
ತಿಂಗಳುಗಳ ಹಿಂದೆಯಷ್ಟೇ ಮೂತ್ರಪಿಂಡದ ಕಸಿ (Kidney Transplant) ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್(Lalu Prasad Yadav) ಅವರು ಬ್ಯಾಡ್ಮಿಂಟನ್ ಆಡುತ್ತಿರುವ ವಿಡಿಯೋ ಇದೀಗಾ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಲಾಲು ಅವರ ಪುತ್ರ, ಬಿಹಾರದ ಉಪ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ವೀಡಿಯೊವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ಸಿಂಗಾಪುರದಲ್ಲಿ ಕಿಡ್ನಿ ಕಸಿಗೆ ಒಳಗಾಗಿದ್ದ ಲಾಲು ಪ್ರಸಾದ್ ಅವರಿಗೆ ಅವರ ಮಗಳು ರೋಹಿಣಿ ಆಚಾರ್ಯ ಅವರೇ ಕಿಡ್ನಿ ದಾನ ಮಾಡಿದ್ದರು. ಇದಾದ ಕೆಲವು ತಿಂಗಳುಗಳ ವರೆಗೆ ವಿಶ್ರಾಂತಿಯಲ್ಲಿದ್ದ ಲಾಲು ಯಾದವ್ ಅವರು ತಮ್ಮ ಅಭಿಮಾನಿಗಳಿಗೆ ಈ ವಿಡಿಯೋ ಮೂಲಕ ಖುಷಿಯನ್ನು ನೀಡಿದ್ದಾರೆ.
ಇದನ್ನೂ ಓದಿ: ದೇಶದಲ್ಲಿಯೇ ಮೊದಲ ಬಾರಿಗೆ ಜೀನ್ ಥೆರಪಿ ಚಿಕಿತ್ಸೆಯನ್ನು ಆರಂಭಿಸಲಿದೆ ಕರ್ನಾಟಕದ ನಾರಾಯಣ ನೇತ್ರಾಲಯ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಚಿಕ್ಕ ವೀಡಿಯೊದಲ್ಲಿ, ಲಾಲು ಯಾದವ್ ಬ್ಯಾಡ್ಮಿಂಟನ್ ನೆಟ್ನಲ್ಲಿ ಶಟಲ್ ಅನ್ನು ಹೊಡೆದ ನಂತರ ನಗುತ್ತಿರುವುದನ್ನು ಕಾಣಬಹುದು. ಜೊತೆಗೆ ಹಳೆಯ ಹಿಂದಿ ಹಾಡಿನೊಂದಿಗೆ ವಿಡಿಯೋ ಎಡಿಟ್ ಮಾಡಿರುವುದನ್ನು ಕಾಣಬಹುದು.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 11:45 am, Sat, 29 July 23