ಹಿಮಾಚಲಪ್ರದೇಶದಲ್ಲಿ ಅಪರೂಪದ ಹಿಮಚಿರತೆ ಪತ್ತೆ; ವಿಡಿಯೋ ವೈರಲ್

| Updated By: ಶ್ರೀದೇವಿ ಕಳಸದ

Updated on: Dec 29, 2022 | 1:31 PM

Snow Leopard : ಹಿಮಾಚಲ ಪ್ರದೇಶದಲ್ಲಿ ವರ್ಷಾಂತ್ಯದ ದಿನಗಳಲ್ಲಿ ಹೆಚ್ಚು ಹಿಮಪಾತವಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಮಧ್ಯೆಯೇ ಹಿಮಚಿರತೆಯೊಂದು ಕಾಣಿಸಿಕೊಂಡು ಪ್ರವಾಸಿಗರಲ್ಲಿ ಕುತೂಹಲ ಮೂಡಿಸಿದೆ.

ಹಿಮಾಚಲಪ್ರದೇಶದಲ್ಲಿ ಅಪರೂಪದ ಹಿಮಚಿರತೆ ಪತ್ತೆ; ವಿಡಿಯೋ ವೈರಲ್
ಹಿಮಚಿರತೆ
Follow us on

Viral Video : ಈ ಡಿಸೆಂಬರ್​ನ ಅವಧಿಯಲ್ಲಿ ಪ್ರವಾಸಿಗರೆಲ್ಲ ಹಿಮಾಲಯದ ಸುಂದರ ತಾಣಗಳನ್ನು ಸುತ್ತುವುದರಲ್ಲಿ ಮಗ್ನರಾಗಿದ್ದಾರೆ. ಕೈಯಲ್ಲಿ ಮೊಬೈಲು, ಕ್ಯಾಮೆರಾಗಳಿದ್ದ ಮೇಲೆ ಒಂದೊಂದು ದೃಶ್ಯವೂ ಅಪರೂಪವೇ. ಹಿಮಾಚಲ ಪ್ರದೇಶದ ಲೌಹಾಲ್​-ಸ್ಪಿತಿಯ ಜಿಲ್ಲೆಯ ಕಾಝಾದ ಚಿಚಮ್​ ಎಂಬ ಹಳ್ಳಿಯಲ್ಲಿ ಕಲ್ಲುಬಂಡೆಗಳ ಮಧ್ಯೆ ವಿರಮಿಸುತ್ತಿದ್ದ ಅಪರೂಪದ ಹಿಮಚಿರತೆಯ (Snow leopard) ವಿಡಿಯೋ ಇದೀಗ ವೈರಲ್ ಆಗಿದೆ.

ಹಿಮಾಚಲ ಪ್ರದೇಶದ ಸಹಾಯಕ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಜಯ್ ಬನ್ಯಾಲ್ ಎಂಬುವವರು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ ಎಂದು ವರದಿಗಳ ಮೂಲಕ ತಿಳಿಯುತ್ತಿದೆ. ಹಿಮಚಿರತೆಗಳು ಅಪರೂಪದ ವನ್ಯಮೃಗಗಳು. ಇವುಗಳ ಚರ್ಮ, ಮೂಳೆ ಮತ್ತು ದೇಹದ ಭಾಗಗಳಿಗೆ ಹೆಚ್ಚು ‘ಬೇಡಿಕೆ’ ಇರುವುದರಿಂದ ಇವುಗಳ ಪ್ರಾಣಕ್ಕೆ ಸಂಚಕಾರ ಇದ್ದೇ ಇರುತ್ತದೆ. ಹಾಗಾಗಿ ಅಳಿವಿನ ಅಂಚಿನಲ್ಲಿರುವ ತಳಿಗಳ ಪಟ್ಟಿಯಲ್ಲಿ ಈ ಹಿಮಚಿರತೆಗಳೂ ಸೇರಿವೆ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಕ್ರಿಸ್​ಮಸ್ ರಜೆಯ​ ಪ್ರಯುಕ್ತ ಶಿಮ್ಲಾವು ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಈ ವರ್ಷದ ಕೊನೆಯ ದಿನಗಳಲ್ಲಿ ಈ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಭಾರೀ ಹಿಮಪಾತವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:25 pm, Thu, 29 December 22