Viral Video: ದೇವ್ರೆ ನನ್ನ ನೀನೇ ಕಾಪಾಡ್ಬೇಕಪ್ಪ; ದೇವರಿಗೆ ಕೈ ಮುಗಿದು ದೇಗುಲದ ಹುಂಡಿ ಹಣವನ್ನೇ ಎಗರಿಸಿದ ಭೂಪ  

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 18, 2024 | 5:29 PM

ಕಳ್ಳನೊಬ್ಬ ಕಳ್ಳತನ ಮಾಡುವ ಮುನ್ನ ಮಾಡಿದ ಒಂದು ಕೆಲಸ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದೆ. ಹೌದು  ದೇವಾಲಯದ ಒಳಗೆ ನುಗ್ಗಿದಂತಹ ಕಳ್ಳನೊಬ್ಬ ದೇವರಿಗೆ ಕೈ ಮುಗಿದು, ನಾನು ಎಲ್ಲಿಯೂ ಸಿಕ್ಕಿಹಾಕಿಕೊಳ್ಳದಿರುವಂತೆ  ಕಾಪಾಡಪ್ಪ ದೇವ್ರೇ ಎಂದು ಪ್ರಾರ್ಥನೆ ಸಲ್ಲಿಸಿದ ಬಳಿಕ ದೇವರ ಹುಂಡಿಯ ಹಣವನ್ನೇ ಎಗರಿಸಿದ್ದಾನೆ. 

Viral Video: ದೇವ್ರೆ ನನ್ನ ನೀನೇ ಕಾಪಾಡ್ಬೇಕಪ್ಪ; ದೇವರಿಗೆ ಕೈ ಮುಗಿದು ದೇಗುಲದ ಹುಂಡಿ ಹಣವನ್ನೇ ಎಗರಿಸಿದ ಭೂಪ  
Follow us on

ದೇವರ ಮೇಲೆ ಪ್ರತಿಯೊಬ್ಬರಿಗೂ ಭಯ ಭಕ್ತಿ ಇದ್ದೇ ಇದೆ. ಅದರಲ್ಲೂ ಈ ಕೆಲವೊಬ್ಬ ಕಳ್ಳರಿಗೆ ತುಸು ಹೆಚ್ಚೇ ಭಯ ಭಕ್ತಿ ಇದೆ. ದೇವ್ರು ಎಲ್ಲಾ ಕಡೆ ಇರ್ತಾನೆ, ನಾವು ಮಾಡಿದ ತಪ್ಪುಗಳನ್ನೆಲ್ಲಾ  ನೋಡುತ್ತಿರುತ್ತಾನೆ, ನಾವು ಮಾಡುವ ತಪ್ಪಿಗೆ ತಕ್ಕ ಶಾಸ್ತಿ ಮಾಡುತ್ತಾನೆ ಎನ್ನುವ ಭಯ ಕಳ್ಳರಿಗಿದೆ. ಅದಕ್ಕಾಗಿಯೇ ಕೆಲವು ಕಳ್ಳರು ಕಳ್ಳತನ ಮಾಡಿದ ಮೇಲೆ ದೇವರಿಗೆ ತಪ್ಪು ಕಾಣಿಕೆ ಹಾಕೋದು ಎಲ್ಲಾ ಮಾಡುತ್ತಿರುತ್ತಾರೆ. ಆದ್ರೆ ಇಲ್ಲೊಬ್ಬ ಕಳ್ಳ  ದೇವರಿಗೆ ಕೈ ಮುಗಿದು, ದೇಗುಲದಲ್ಲಿನ ಹಣ ಮತ್ತು ಬೆಳೆಬಾಳುವ ಚಿನ್ನಾಭರಣಗಳನ್ನೇ ಎಗರಿಸಿದ್ದಾನೆ. ಈ ಕುರಿತ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಈ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದ್ದು, ಇಲ್ಲಿನ ಆದರ್ಶ್ ನಗರದ ದೇವಾಲಯದಲ್ಲಿ  ಕೈ ಮುಗಿಯಲು ಬಂದಂತಹ ಖದೀಮ, ಅಲ್ಲಿಯೂ  ಕೂಡಾ ತನ್ನ ಕೈ ಚಳಕವನ್ನು ತೋರಿಸಿದ್ದಾನೆ. ಹೌದು ದೇವರಿಗೆ ಭಕ್ತಿ ಪೂರ್ವಕವಾಗಿ ಕೈ ಮುಗಿದು ನಂತರ ಯಾರು ಇಲ್ಲದಿರುವುದನ್ನು ಕಂಡು ಹುಂಡಿಯಲ್ಲಿದ್ದ ಹಣವನ್ನು ಎಗರಿಸಿ ಪರಾರಿಯಾಗಿದ್ದಾನೆ. ಈತ ಕಳ್ಳತನ ಮಾಡುವಂತಹ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದನ್ನು ಆಧರಿಸಿ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈತನನ್ನು ಗೋಪೇಶ್ ಶರ್ಮ (37) ಎಂದು ಗುರುತಿಸಲಾಗಿದೆ. ವಿಚಾರಣೆಯ ವೇಳೆ ಹಲವು ದೇವಾಲಯಗಳಲ್ಲಿ ಇದೇ ರೀತಿಯ ಕೃತ್ಯಗಳನ್ನು ಮಾಡಿರುವುದಾಗಿ ಈತ ತಪ್ಪೊಪ್ಪಿಕೊಂಡಿದ್ದಾನೆ.  ಹೌದು ದೇವಾಲಯಗಳನ್ನು ಗುರಿಯಾಗಿಸಿಕೊಂಡು, ದೇವರ ಅಮೂಲ್ಯ ವಸ್ತುಗಳನ್ನೆಲ್ಲಾ ಅರ್ಚಕರು ಎಲ್ಲಿ ಇಡುತ್ತಾರೆ ಎಂದು ಗಮನಿಸಿ, ರಾತ್ರಿ ಅರ್ಚಕರು ತೆರಳಿದ ಬಳಿಕ ದೇವಾಲಯದ ಹುಂಡಿ ಹಣ ಮತ್ತು ಚಿನ್ನ ಬೆಳ್ಳಿ ಮುಂತಾದ ಬೆಲೆ ಬಾಳುವ ವಸ್ತುಗಳನ್ನು ಕದಿಯುವುದೇ ಈತನ ಕೆಲಸ. ಇದೀಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡಿದ್ದು, ಪೊಲೀಸರ ಅತಿಥಿಯಾಗಿದ್ದಾನೆ.

ಇದನ್ನೂ ಓದಿ: ಮಹಿಳೆಯ ಮೇಲೆ ಕುಸಿದು ಬಿತ್ತು ರಾಶಿ ರಾಶಿ ಅಕ್ಕಿ ಮೂಟೆ; ಕೆಲಸಗಾರರ ಸಮಯಪ್ರಜ್ಞೆಗೆ ಸಲಾಂ 

ಈ ಕುರಿತ ವಿಡಿಯೋ ತುಣುಕೊಂದನ್ನು @HateDetector ಎಂಬ ಹೆಸರಿನ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ವೈರಲ್ ವಿಡಿಯೋದಲ್ಲಿ ದೇವಾಲಯಕ್ಕೆ ಬಂದಂತಹ ಕಳ್ಳನೊಬ್ಬ ದೇವ್ರೇ ನಿನ್ನ ಹುಂಡಿಗೆಯೇ ಕನ್ನ ಹಾಕುತ್ತಿದ್ದೇನೆ, ಈ ವಿಷ್ಯ ಯಾರಿಗೂ ಗೊತ್ತಾಗದಂತೆ, ನಾನು ಸಿಕ್ಕಿಹಾಕಿಕೊಳ್ಳದಿರುವಂತೆ  ನೋಡಿಕೊಳ್ಳುವುದು ನಿನ್ನ  ಜವಬ್ದಾರಿಯೆಂದು  ಭಕ್ತಿಪೂರ್ವಕವಾಗಿ ಕೈ ಮುಗಿದು ಯಾರು ಇಲ್ಲದಿರುವುದನ್ನು ಗಮನಿಸಿ ಅಲ್ಲೇ ಬದಿಯಲ್ಲಿ ಇದ್ದಂತಹ ಹುಂಡಿಯಿಂದ ಮೆಲ್ಲಗೆ ಹಣವನ್ನು ಎಗರಿಸಿ, ಅದನ್ನು ಜೇಬಿನಲ್ಲಿ ಇಟ್ಟುಕೊಂಡು ಇನ್ನೊಂದು ಬಾರಿ ದೇವರಿಗೆ ಕೈ ಮುಗಿದು ಅಲ್ಲಿಂದ ಹೊರಟು ಹೋಗುವಂತಹ ದೃಶ್ಯವನ್ನು ಕಾಣಬಹುದು.

ಮಾರ್ಚ್  18 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಎರಡು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಕಳ್ಳನ ಕೈ ಚಳಕವನ್ನು ಕಂಡು ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

 

Published On - 5:27 pm, Mon, 18 March 24