ ಖಾತೆ (drmpune) ಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, “ಪುಣೆಯ ರೈಲ್ವೆ ನಿಲ್ದಾಣದಲ್ಲಿ ನೂಕು ನುಗ್ಗಲು ನಡುವೆಯೂ MSF ಸಿಬ್ಬಂದಿ ದಿಗಂಬರ ದೇಸಾಯಿಯವರ ತ್ವರಿತ ಕಾರ್ಯ ಮತ್ತು ಶೌರ್ಯವು ಒಬ್ಬ ಪ್ರಯಾಣಿಕನ ಪ್ರಾಣ ರಕ್ಷಣೆ ಮಾಡಿದೆ. ಪ್ರಯಾಣಿಕರ ಸೇವೆ ಮತ್ತು ಸಮರ್ಪಣೆಗೆ ನಿಜವಾದ ಸಾಕ್ಷಿಯಿದು” ಎಂಬ ಶಿರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಪುಣೆ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿರುವ ರೈಲಿಗೆ ಹತ್ತುವ  ಭಂಡ ಧೈರ್ಯವನ್ನು ಮಾಡುತ್ತಾನೆ. ಆದರೆ ಆತ ರೈಲಿಗೆ ಹತ್ತುವಷ್ಟರಲ್ಲಿ ಆಯತಪ್ಪಿ ಕೆಳ ಬೀಳುತ್ತಾನೆ. ಇನ್ನೇನೂ ದೊಡ್ಡ ಅವಘಡ ಸಂಭವಿಸಿ ಬಿಡುತ್ತದೆ ಅನ್ನುವಷ್ಟರಲ್ಲಿ MSF ಸಿಬ್ಬಂದಿ ದಿಗಂಬರ ದೇಸಾಯಿಯವರು ಓಡಿ ಬಂದು ತಮ್ಮ ಸಮಯಪ್ರಜ್ಞೆ ಹಾಗೂ ತ್ವರಿತ ಕಾರ್ಯಾಚರಣೆಯಿಂದ  ಆ ವ್ಯಕ್ತಿಯ ಪ್ರಾಣ ರಕ್ಷಣೆ ಮಾಡಿದಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ವಯಸ್ಸು ಮೀರಿ ಹೋಗಿದೆ, ಇನ್ಯಾವಾಗ ಮದುವೆ; ಹುಟ್ಟು ಹಬ್ಬದ ದಿನವೇ ಯುವತಿಗೆ ಹೆತ್ತವರ ಪ್ರಶ್ನೆ

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಹತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ ಹಾಗೂ ನೆಟ್ಟಿಗರು ಕಾಮೆಂಟ್ ಮಾಡುವ ಮೂಲಕ MSF ಸಿಬ್ಬಂದಿ ದಿಗಂಬರ ದೇಸಾಯಿಯವರ ಕಾರ್ಯಕ್ಕೆ ಭಾರೀ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ