Viral : ಸಹಜ ಸೌಂದರ್ಯದಿಂದಲೇ ಇಂಟರ್‌ನೆಟ್‌ ಸೆನ್ಸೇಷನ್ ಆದ ರಾಜಸ್ಥಾನಿ ಯುವತಿ, ವಿಡಿಯೋ ವೈರಲ್

| Updated By: ಅಕ್ಷತಾ ವರ್ಕಾಡಿ

Updated on: Jan 05, 2025 | 12:33 PM

ಸಾಂಪ್ರದಾಯಿಕ ಉಡುಗೆ ತೊಟ್ಟ ರಾಜಸ್ಥಾನಿ ಸುಂದರಿಯೊಬ್ಬಳ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜ್ಯೋತಿ ಎಂಬ ಹೆಸರಿನ ಈ ಯುವತಿಯ ಸಾಂಪ್ರದಾಯಿಕ ಉಡುಪು ತೊಟ್ಟು ಯಾವುದೇ ಮೇಕಪ್ ಮಾಡಿಕೊಳ್ಳದೇ ತನ್ನ ಸಹಜ ಸೌಂದರ್ಯದಿಂದಲೇ ಮೋಡಿ ಮಾಡಿದ್ದಾಳೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಮೆಚ್ಚುಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.

Viral : ಸಹಜ ಸೌಂದರ್ಯದಿಂದಲೇ ಇಂಟರ್‌ನೆಟ್‌ ಸೆನ್ಸೇಷನ್ ಆದ ರಾಜಸ್ಥಾನಿ ಯುವತಿ, ವಿಡಿಯೋ ವೈರಲ್
Rajasthan Girl Jyothi
Follow us on

ಇತ್ತೀಚಿನ ದಿನಗಳಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಲೈಕ್ಸ್, ವೀವ್ಸ್‌ ಹಾಗೂ ಫೇಮಸ್‌ ಆಗಲು ಏನೇನೋ ಮಾಡುವುದನ್ನು ನೋಡಿರಬಹುದು. ಆದರೆ ಈ ರಾಜಸ್ತಾನಿ ಯುವತಿಯು ತನ್ನ ಸಹಜ ಸೌಂದರ್ಯದಿಂದಲೇ ಸೆನ್ಸೆಷನಲ್ ಆಗಿದ್ದಾಳೆ. ಸಾಂಪ್ರದಾಯಿಕ ಉಡುಗೆ ತೊಟ್ಟು ಮೇಕಪ್‌ ಮಾಡಿಕೊಳ್ಳದ ಜ್ಯೋತಿ ಎಂಬ ಈ ಯುವತಿ ವ್ಲಾಗರ್‌ ಜೊತೆಗೆ ಮಾತನಾಡಿದ್ದಾಳೆ. ರಾಜಸ್ಥಾನಿ ಉಡುಗೆಯೊಂದಿಗೆ ತನ್ನ ಸಹಜ ಸೌಂದರ್ಯದಿಂದಲೇ ನೆಟ್ಟಿಗರು ಈಕೆಯನ್ನು ಮೆಚ್ಚಿಕೊಂಡಿದ್ದಾಳೆ.

ಹೌದು, ರಾಜಸ್ಥಾನಿ ಸಾಂಪ್ರದಾಯಿಕ ಉಡುಪು ತೊಟ್ಟ ಜ್ಯೋತಿಯು ತನ್ನ ತಲೆಯನ್ನು ಘೂಂಘಾಟ್‌ನಿಂದ ಮುಚ್ಚಿಕೊಂಡಿರುವುದನ್ನು ನೋಡಬಹುದು. ಬಿಂದಿ, ಕಿವಿಯೋಲೆ, ಬಳೆಗಳನ್ನು ಧರಿಸಿರುವ ಈ ಯುವತಿ ಪಕ್ಕಾ ಸಾಂಪ್ರದಾಯಿಕ ಲುಕ್ ನಿಂದಲೇ ಗಮನ ಸೆಳೆದಿದ್ದಾಳೆ. ಈ ಯುವತಿ ವ್ಲಾಗರ್‌ ಜೊತೆಗೆ ಮಾತನಾಡುತ್ತಿದ್ದು, ಈ ವೇಳೆಯಲ್ಲಿ ಆಕೆಗೆ ನಗು ತಡೆಯಾಗುತ್ತಿಲ್ಲ. ನಾನು ಮಾತನಾಡುವುದನ್ನು ಇಲ್ಲಿಯವರೆಗೆ ಯಾರೂ ಕೂಡ ವಿಡಿಯೋ ರೆಕಾರ್ಡ್‌ ಮಾಡಿಲ್ಲ ಎಂದು ನಾಚುತ್ತಲೇ ಹೇಳಿದ್ದಾಳೆ.

ಇದನ್ನೂ ಓದಿ: ಚಪಾತಿ ಮಾಡುವುದರಿಂದ ಹಿಡಿದು ಪಾತ್ರೆ ತೊಳೆಯುವವರೆಗೆ ಹೆಣ್ಮಕ್ಕಳಿಗಿಂತ ಸೂಪರ್ ಆಗಿ ಮನೆ ಕೆಲಸ ಮಾಡುವ ಕೋತಿಯಿದು

Nemu ಹೆಸರಿನ ಖಾತೆಯಲ್ಲಿ ಆಕೆಯ ಮುದ್ದಾದ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. ಬಳಕೆದಾರರೊಬ್ಬರು, ನಿಜವಾಗಿ ಇವಳು ತುಂಬಾ ಚಂದ ಇದ್ದಾಳೆ” ಎಂದಿದ್ದಾರೆ. ಮತ್ತೊಬ್ಬರು, ‘ಇದು ಭಾರತದ ಸೌಂದರ್ಯದ ಸಂಕೇತ. ಈ ಹಳ್ಳಿ ಜನರ ಮುಗ್ಧತೆ ನೋಡುವಾಗ ನಿಜಕ್ಕೂ ಸಂತೋಷವಾಗುತ್ತದೆ. ಇವರಿಗೆ ಮೋಸ, ವಂಚನೆಯ ಬಗ್ಗೆ ಅರಿವೇ ಇರುವುದಿಲ್ಲ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:21 pm, Sun, 5 January 25