Video: ಓದುವ ವಯಸ್ಸಿನಲ್ಲಿ ಮನೆಯ ಜವಾಬ್ದಾರಿ; ಹಣ್ಣು ವ್ಯಾಪಾರ ಮಾಡಿ ತಾಯಿಗೆ ನೆರವಾಗುವ ಪುಟ್ಟ ಬಾಲಕ

ಎಲ್ಲರ ಬದುಕು ಒಂದೇ ರೀತಿ ಇರಲ್ಲ. ಕೆಲವರಿಗೆ ಸಣ್ಣ ವಯಸ್ಸಿನಲ್ಲಿಯೇ ಜವಾಬ್ದಾರಿ ಅನ್ನೋದು ಹೆಗಲ ಮೇಲೇರುತ್ತದೆ. ಇದಕ್ಕೆ ಉದಾಹರಣೆಯಂತಿದೆ ಈ ಪುಟ್ಟ ಹುಡುಗನ ಮಾತು. ಶಾಲೆಗೆ ಹೋಗುವ ಈ ಹುಡುಗನು ಸಂಜೆ ವೇಳೆ ಬಸ್ ನಿಲ್ದಾಣವೊಂದರಲ್ಲಿ ಹಣ್ಣು ಮಾರಿ ತಂದೆ ತಾಯಿಗೆ ತನ್ನ ಕೈಲಾದ ಮಟ್ಟಿಗೆ ಮಾಡುತ್ತಿರುವ ಬಾಲಕನೊಬ್ಬನ ವಿಡಿಯೋ ಸದ್ಯ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಈ ಪುಟ್ಟ ಹುಡುಗನಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Video: ಓದುವ ವಯಸ್ಸಿನಲ್ಲಿ ಮನೆಯ ಜವಾಬ್ದಾರಿ; ಹಣ್ಣು ವ್ಯಾಪಾರ ಮಾಡಿ ತಾಯಿಗೆ ನೆರವಾಗುವ ಪುಟ್ಟ ಬಾಲಕ
ವೈರಲ್ ವಿಡಿಯೋ
Image Credit source: Instagram

Updated on: Nov 14, 2025 | 4:55 PM

ಬಡತನ, ಹಸಿವು ಸಣ್ಣ ವಯಸ್ಸಿನಲ್ಲಿ ಜೀವನ ಪಾಠವನ್ನು (life lesson) ಚೆನ್ನಾಗಿ ಕಲಿಸುತ್ತದೆ. ತಾನು ದುಡಿದರೆ ತನ್ನ ತಂದೆ ತಾಯಿಗೆ ಸ್ವಲ್ಪ ಆದ್ರೂ ಸಹಾಯ ಆಗುತ್ತೆ ಎನ್ನುವ ಮಕ್ಕಳ ಮಾತು ಕೇಳಿದ್ರೆ ಕರುಳು ಚುರ್ ಎನ್ನುತ್ತೆ. ಆದರೆ ಇಲ್ಲೊಬ್ಬ ಹುಡುಗನು ಎಲ್ಲರಿಗೂ ಮಾದರಿಯಾಗಿದ್ದಾನೆ. ಸಂಜೆ ಶಾಲೆ ಬಿಟ್ಟ ನಂತರ ಬಸ್ ನಿಲ್ದಾಣದಲ್ಲಿ (bus stand) ಹಣ್ಣುಗಳನ್ನು ಮಾರಾಟ ಮಾಡಿ ತಾಯಿಗೆ ಸಹಾಯ ಮಾಡುತ್ತಿದ್ದಾನೆ. ಈ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗಿದೆ.

ಓದುವ ವಯಸ್ಸಿನಲ್ಲಿ ಈ ಬಾಲಕನಿಗಿರುವ ಜವಾಬ್ದಾರಿ ನೋಡಿ

durugesh raichuru follow me ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. 4ನೆ ತರಗತಿ ಓದುವ ಆಕಾಶ ದಿನ ನಿತ್ಯ ಶಾಲೆ ಬಿಟ್ಟ ನಂತರ ಲಿಂಗಸುಗೂರು ತಾಲೂಕಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಹಣ್ಣು ವ್ಯಾಪಾರ ಮಾಡಿ ತಾಯಿಗೆ ನೆರವಾಗುತ್ತಿರುವ ಹೃದಯ ಸ್ಪರ್ಶಿ ವಿಡಿಯೋ ಇದಾಗಿದೆ. ಈ ವಿಡಿಯೋದ ಶೀರ್ಷಿಕೆಯಲ್ಲಿ ಲಿಂಗಸುಗೂರು ತಾಲ್ಲೂಕಿನ ಹುಡುಗ ತಾನು ಶಾಲೆ ಮುಗಿಸಿ ಸಾಯಂಕಾಲ ವ್ಯಾಪಾರ ಮಾಡಿ ಬಾಡಿಗೆ ಕಟ್ಟುವ ಸಲುವಾಗಿ ತನ್ನ ತಾಯಿಗೆ ಸಹಾಯ ಮಾಡುತ್ತಾ ಇದ್ದಾನೆ ನಿಜಕ್ಕೂ ಇತಂಹ ಮಕ್ಕಳು ನೋಡಿದ್ದೇರೆ ಹೆಮ್ಮೆ ಅನಿಸುತ್ತದೆ ಒಳ್ಳೆಯದು ಆಗಲಿ ಕಂದ ನಿನಗೆ ಎಂದು ಬರೆದುಕೊಳ್ಳಲಾಗಿದೆ.

ವೈರಲ್‌ ವಿಡಿಯೋ ಇಲ್ಲಿದೆ ನೋಡಿ

ವ್ಯಕ್ತಿಯೊಬ್ಬರು ಆಕಾಶ ಎಂಬ ಹುಡುಗನನ್ನು ಮಾತನಾಡಿಸುವ ಪ್ರಯತ್ನ ಮಾಡಿದ್ದಾರೆ. ಈ ಬಾಲಕನು ಬಸ್ ನಿಲ್ದಾಣದಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿರುವುದನ್ನು ನೋಡಬಹುದು. ಈ ಪುಟ್ಟ ಹುಡುಗನು ಬುಟ್ಟಿ ಹಿಡಿದುಕೊಂಡು ಬಸ್ ಸ್ಟ್ಯಾಂಡ್‌ನಲ್ಲಿ ಪ್ರಯಾಣಿಕರು ಇರುವಲ್ಲಿಗೆ ತೆರಳಿ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾನೆ

ಈ ಪುಟ್ಟ ಹುಡುಗನ ತಾಯಿಯು ಅದೇ ಬಸ್ ನಿಲ್ದಾಣದಲ್ಲಿ ಬೇರೊಂದು ಸ್ಥಳದಲ್ಲಿ ವ್ಯಾಪಾರವನ್ನು ಮಾಡುತ್ತಿದ್ದಾರೆ ಎಂದು ಹೇಳುವುದನ್ನು ಕಾಣಬಹುದು. ಬಾಲಕನ ಬಳಿ ಇದರಲ್ಲಿ ನಿಂಗೆಷ್ಟು ಲಾಭ ಕೇಳಿದರೆ, ಲಾಭ ಏನಿಲ್ಲ ಎಲ್ಲಾ ದುಡ್ಡನ್ನು ಅಮ್ಮನಿಗೆ ಕೊಡ್ತೇನೆ, ಅವರು ಪುಸ್ತಕ ಪೆನ್ನು ಪೆನ್ಸಿಲ್ ತೆಗ್ಸಿಕೊಡ್ತಾರೆ ಎಂದು ಹೇಳುವುದನ್ನು ನೋಡಬಹುದು.

ಇದನ್ನೂ ಓದಿ:ಸೂರಿಲ್ಲದ ತಾಯಿ ಮಗುವಿಗೆ ಕೈಲಾದ ಸಹಾಯ ಮಾಡಿದ ಯುವಕ

ಈ ವಿಡಿಯೋ ಎರಡೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಜೀವನ ನಡೆಸಲು ಜೀವ ಹಿಂಡುತ್ತಿದೆ. ಬಡವನ ಗೋಳು ಕೇಳೋರು ಯಾರು ಎಂದಿದ್ದಾರೆ. ಇನ್ನೊಬ್ಬರು, ಇವತ್ತು ನೀ ಪಡುತ್ತಿರುವ ಶ್ರಮಕ್ಕೆ ಮುಂದೆ ಒಂದು ದಿನ ಒಳ್ಳೆಯ ಭವಿಷ್ಯ ನಿನ್ನದಾಗಿ ಬರಲಿದೆ ಕಂದ ಆ ದೇವರ ಆಶೀರ್ವಾದ ಮತ್ತು ನಿನ್ನ ತಾಯಿಯ ಆಶೀರ್ವಾದ ಸದಾ ಯಾವಾಗೂ ಇದ್ದೇ ಇರುತ್ತೆ ಕಂದ ನಿನಗೆ ಒಳ್ಳೆದಾಗಲಿ ಕಂದ ನಿನಗೆ 9 ಬಡತನಕ ಕಲಿಸುವ ಪಾಠ ಯಾವ ವಿದ್ಯಾಸಂಸ್ಥೆಯು ಕಲಿಸುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನೋಡೋಕೆ ತುಂಬಾ ಕಷ್ಟಾ ಅನಿಸಿದರೂ…. ತಂದೆತಾಯಿ ಅವರ ಮಕ್ಕಳಿಗೆ ಅವರ ಆರ್ಥಿಕ ಪರಿಸ್ಥಿತಿ ಖಂಡಿತವಾಗಿ ಅರಿವು ಮಾಡಿಸಬೇಕು ಮತ್ತು ಬದುಕುವ ದಾರಿಯನ್ನು ಸಹ ಕಲಿಸಬೇಕು…..ಓ ಪರಮಾತ್ಮ ಆ ಹುಡುಗನ ಭವಿಷ್ಯ ಉಜ್ವಲವಾಗಿರಲಿ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 4:51 pm, Fri, 14 November 25