ಪೈಲಟ್ ಸಹೋದರನಿಗೆ ಸಾವಿರಾರು ಅಡಿ ಎತ್ತರದಲ್ಲಿ ವಿಮಾನ ಹಾರಾಡುತ್ತಿರುವಾಗಲೇ ರಾಖಿ ಕಟ್ಟಿದ ಸಹೋದರಿ

ಅಕ್ಕ ತಮ್ಮ ಇಬ್ಬರೂ ಭಾರತದ ವಿಮಾನಯಾನ ಸಂಸ್ಥೆಯಾದ ಇಂಡಿಗೋದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ರಕ್ಷಾ ಬಂಧನ ಹಬ್ಬವನ್ನು ವಿಭಿನ್ನವಾಗಿ ಆಚರಿಸಿದ್ದಾರೆ. ಅಕ್ಕ ಹಾಗೂ ತಮ್ಮನ ಪರಸ್ಪರ ಪ್ರೀತಿಯ ಈ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗಿದೆ.

ಪೈಲಟ್ ಸಹೋದರನಿಗೆ ಸಾವಿರಾರು ಅಡಿ ಎತ್ತರದಲ್ಲಿ ವಿಮಾನ ಹಾರಾಡುತ್ತಿರುವಾಗಲೇ ರಾಖಿ ಕಟ್ಟಿದ ಸಹೋದರಿ

Updated on: Aug 31, 2023 | 5:38 PM

ರಕ್ಷಾ ಬಂಧನವು ಒಡಹುಟ್ಟಿದವರ ನಡುವಿನ ಅನನ್ಯ ಬಾಂಧವ್ಯದ ಆಚರಣೆಯಾಗಿದೆ. ಇದನ್ನು ದೇಶದಾದ್ಯಂತ ಹೆಚ್ಚು ಉತ್ಸಾಹದಿಂದ ಆಚರಿಸಲಾಗುತ್ತದೆ. ಆದರೆ ಇಂದಿನ ಬಿಡುವಿಲ್ಲದಿರುವ ಜೀವನಶೈಲಿಯೂ ಹಬ್ಬ ಅಥವಾ ವಿಶೇಷ ದಿನವನ್ನು ಮರೆಯುವಂತೆ ಮಾಡುತ್ತದೆ. ಆದರೆ ಭಾರತದ ವಿಮಾನಯಾನ ಸಂಸ್ಥೆಯಾದ ಇಂಡಿಗೋದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಗಗನ ಸಖಿ, ಅದೇ ವಿಮಾನದಲ್ಲಿ ಪೈಲಟ್ ಆಗಿರುವ ತನ್ನ ಸಹೋದರನಿಗೆ ಆಕಾಶದಲ್ಲಿ ಸಾವಿರಾರು ಅಡಿ ಎತ್ತರದಲ್ಲಿ ಹಾರಾಡುತ್ತಿರುವ ವಿಮಾನದಲ್ಲಿಯೇ ತನ್ನ ಕೆಲಸದ ನಡುವೆ ರಕ್ಷಾ ಬಂಧನ ಹಬ್ಬದ ಪ್ರಯುಕ್ತ ರಾಖಿ ಕಟ್ಟಿದ್ದಾರೆ. ಗಗನ ಸಖಿ ಶುಭಾ ಹಾಗೂ ಆಕೆಯ ಸಹೋದರ ಗೌರವ್ ನಡುವಿನ ಸುಂದರಭಾಂದವ್ಯವನ್ನು ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ. ಈ ವಿಡಿಯೋವನ್ನು ಇಂಡಿಗೋ ಏರ್‌ಲೈನ್ಸ್​​​​ನ ಅಧಿಕೃತ ಟ್ವಿಟರ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ವಿಡಿಯೋದಲ್ಲಿ ಇಂಡಿಗೋ ಏರ್‌ಲೈನ್ಸ್ ಕ್ಯಾಬಿನ್ ಸಿಬ್ಬಂದಿ ಶುಭಾ, ಪೈಲಟ್ ಆಗಿದ್ದ ತನ್ನ ಸಹೋದರ ಅವರೊಂದಿಗೆ ಹಬ್ಬವನ್ನು ಆಚರಿಸುತ್ತಿರುವುದನ್ನು ಕಾಣಬಹುದು. ಅಕ್ಕ ರಾಖಿ ಕಟ್ಟಿದ ಕೂಡಲೇ ತಮ್ಮ ಕಾಲಿಗೆ ಬಿದ್ದು ಆರ್ಶೀವಾದ ತೆಗೆದುಕೊಳ್ಳುತ್ತಿರುವುದನ್ನು ಕಾಣಬಹುದು. ವಿಡಿಯೋ ವೈರಲ್​ ಆಗುತ್ತಿದ್ದಂತೆ ಅಕ್ಕ ತಮ್ಮನ ಪ್ರೀತಿಗೆ ನೆಟ್ಟಿಗರಿಂದ ಭಾರೀ ಶ್ಲಾಘನೆ ವ್ಯಕ್ತವಾಗಿದೆ.

ಇದನ್ನೂ ಓದಿ: ವೈರಲ್ ವಿಡಿಯೋ: ಸೆಕ್ಸ್ ಟಾಯ್​​ ಕದಿಯಲು ಹೋಗಿ ಯಡವಟ್ಟು ಮಾಡಿಕೊಂಡ ಕಳ್ಳ!

“ನಮ್ಮಂತಹ ವೃತ್ತಿಯಲ್ಲಿ, ಪ್ರತಿ ವರ್ಷವೂ ನಾವು ನಮ್ಮ ಪ್ರೀತಿಪಾತ್ರರ ಜೊತೆಯಲ್ಲಿ ಹಬ್ಬಗಳು ಮತ್ತು ವಿಶೇಷ ಕ್ಷಣಗಳನ್ನು ಆಚರಿಸಲು ಸಿಗುವುದಿಲ್ಲ.ಅದಕ್ಕಾಗಿಯೇ, ಇಂದು ನನಗೆ ಮತ್ತು ನನ್ನ ಸಹೋದರ ಗೌರವ್‌ಗೆ ಬಹಳ ವಿಶೇಷವಾದ ದಿನವಾಗಿದೆ, ಅನೇಕ ವರ್ಷಗಳ ನಂತರ ನಾವು ಒಟ್ಟಿಗೆ ರಕ್ಷಾ ಬಂಧನವನ್ನು ಆಚರಿಸುತ್ತೇವೆ” ಶುಭಾ ಅವರ ಮಾತು ವಿಡಿಯೋದಲ್ಲಿ ಸೆರೆಯಾಗಿದೆ. ವಿಡಿಯೋ ವೈರಲ್​​ ಆಗುತ್ತಿದ್ದಂತೆ ನೆಟ್ಟಿಗರು ಬಗೆ ಬಗೆಯಾಗಿ ಕಾಮೆಂಟ್​​ ಮೂಲಕ ಪ್ರತಿಕ್ರಿಯಿಸಿದ್ದಾರೆ. ನಾವು ಎಲ್ಲೇ ಇದ್ದರೂ ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯವನ್ನು ಊಹಿಸಲೂ ಸಾಧ್ಯವಿಲ್ಲ. ಭಾರತೀಯನಾಗಿರುವುದಕ್ಕೆ ಹೆಮ್ಮೆಪಡುತ್ತೇನೆ” ಎಂದು ಟ್ವಿಟರ್​​​ ಬಳಕೆದಾರರೊಬ್ಬರು ಬರೆದಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 5:37 pm, Thu, 31 August 23