ನಾವು ಒಬ್ರಿಗೆ ಉಪಕಾರ ಮಾಡಬೇಕೆ ಹೊರತು ಯಾವತ್ತೂ ಯಾರಿಗೂ ತೊಂದ್ರೆ ಕೊಡಬಾರದು, ಅದರಲ್ಲೂ ಮೂಕ ಪ್ರಾಣಿಗಳಿಗೆ ನಮ್ಮ ಕೈಲಾದಷ್ಟು ಆಹಾರವನ್ನು ನೀಡಬೇಕು, ಇದರಿಂದ ಪುಣ್ಯ ಲಭಿಸುತ್ತೆ ಅಂತ ಹಿರಿಯರು ಹೇಳುವ ಮಾತೊಂದಿದೆ. ಈ ಮಾತಿಗೆ ಅನುಗುಣವಾಗಿ ಅದೆಷ್ಟೋ ಪ್ರಾಣಿಪ್ರಿಯರು ಪ್ರತಿನಿತ್ಯ ಬಿಡಾಡಿ ಪ್ರಾಣಿಗಳಿಗೆ ಊಟವನ್ನು ಹಾಕುವಂತಹ ಪುಣ್ಯದ ಕೆಸಲವನ್ನು ಮಾಡ್ತಿದ್ದಾರೆ. ಇಂತಹ ಒಳ್ಳೆಯ ಮನಸ್ಸುಗಳ ಮಧ್ಯೆ, ಇಲ್ಲೊಬ್ಬ ಯುವಕ ತನ್ನ ಮೋಜಿಗಾಗಿ ಹಸಿದು, ಆಹಾರವನ್ನರಸುತ್ತಾ, ಬಂದಂತಹ ನಾಯಿ ಮರಿಗೆ ಹೆಂಡವನ್ನು ಕುಡಿಸಿದ್ದಾನೆ. ಈ ಕುರಿತ ವಿಡಿಯೋ ಇದೀಗ ವೈರಲ್ ಆಗಿದ್ದು, ನೆಟ್ಟಿಗರು ಆ ಯುವಕನ ವಿರುದ್ಧ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಅಮಾನವೀಯ ಘಟನೆ ರಾಜಸ್ಥಾನದ ಮಧೋಪುರದಲ್ಲಿ ನಡೆದಿದ್ದು, ರಾತ್ರಿಯ ವೇಳೆಯಲ್ಲಿ ಯುವಕರ ತಂಡವೊಂದು ತಮ್ಮ ಬಳಿಗೆ ಆಹಾರವನ್ನರಸುತ್ತಾ ಬಂದಂತಹ ಪುಟ್ಟ ನಾಯಿ ಮರಿಗೆ ವಿಸ್ಕಿ ಕುಡಿಸಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದ್ದು, ಸಾರ್ವಜನಿಕರು ಮತ್ತು ಪ್ರಾಣಿ ದಯಾ ಸಂಘದ ಕಾರ್ಯಕರ್ತರು ಅಮಾನವೀಯ ವರ್ತನೆಯನ್ನು ತೋರಿದ ಆ ಯುವಕರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ರಾಜಸ್ಥಾನದ ಪೋಲಿಸರನ್ನು ಒತ್ತಾಯಿಸಿದ್ದಾರೆ.
@voiceforanimals11 ಎಂಬ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ʼನಾಯಿ ಮರಿಗೆ ಹೆಂಡ ಕುಡಿಸಿದ ಈ ಯುವಕರ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕುʼ ಎಂಬ ಶೀರ್ಷಿಕೆಯನ್ನು ಬರೆದುಕೊಂಡು, ರಾಜಸ್ಥಾನ ಪೋಲಿಸ್ ಹೆಲ್ಪ್ ಡೆಸ್ಕ್ ಅನ್ನು ಟ್ಯಾಗ್ ಮಾಡಲಾಗಿದೆ. ವಿಡಿಯೋದಲ್ಲಿ ಯುವಕರ ತಂಡವೊಂದು ಪ್ಲಾಸ್ಟಿಕ್ ಲೋಟದಲ್ಲಿ ವಿಸ್ಕಿಯನ್ನು ಸುರಿದು ಅದನ್ನು ನಾಯಿ ಮರಿಗೆ ಕುಡಿಸುವ ಅಮಾನವೀಯ ದೃಶ್ಯವನ್ನು ಕಾಣಬಹುದು.
in logo ko itne log follow karte hai pr inke karam nahi dekhte kitne gande log hai kitna shota bacha hai jaan ja sakti hai @SPsawaimadhopur @PoliceSawai plz🙏 iss bande pe karwahi ki jaye @RajPoliceHelp @PoliceRajasthan @RajCMO @SurajSDubey_ @JesudossAsher @asharmeet02 @Bratin_v https://t.co/nqnFMHwJ1v pic.twitter.com/l8odn4hq7l
— voiceforanimals11 (@vfanimals11) January 5, 2024
ವೈರಲ್ ವಿಡಿಯೋದಲ್ಲಿ ರಾತ್ರಿಯ ವೇಳೆಯಲ್ಲಿ ನಾಯಿ ಮರಿಯೊಂದು ಹೊಟ್ಟೆ ಹಸಿವಾಗಿದೆ, ಯಾರಾದ್ರೂ ಹೊಟ್ಟೆ ತುಂಬಾ ಊಟ ಹಾಕಬಹುದು ಎಂದು ಆಹಾರವನ್ನರಸುತ್ತಾ, ಮೋಜು ಮಸ್ತಿಯಲ್ಲಿ ತೊಡಗಿದ್ದ ಯುವಕರ ಗುಂಪಿನ ಕಡೆಗೆ ಬರುತ್ತೆ. ಆದ್ರೆ ಈ ಪುಂಡ ಯುವಕರು ತಮ್ಮ ಮೋಜಿಗಾಗಿ ಪ್ಲಾಸ್ಟಿಕ್ ಲೋಟದಲ್ಲಿ ವಿಸ್ಕಿಯನ್ನು ಸುರಿದು ಅದನ್ನು ನಾಯಿ ಮರಿಗೆ ಕುಡಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ರಾಜಸ್ಥಾನ ಪೋಲೀಸ್ ಹೆಲ್ಪ್ಡೆಸ್ಕ್ ಸ್ಥಳೀಯ ಪೋಲಿಸರಿಗೆ ಕರೆ ಮಾಡಿ ಆ ಯುವಕರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಹೇಳಿದೆ.
ಇದನ್ನೂ ಓದಿ: ಈ ಪುಟಾಣಿ ಬ್ಯಾಗ್ ಖರೀದಿಸುವ ಹಣದಲ್ಲಿ ಸುಂದರವಾದ ಮನೆ ಕಟ್ಟಬಹುದು
ಜನವರಿ 05 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ನಾಲ್ಕು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ನೆಟ್ಟಿಗರು ಕಮೆಂಟ್ ಸೆಕ್ಷನ್ ಅಲ್ಲಿ ಆ ಯುವಕರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು ʼಕೂಡಲೇ ಆತನನ್ನು ಬಂಧಿಸಿ, ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಬೇಕುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆ ಬಡ ಜೀವಕ್ಕೆ ಈ ರೀತಿ ತೊಂದರೆ ಕೊಡಲು ಈ ಪಾಪಿಗಳಿಗೆ ಹೇಗಾದರೂ ಮನಸ್ಸು ಬರುತ್ತೋʼ ಅಂತ ಕಿಡಿ ಕಾರಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆಲ್ಕೋಹಾಲ್ ಪ್ರಾಣಿಗಳಿಗೆ ತುಂಬಾ ಹಾನಿಕಾರಕವಾದದ್ದು, ಆ ನಾಯಿ ಮರಿಯ ಪ್ರಾಣದ ಜೊತೆಗೆ ಆಟವಾಡಿದ ಆ ಯುವಕರನ್ನು ಕೂಡಲೆ ಬಂಧಿಸಬೇಕುʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:57 pm, Sat, 6 January 24