ಪ್ಯಾಲೆಸ್ಟೈನ್, ಪಾಕ್ ಬೆಂಬಲಿಸಿ ಕರಪತ್ರ ಹಂಚಿದ ದೇಶದ್ರೋಹಿಗಳಿಗೆ ಹಿಗ್ಗಾಮುಗ್ಗ ಥಳಿಸಿದ ಸ್ಥಳೀಯ ನಾಗರಿಕರು

ಪಹಲ್ಗಾಮ್‌ ನಲ್ಲಿ ನಡೆದ ಪಾಕಿಸ್ತಾನ ಬೆಂಬಲಿತ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಆದರೆ ಈ ವೇಳೆ ಯಲ್ಲಿ ಭಾರತದಲ್ಲಿರುವ ಕೆಲವರು ಪಾಕಿಸ್ತಾನಕ್ಕೆ ಬೆಂಬಲ ನೀಡುವ ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ. ಆದರೆ ಇದೀಗ ಪ್ಯಾಲೆಸ್ಟೈನ್ ಮತ್ತು ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಇಬ್ಬರು ದೇಶದ್ರೋಹಿಗಳನ್ನು ನಡು ರಸ್ತೆಯಲ್ಲಿ ನಾಗರಿಕರು ಥಳಿಸಿದ್ದು ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪ್ಯಾಲೆಸ್ಟೈನ್, ಪಾಕ್ ಬೆಂಬಲಿಸಿ ಕರಪತ್ರ ಹಂಚಿದ ದೇಶದ್ರೋಹಿಗಳಿಗೆ ಹಿಗ್ಗಾಮುಗ್ಗ ಥಳಿಸಿದ ಸ್ಥಳೀಯ ನಾಗರಿಕರು
ಸಾಂದರ್ಭಿಕ ಚಿತ್ರ
Image Credit source: Twitter
Updated By: ಅಕ್ಷಯ್​ ಪಲ್ಲಮಜಲು​​

Updated on: May 12, 2025 | 5:04 PM

ಪುಣೆ, ಮೇ 12: ಪಹಲ್ಗಾಮ್ (pahalgam) ಕೃತ್ಯಕ್ಕೆ ಪ್ರತೀಕಾರವಾಗಿ ಯೋಧರು ‘ಆಪರೇಷನ್ ಸಿಂಧೂರ’ (operation sindoor) ನಡೆಸಿ ಉಗ್ರರ ನೆಲೆ ನಾಶ‌ ಮಾಡಿದ್ದಾರೆ. ಆದರೆ ಈ ಬೆನ್ನಲೇ ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನ ವಾತಾವರಣ ಉಂಟಾಗಿದ್ದು, ಭಾರತದಲ್ಲಿ ನೆಲೆಸಿರುವ ಕೆಲವರು ಪಾಕ್ ಗೆ ಬೆಂಬಲ ಸೂಚಿಸುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಮಧ್ಯೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲಿ ಪುಣೆಯ ಕರ್ವೆ ನಗರದಲ್ಲಿ ಪ್ಯಾಲೆಸ್ಟೈನ್ ಮತ್ತು ಪಾಕಿಸ್ತಾನ (palestine and pakistan) ವನ್ನು ಬೆಂಬಲಿಸುವ ಇಬ್ಬರು ದೇಶದ್ರೋಹಿಗಳನ್ನು ಸ್ಥಳೀಯ ನಾಗರಿಕರು ಥಳಿಸಿದ್ದಾರೆ. ಹೌದು, ಪ್ಯಾಲೆಸ್ಟೈನ್ ಹಾಗೂ ಪಾಕಿಸ್ತಾನವನ್ನು ಬೆಂಬಲಿಸುವ ಮೂಲಕ ಕರಪತ್ರಗಳನ್ನು ವಿತರಿಸುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

Meghaupadates ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಇದರಲ್ಲಿ ಪುಣೆಯ ಕರ್ವೆ ನಗರದಲ್ಲಿ ಪ್ಯಾಲೆಸ್ಟೈನ್ ಮತ್ತು ಪಾಕಿಸ್ತಾನವನ್ನು ಬೆಂಬಲಿಸುವ ಮೂಲಕ ಕರಪತ್ರಗಳನ್ನು ಸಹ ವಿತರಿಸುತ್ತಿದ್ದು ಈ ಇಬ್ಬರು ದೇಶದ್ರೋಹಿಗಳನ್ನು ಸ್ಥಳೀಯ ನಾಗರಿಕರು ಥಳಿಸುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಅದೇ ಸಮಯದಲ್ಲಿ ಇಬ್ಬರು ಮಹಿಳಾ ಸಹಚರರು ಅವರ ರಕ್ಷಣೆಗೆ ಧಾವಿಸಿದ್ದು ಅವರಿಗೂ ಕೂಡ ಸ್ಥಳೀಯ ನಾಗರಿಕರು ಥಳಿಸಿದ್ದಾರೆ.

ಇದನ್ನೂ ಓದಿ
ನಿಮ್ಮ ಪಾದದ ಆಕಾರದಿಂದಲೂ ತಿಳಿಯಬಹುದು ನಿಮ್ಮ ವ್ಯಕ್ತಿತ್ವದ ರಹಸ್ಯ
ಪಾಕ್‌ ಡ್ರೋನ್‌ ದಾಳಿಯ ನಡುವೆ ವೈರಲ್‌ ಆಗ್ತಿದೆ ಡ್ರೋನ್‌ ಪಕೋಡಾ
ತೂಕ ಇಳಿಸ್ಬೇಕು ಅಂದ್ರೆ ಮನೆಯಲ್ಲಿ ಈ ಕೆಲಸಗಳನ್ನು ಮಾಡಿದ್ರೆ ಸಾಕು
ದ್ರಾಕ್ಷಿ ಬೀಜದ ಎಣ್ಣೆಯಲ್ಲಿ ಅಡಗಿದೆ ಹೆಣ್ಣಿನ ಕೇಶದ ಸೌಂದರ್ಯ!

ಇದನ್ನೂ ಓದಿ : ಕಲಿಸುವುದು ಒಂದು, ಪ್ರದರ್ಶಿಸುವುದು ಇನ್ನೊಂದು : ಇದು ನಮ್ಮ ಶಿಕ್ಷಣದ ಸ್ಥಿತಿ ನೋಡಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ:

ಈ ವಿಡಿಯೋವೊಂದನ್ನು ಶೇರ್ ಮಾಡಿಕೊಳ್ಳಲಾಗುತ್ತಿದ್ದಂತೆ ಈಗಾಗಲೇ ಎರಡೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡುಕೊಂಡಿದ್ದು ಬಳಕೆದಾರರು ಈ ರೀತಿ ಕೃತ್ಯ ಎಸಗಿದ್ದವರ ವಿರುದ್ಧ ಗರಂ ಆಗಿದ್ದಾರೆ. ಬಳಕೆದಾರರೊಬ್ಬರು, ಅತಿರೇಕದ ವರ್ತನೆ ಎಂದಿದ್ದಾರೆ. ಇನ್ನೊಬ್ಬರು, ಈ ದೇಶದಲ್ಲಿದ್ದುಕೊಂಡೆ ದೇಶದ್ರೋಹದಂತಹ ಕೃತ್ಯದಲ್ಲಿ ಎಸಗುತ್ತಿರುವ ವ್ಯಕ್ತಿಗಳನ್ನು ಬೆಂಬಲಿಸಬೇಡಿ. ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಈ ವ್ಯಕ್ತಿಗಳು ನಿಜವಾದ ದೇಶದ್ರೋಹಿಗಳು, ಇವರನ್ನು ಇಷ್ಟಕ್ಕೆ ಸುಮ್ಮನೆ ಬಿಡಬಾರದು’ ಎಂದು ಖಾರವಾಗಿಯೇ ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ