Video: ಸಾರಾಯಿ ಕಿಕ್ ತಂದ ಆಪತ್ತು; ನಶೆಯಲ್ಲಿ ಮೃಗಾಲಯದ  ಸಿಂಹಗಳೊಂದಿಗೆ ವ್ಯಕ್ತಿಯ ಹುಚ್ಚಾಟ 

ಮದ್ಯದ ಅಮಲಿನಲ್ಲಿ ಕುಡುಕರು ಮಾಡುವ ಎಡವಟ್ಟುಗಳು ಒಂದೆರಡಲ್ಲ, ಈ ಕುಡುಕರ ಅವಾಂತರಗಳ ಸುದ್ದಿಗಳು  ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ  ಸಾರಾಯಿ ಗುಂಗಿನಲ್ಲಿ ಸಿಂಹಗಳ ಪಾರ್ಕಿನೊಳಗೆ ಜಿಗಿದು, ಅವಾಂತರ ಸೃಷ್ಟಿಸಿದ್ದಾನೆ. ಈ ಕುಡುಕನ ಅವಾಂತರದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. 

Video: ಸಾರಾಯಿ ಕಿಕ್ ತಂದ ಆಪತ್ತು; ನಶೆಯಲ್ಲಿ ಮೃಗಾಲಯದ  ಸಿಂಹಗಳೊಂದಿಗೆ ವ್ಯಕ್ತಿಯ ಹುಚ್ಚಾಟ 
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 06, 2024 | 4:09 PM

ಈ ಗುಂಡಿನ ಮತ್ತೇ ಅಂಥದ್ದು, ಮದ್ಯದ ಅಮಲಿನಲ್ಲಿ ಕುಡುಕರು ಮಾಡುವ ಎಡವಟ್ಟುಗಳು ಒಂದೆರಡಲ್ಲ. ಸಾರಾಯಿ ಕುಡಿದಾಗ  ಆ ವ್ಯಕ್ತಿ ಅವನು ಏನು ಮಾಡುತ್ತಿದ್ದಾನೆ ಎಂಬುದು ಅವನಿಗೆಯೇ ಅರಿವಿರೊಲ್ಲ.  ಈ ಕುಡುಕರು ಕುಡಿದಾಗ ಬೇರೆಯವರನ್ನು ಅವಾಚ್ಯ ಪದಗಳನ್ನು ಬಳಸಿ ಬಾಯಿಗೆ ಬಂದಂತೆ ನಿಂದಿಸಿರುವುದು, ಜಗಳವಾಡುವ ಕೆಲಸವನ್ನು ಮಾಡುತ್ತಿರುತ್ತಾರೆ.  ಹೀಗೆ ಕುಡುಕರು ಮಾಡುವ ಅವಾಂತರಗಳು ಒಂದೇ ಎರಡೇ ಕುಡುಕರ ಅವಾಂತರಗಳ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಅದೇ ರೀತಿ  ಇಲ್ಲೊಬ್ಬ ವ್ಯಕ್ತಿ ಕುಡಿದ ಮತ್ತಿನಲ್ಲಿ ಸಿಂಹಗಳಿರುವ ಪಾರ್ಕಿನ  ಹೊಂಡಕ್ಕೆ ಇಳಿದು ಅವಾಂತರ ಸೃಷ್ಟಿಸಿದ್ದಾನೆ. ತಕ್ಷಣ ಸಮಯ ಪ್ರಜ್ಞೆ ಮೆರೆದ ಮೃಗಾಲಯದ ಸಿಬ್ಬಂದಿಗಳು ಸಿಂಹಗಳಿಗೆ ಕಲ್ಲು ಹೊಡೆದು ಓಡಿಸುವ ಮೂಲಕ ಕುಡುಕನ ಪ್ರಾಣ ರಕ್ಷಣೆ ಮಾಡಿದ್ದಾರೆ.  ಕೆಲವು ವರ್ಷಗಳ ಹಿಂದೆ  ಹೈದರಬಾದಿನ ನೆಹರೂ ಮೃಗಾಲಯದಲ್ಲಿ ಈ ಘಟನೆ ನಡೆದಿದ್ದು, ಈ ಘಟನೆಯ ಕುರಿತ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅರ್ಜುನ್ ಸಂಗುಲ ಎಂಬವರು ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಿಂಹಗಳ ಪಾರ್ಕಿಗೆ ಜಿಗಿದು, ಕುಡುಕನೊಬ್ಬ ಅವಾಂತರ ಸೃಷ್ಟಿಸಿರುವ ದೃಶ್ಯವನ್ನು ಕಾಣಬಹುದು.

ವೈರಲ್​​ ವಿಡಿಯೋ ಇಲ್ಲಿದೆ:

ವೈರಲ್ ವಿಡಿಯೋದಲ್ಲಿ ಮೃಗಾಲಯದಲ್ಲಿ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಸಿಂಹಗಳಿರುವ ಪಾರ್ಕಿನ ನೀರಿನ ಹೊಂಡಕ್ಕೆ ಜಿಗಿದಿದ್ದಾನೆ.  ಈತ ಪಾರ್ಕಿನೊಳಗೆ ಜಿಗಿಯುತ್ತಿದ್ದಂತೆ ಎಚ್ಚೆತ್ತ ಸಿಂಹಗಳು ಆತನ ಮೇಲೆ ದಾಳಿ ಮಾಡಿ, ಬೇಟೆಯಾಡಲು ಮುಂದಾಗುತ್ತವೆ, ಆದ್ರೂ ಕೂಡಾ ಈ ಕುಡುಕ ಭಯ ಪಡದೆ ಸಿಂಹಗಳ ಮುಂದೆ ಭಂಡ ಧೈರ್ಯದಿಂದ ನಿಂತಿರುತ್ತಾನೆ. ಈ ಕುಡುಕನ ಅವಾಂತರವನ್ನು ಕಂಡು ಅಲ್ಲಿದ್ದ ಪ್ರವಾಸಿಗರೆಲ್ಲ, ಬೆಚ್ಚಿ ಬಿದ್ದು ಜೋರಾಗಿ ಕಿರುಚತೊಡಗುತ್ತಾರೆ. ಕೂಡಲೇ ಎಚ್ಚೆತ್ತ ಮೃಗಾಲಯದ  ಸಿಬ್ಬಂದಿಗಳು ಕಲ್ಲುಗಳನ್ನು ಎಸೆಯುವ ಮೂಲಕ ಸಿಂಹಗಳನ್ನು ಬೆದರಿಸಿ ದೂರ ಓಡುವಂತೆ ಮಾಡಿದ್ದಾರೆ, ಬಳಿಕ ನೀರಿನ ಹೊಂಡದಲ್ಲಿದ್ದ ಆ ವ್ಯಕ್ತಿಯನ್ನು ಕೋಲಿನ ಸಹಾಯದಿಂದ  ಮೇಲೆತ್ತಿ ಆತನ ಪ್ರಾಣ ರಕ್ಷಿಸುವ  ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ:  ನಮ್ಮ ಕೊಡಗು ಪ್ರವಾಸಿ ತಾಣವೇ ಹೊರತು, ಕಸದ ತೊಟ್ಟಿಯಲ್ಲ, ಪ್ರವಾಸಿಗರಿಗೆ ಚಳಿ ಬಿಡಿಸಿದ ಯುವಕ 

ಡಿಸೆಂಬರ್ 31 ರಂದು  ಹಂಚಿಕೊಳ್ಳಲಾದ ಈ ವಿಡಿಯೋ 3.6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 1 ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಆ ವ್ಯಕ್ತಿಯನ್ನು ಸಿಂಹದ ದಾಳಿಯಿಂದ ರಕ್ಷಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ಕುಡಿತದ ಮತ್ತಿನಲ್ಲಿ ಯಾರು ಏನ್ ಮಾಡ್ತಾರೆ ಅನ್ನೋದೇ ಗೊತ್ತಾಗಲ್ಲʼ ಅಂತ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆತ ತುಂಬಾ  ಅದೃಷ್ಟವಂತʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಇದೆಲ್ಲಾ ಗುಂಡಿನ ತಾಕತ್ತು ಅಂತ ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ