Viral: ಕೌಟುಂಬಿಕ ಕಲಹ… ಹೆಂಡತಿ-ಮಗಳಿಂದಲೇ ವ್ಯಕ್ತಿಯ ಮೇಲೆ ಅಮಾನುಷ ಹಲ್ಲೆ; ವಿಡಿಯೋ ವೈರಲ್

ಹೆಣ್ಣು ಮಕ್ಕಳಿಗೆ ರಕ್ಷಣೆ ಬೇಕಿದೆ ಎಂದು ಹಲವರು ಹೇಳುತ್ತಿರುತ್ತಾರೆ. ಆದ್ರೆ ಇತ್ತೀಚಿನ ಕೆಲವು ಘಟನೆಗಳನ್ನು ನೋಡಿದಾಗ ಗಂಡಸರಿಗೂ ಕೂಡಾ ಸೂಕ್ತ ರಕ್ಷಣೆ ಬೇಕಾಗಿದೆ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಇಲ್ಲೊಬ್ಬ ಅಮಾಯಕ ವ್ಯಕ್ತಿ ತನ್ನ ಹೆಂಡತಿ ಮಗಳಿಂದಲೇ ಏಟು ತಿಂದಿದ್ದಾರೆ. ತಾಯಿ-ಮಗಳ ಈ ಕ್ರೌರ್ಯದ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Viral: ಕೌಟುಂಬಿಕ ಕಲಹ… ಹೆಂಡತಿ-ಮಗಳಿಂದಲೇ ವ್ಯಕ್ತಿಯ ಮೇಲೆ ಅಮಾನುಷ ಹಲ್ಲೆ; ವಿಡಿಯೋ ವೈರಲ್
ವೈರಲ್​​ ವಿಡಿಯೋ
Edited By:

Updated on: Oct 22, 2024 | 12:05 PM

ಪ್ರತಿಯೊಂದು ಮನೆಯಲ್ಲೂ ಸಣ್ಣಪುಟ್ಟ ಕೌಟುಂಬಿಕ ಕಲಹಗಳಿರುವುದು ಸಾಮಾನ್ಯ. ಕೆಲವೊಂದು ಬಾರಿ ಕೌಟುಂಬಿಕ ಕಲಹಗಳು ಅತಿರೇಕದ ಮಟ್ಟಕ್ಕೆ ತಲುಪಿದರೂ ಯಾವತ್ತೂ ಈ ಕಲಹಗಳು ಮನೆಯ ಯಜಮಾನನ ಮೇಲೆ ಕೈ ಮಾಡುವ ಹಂತಕ್ಕೆ ಹೋಗುವುದಿಲ್ಲ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಆತ ತನ್ನ ಗಂಡ, ಆತ ನನ್ನ ಅಪ್ಪ ಅನ್ನೋದನ್ನೂ ಮರೆತು ತಾಯಿ-ಮಗಳಿಬ್ಬರು ಸೇರಿ ಮನೆಯ ಯಜಮಾನನ ಮೇಲೆಯೇ ಕಬ್ಬಿಣದ ರಾಡ್‌ನಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ತಾಯಿ-ಮಗಳ ಈ ಕ್ರೌರ್ಯದ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಈ ಆಘಾತಕಾರಿ ಘಟನೆ ರಾಜಸ್ಥಾನದ ಬಿಕಾನೇರ್‌ ಎಂಬಲ್ಲಿ ನಡೆದಿದ್ದು, ಕೆಲಸ ಮುಗಿಸಿ ಬರುತ್ತಿದ್ದಂತೆ ವ್ಯಕ್ತಿಯೊಬ್ಬರ ಮೇಲೆ ಅವರ ಹೆಂಡತಿ ಮತ್ತು ಮಗಳು ಕಬ್ಬಿಣದ ರಾಡ್‌ ಮತ್ತು ದೊಣ್ಣೆಯಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ತಾಯಿ ಮಗಳ ಈ ಕ್ರೌರ್ಯವನ್ನು ಯಾರೋ ವಿಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇಲ್ಲಿನ ಇಂದಿರಾ ಕಾಲೋನಿಯ ಜಿತೇಂದ್ರ ಎಂಬವರಿಗೆ ಅವರ ಹೆಂಡತಿ ಮತ್ತು ಮಗಳು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದು, ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿತೇಂದ್ರ ಒತ್ತಾಯಿಸಿದ್ದಾರೆ.

ಎಕ್ಸ್​​​ ವೈರಲ್​​ ವಿಡಿಯೋ ಇಲ್ಲಿದೆ, ಇದು ತುಂಬಾ ಭಯಾನಕವಾಗಿದೆ


ಈ ಕುರಿತ ಪೋಸ್ಟ್‌ ಒಂದನ್ನು gharkekalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಅಮಾಯಕ ವ್ಯಕ್ತಿಯೊಬ್ಬರ ಮೇಲೆ ಅವರ ಹೆಂಡತಿ ಮಗಳೇ ದೊಣ್ಣೆ ಮತ್ತು ಕಬ್ಬಿಣದ ರಾಡ್‌ನಿಂದ ಅಮಾನುಷವಾಗಿ ಹಲ್ಲೆ ನಡೆಸುತ್ತಿರುವ ಆಘಾತಕಾರಿ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಪರ ಭಾಷಿಕರಿಗೆ ಕನ್ನಡ ಕಲಿಸಲು ಬೆಂಗಳೂರು ಆಟೋ ಚಾಲಕನ ವಿನೂತನ ಪ್ರಯತ್ನ

ಅಕ್ಟೋಬರ್‌ 21 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಪುರುಷರಿಗೆ ಈ ಸಮಾಜದಲ್ಲಿ ಬದುಕುವ ಹಕ್ಕಿಲ್ಲವೇ? ಪುರುಷರ ಮೇಲಿನ ಕೌಟುಂಬಿಕ ದೌರ್ಜನ್ಯವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಬೇಕುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ಕಲಿಯುಗದಲ್ಲಿ ಏನು ಬೇಕಾದ್ರೂ ಆಗ್ಬೋದುʼ ಎಂದು ಕಾಮೆಂಟ್‌ ಮಾಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ