Viral Video: ಅಮೆರಿಕ; ಅಪರೂಪದ ಪಟ್ಟೆರಹಿತ ಜಿರಾಫೆಮರಿ; ಸಾರ್ವಜನಿಕರ ವೀಕ್ಷಣೆಗೆ ಅವಕಾಶ

|

Updated on: Aug 22, 2023 | 3:06 PM

Giraffe : ಅಮೆರಿಕದ ಬ್ರೈಟ್​ ಮೃಗಾಲಯದಲ್ಲಿ ಜು. 31ರಂದು ಜನಿಸಿದ ಈ ಅಪರೂಪದ ಜಿರಾಫೆ ಇದೀಗ ಸಾರ್ವಜನಿಕರ ವೀಕ್ಷಣೆಗೆ ತೆರವುಗೊಂಡಿದೆ. ಈ ಮರಿಗೆ ಹೆಸರನ್ನು ಸೂಚಿಸಲು ಮೃಗಾಲಯವು ಸಾರ್ವಜನಿಕರಲ್ಲಿ ಕೇಳಿಕೊಂಡಿತ್ತು. ಅಂತಿಮಪಟ್ಟಿಯಲ್ಲಿ ನಾಲ್ಕು ಹೆಸರುಗಳಿದ್ದು, ಇವುಗಳಲ್ಲಿ ಯಾವುದನ್ನು ಅಂತಿಮವಾಗಿ ಆಯ್ಕೆ ಮಾಡಬಹುದು ಎನ್ನುವ ಕುತೂಹಲ ಉಂಟಾಗಿದೆ.

Viral Video: ಅಮೆರಿಕ; ಅಪರೂಪದ ಪಟ್ಟೆರಹಿತ ಜಿರಾಫೆಮರಿ; ಸಾರ್ವಜನಿಕರ ವೀಕ್ಷಣೆಗೆ ಅವಕಾಶ
ಅಮೆರಿಕದ ಬ್ರೈಟ್ ಮೃಗಾಲಯದಲ್ಲಿ ಜನಿಸಿದ ಪಟ್ಟೆರಹಿತ ಜಿರಾಫೆ
Follow us on

America : ಅಮೆರಿಕದ ಬ್ರೈಟ್ಸ್ ಮೃಗಾಲಯದಲ್ಲಿ ಇತ್ತೀಚೆಗೆ ಜನಿಸಿದ ಅಪರೂಪದ ಪಟ್ಟೆರಹಿತ ಜಿರಾಫೆಯನ್ನು ಇದೀಗ ಸಾರ್ವಜನಿಕರು ನೋಡಬಹುದಾಗಿದೆ. ಸದ್ಯ ತನ್ನ ತಾಯಿಯ ಪೋಷಣೆಯಲ್ಲಿರುವ ಈ ಜಿರಾಫೆಯು (Giraffe) ಜು. 31ರಂದು ಜನಿಸಿತ್ತು. ಸದ್ಯ 6 ಅಡಿ ಎತ್ತರವನ್ನು ಇದು ಹೊಂದಿದೆ. ಇದು ಜನಿಸಿದ ದಿನದಿಂದಲೂ ವಿವಿದ ದೇಶಗಳಲ್ಲಿರುವ ಮೃಗಾಲಯದ ಜಿರಾಫೆ ತಜ್ಞರೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರ ಸಲಹೆ ಮಾರ್ಗದರ್ಶನದಲ್ಲಿ ಪೋಷಿಲಾಗುತ್ತಿದೆ ಎಂದು ಮೃಗಾಲಯ ಸಿಬ್ಬಂದಿಯು ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದೆ. ನೆಟ್ಟಿನಲ್ಲಿ ಈ ಮರಿಯ ವಿಡಿಯೋ, ಫೋಟೋ ನೋಡಿದ ಮಂದಿ ಇಂಥ ಮರಿಯನ್ನು ಮೊದಲ ಬಾರಿಗೆ ನೋಡುತ್ತಿದ್ದೇವೆ ಎನ್ನುತ್ತಿದ್ದಾರೆ.

ಇದನ್ನೂ ಓದಿ : Viral Video: ಕೋಳಿಮೊಟ್ಟೆಗಳಿಗೆ ಕಾವು ಕೊಟ್ಟದ್ದಲ್ಲದೇ ಮರಿಗಳನ್ನೂ ಪೋಷಿಸುತ್ತಿರುವ ಬೆಕ್ಕಮ್ಮ

‘ಜಿರಾಫೆ ಕನ್ಸರ್ವೇಶನ್ ಫೌಂಡೇಶನ್ (GCF) ಪ್ರಕಾರ, ಈ ಜಿರಾಫೆಯು ನಾಲ್ಕು ವಿಶಿಷ್ಟ ಜಾತಿಗಳಲ್ಲಿ ಒಂದಾಗಿದೆ. ಇದನ್ನು ರಕ್ಷಿಸುವ ಗುರಿಯನ್ನು ಸಂಸ್ಥೆಯು ಹೊಂದಿದೆ. 2018ರಲ್ಲಿ ಇಂಟರ್​ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ ಈ ಮರಿಯನ್ನು ಅಳಿವಿನಂಚಿನಲ್ಲಿರುವ ತಳಿ ಎಂದು ಗುರುತಿಸಿದೆ. ಕಳೆದ ಮೂರು ದಶಕಗಳಲ್ಲಿ ಶೇ 40 ಜಿರಾಫೆಗಳು ಕಾಡಿನಲ್ಲಿ ಕಾಣೆಯಾಗಿವೆ. ಹಾಗಾಗಿ ಜಿರಾಫೆಗಳನ್ನು ರಕ್ಷಿಸುವ ತುರ್ತು ಇದೆ’ ಎಂದು ಮೃಗಾಲಯದ ಸಂಸ್ಥಾಪಕ ಟೋನಿ ಬ್ರೈಟ್​ ಹೇಳಿದ್ದಾರೆ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಜಿರಾಫೆಮರಿ ಅಮ್ಮನೊಂದಿಗೆ ಒಡನಾಡುತ್ತಿರುವ ವಿಡಿಯೋ ನೋಡಿ

ಬ್ರೈಟ್ಸ್ ಮೃಗಾಲಯವು ಜಿರಾಫೆಗೆ ಮುದ್ದಾದ ಹೆಸರನ್ನು ಹುಡುಕುತ್ತಿದೆ. ತನ್ನ ಫೇಸ್​ಬುಕ್​ ಪುಟದಲ್ಲಿ ಹೆಸರುಗಳನ್ನು ಸೂಚಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ. ಈತನಕ ಶಾರ್ಟ್​ಲಿಸ್ಟ್​ ಮಾಡಿದ ಪಟ್ಟಿಯಲ್ಲಿ ಕಿಪೆಕೀ, ಫಿರ್ಯಾಲಿ, ಶಾಕಿರಿ ಮತ್ತು ಜಮೆಲ್ಲಾ ಎಂಬ ಹೆಸರುಗಳು ಸೇರಿವೆ.

ಇದನ್ನೂ ಓದಿ : Viral Video: ಬಾಹ್ಯಾಕಾಶದಲ್ಲಿ ಹನಿ ಸ್ಯಾಂಡ್​ವಿಚ್ ತಯಾರಿಸಿ ಸವಿದ ಗಗನಯಾತ್ರಿ

ತುಂಬಾ ಮುದ್ದಾಗಿದೆ, ಇಂಥ ಮರಿಯನ್ನು ಈತನಕ ನೋಡಿದ್ದೇ ಇಲ್ಲ, ನಾನು ಆದಷ್ಟು ಬೇಗ ಈ ಮೃಗಾಲಯಕ್ಕೆ ನನ್ನ ಮಕ್ಕಳನ್ನು ಕರೆದುಕೊಂಡು ಹೋಗಬೇಕು ಎಂದು ಒಬ್ಬರು ಹೇಳಿದ್ದಾರೆ. ಇನ್ನೂ ಒಮದು ತಿಂಗಳಾಗಿಲ್ಲ, ಈಗಲೇ 6 ಅಡಿ! ಆಕರ್ಷಕವಾಗಿ ಕಾಣುತ್ತಿದೆ ಈ ಮರಿ ಎಂದಿದ್ದಾರೆ ಮತ್ತೊಬ್ಬರು. ಅಮ್ಮನೊಂದಿಗೆ ಎಷ್ಟು ನಿರುಮ್ಮಳವಾಗಿ ಆಡಿಕೊಂಡಿದೆ ನೋಡಿ ಇದು ಎಂದು ಮಗದೊಬ್ಬರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ