Viral: ಜ್ಞಾನವಾಪಿ ಪ್ರಕರಣ ವಿಚಾರಣೆ ವೇಳೆ ಕೋರ್ಟಿಗೆ ಪ್ರವೇಶಿಸಿದ ಕೋತಿ; ವಿಡಿಯೋ ವೈರಲ್
ಇಲ್ಲೊಂದು ಅಚ್ಚರಿಯ ಘಟನೆ ನಡೆದಿದ್ದು, ವಾರಣಾಸಿ ಜಿಲ್ಲಾ ನ್ಯಾಯಾಲಯದಲ್ಲಿ ಜ್ಞಾನವಾಪಿ ಪ್ರಕರಣದ ಮಹತ್ವದ ವಿಚಾರಣೆಯ ನಡೆಯುತ್ತಿದ್ದ ವೇಳೆ ಅನೀರಿಕ್ಷಿತವಾಗಿ ಕೋತಿಯೊಂದು ಕೋರ್ಟ್ ರೂಮ್‌ಗೆ ನುಗ್ಗಿದೆ. ಸುಮಾರು ಒಂದು ಗಂಟೆಗಳ ಕೋರ್ಟ್ ಮೇಜಿನ ಮೇಲೆ ಕುಳಿತಿದ್ದ ಕೋತಿ ನಂತರ ಅಲ್ಲಿಂದ ಎದ್ದು ಹೋಗಿದೆ. ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ವಾರಣಾಸಿ ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲದಲ್ಲಿ ವಿಚಾರಣೆ ನಡೆಯುತ್ತಲೇ ಇವೆ. ಅದೇ ರೀತಿ ಜನವರಿ 05, ಶನಿವಾರದಂದು ವಾರಣಾಸಿಯಲ್ಲಿ ಜ್ಞಾನವಾಪಿ ಪ್ರಕರಣದ ವಿಚಾರಣೆ ನಡೆದಿದ್ದು, ಆ ಸಂದರ್ಭದಲ್ಲಿ ನ್ಯಾಯಾಲಯದಲ್ಲೊಂದು ಅಚ್ಚರಿಯ ಘಟನೆ ನಡೆದಿದೆ. ಹೌದು ಪ್ರಕರಣದ ಮಹತ್ವದ ವಿಚಾರಣೆಯ ನಡೆಯುತ್ತಿದ್ದ ವೇಳೆ ಅನೀರಿಕ್ಷಿತವಾಗಿ ಕೋರ್ಟ್ ರೂಮ್‌ಗೆ ಎಂಟ್ರಿ ಕೊಟ್ಟಂತಹ ಕೋತಿಯೊಂದು ಸುಮಾರು ಒಂದು ಗಂಟೆಗಳ ಕೋರ್ಟ್ ಮೇಜಿನ ಮೇಲೆ ಕುಳಿತು ನಂತರ ಅಲ್ಲಿಂದ ಎದ್ದು ಹೋಗಿದೆ. ಈ ಘಟನೆ ಅಲ್ಲಿ ನೆರೆದಿದ್ದವರಲ್ಲಿ ಅಚ್ಚರಿಯನ್ನು ಮೂಡಿಸಿದೆ. ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವಾರಣಾಸಿಯ ಜಿಲ್ಲಾ ನ್ಯಾಯಾಲಯದಲ್ಲಿ ಜ.4ರಂದು ಕಾಶಿ ಜ್ಞಾನವಾಪಿ ಪ್ರಕರಣದ ವಿಚಾರಣೆ ನಡೆಯಿತು. ಅದೇ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಅನಿರೀಕ್ಷಿತವಾಗಿ ಕೋತಿಯೊಂದು ಆಗಮಿಸಿದೆ. ಸುಮಾರು ಒಂದು ಗಂಟೆಗಳ ಕಾಲ ನ್ಯಾಯಾಲಯದ ಮೇಜಿನ ಮೇಲೆ ಕುಳಿತಿದ್ದ ಕೋತಿ ವಿಚಾರಣೆ ಮುಗಿದ ಬಳಿಕ ಅಲ್ಲಿಂದ ಎದ್ದು ಹೋಗಿದೆ. ಈ ಕುತೂಹಲಕಾರಿ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಹಿಂದೂಗಳು ಇದು ಶುಭದ ಸಂಕೇತ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಈ ಕುರಿತ ವಿಡಿಯೋವನ್ನು ಸಚಿನ್ ಗುಪ್ತಾ (SachinGuptaUP) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವಾರಣಾಸಿಯ ಜಿಲ್ಲಾ ನ್ಯಾಯಾಲಯದಲ್ಲಿ ಜ್ಞಾನವಾಪಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದ ವೇಳೆ ಕೋತಿಯೊಂದು ಅಲ್ಲಿಗೆ ಆಗಮಿಸಿ, ಮೇಜಿನ ಮೇಲೆ ಕುಳಿತು ವಿಚಾರಣೆಯನ್ನು ಆಲಿಸಿರುವ ಅಚ್ಚರಿಯ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಬಾತ್ ರೂಮ್ ಗೆ ಹೋಗುವ ನೆಪದಲ್ಲಿ ಚಿನ್ನಾಭರಣ ನಗದು ಜೊತೆ ಪರಾರಿ ಆದ ವಧು, ಕಂಗಾಲಾದ ವರ
ಜನವರಿ 5 ರಂದು ಹಂಚಿಕೊಳ್ಳಲಾದ ಈ ವಿಡಿಯೋ 7 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಕೋತಿ ದೇವರ ಸಂದೇಶವಾಹಕನಾಗಿರಬಹುದೇʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನ್ಯಾಯಾಲಯದಲ್ಲಿ ಭದ್ರತೆ ಅನ್ನೋದು ಇಲ್ಲವೇʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ