Gene Therapy Treatment: ದೇಶದಲ್ಲಿಯೇ ಮೊದಲ ಬಾರಿಗೆ ಜೀನ್ ಥೆರಪಿ ಚಿಕಿತ್ಸೆಯನ್ನು ಆರಂಭಿಸಲಿದೆ ಕರ್ನಾಟಕದ ನಾರಾಯಣ ನೇತ್ರಾಲಯ

ಅನುವಂಶಿಕ ಅಸ್ವಸ್ಥತೆಗಳಾದ ಕೆರಾಟೋಕೊನಸ್, ಕಾರ್ನಿಯಲ್ ಡಿಸ್ಟ್ರೋಪಿ, ಇರುಳು ಕುರುಡು ಮುಂತಾದ ಕಾಯಿಲೆಗೆ ಚಿಕಿತ್ಸೆ ನೀಡಲು ನಾರಾಯಣ ನೇತ್ರಾಲಯವು ಭಾರತದಲ್ಲಿಯೇ ಮೊದಲ ಬಾರಿಗೆ ಜೀನ್ ಥೆರಪಿ ಪ್ರಯೋಗಗಳನ್ನು ಪ್ರಾರಂಭಿಸಲಿದೆ. ಈ ಚಿಕಿತ್ಸೆಯು ಡಿಸೆಂಬರ್ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ.

Gene Therapy Treatment: ದೇಶದಲ್ಲಿಯೇ ಮೊದಲ ಬಾರಿಗೆ ಜೀನ್ ಥೆರಪಿ ಚಿಕಿತ್ಸೆಯನ್ನು ಆರಂಭಿಸಲಿದೆ ಕರ್ನಾಟಕದ ನಾರಾಯಣ ನೇತ್ರಾಲಯ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 28, 2023 | 3:33 PM

ಕಣ್ಣಿನ ಅನುವಂಶಿಕ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡಲು ಬೆಂಗಳೂರಿನ ನಾರಾಯಣ ನೇತ್ರಾಲಯವು (Narayana Nethralaya) ರೋಗಿಗಳ ಮೇಲೆ ಜೀನ್ ಥೆರಪಿ (Gene Therapy) ಪ್ರಯೋಗಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ. ವರದಿಗಳ ಪ್ರಕಾರ ಇದು ಭಾರತದಲ್ಲಿಯೇ ಮೊದಲ ಜೀನ್ ಥೆರಪಿ ಪ್ರಯೋಗವಾಗಿದೆ. ಇರುಳು ಕುರುಡು, ಒಣ ಕಣ್ಣಿನ ಕಾಯಿಲೆ, ಕಾರ್ನಿಯಲ್ ಡಿಸ್ಟ್ರೋಫಿ, ಮಸ್ಕ್ಯುಲರ್ ಡಿಸ್ಟ್ರೋಫಿ ಸೇರಿದಂತೆ ಇನ್ನು ಅನೇಕ ಅನುವಂಶಿಕ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡಲು ಜೀನ್ ಥೆರಪಿಯನ್ನು ಬಳಸಲಾಗುತ್ತದೆ. ಮೂಲಗಳ ಪ್ರಕಾರ ಜೀನ್ ಥೆರಪಿ ಪ್ರಯೋಗವು ಡಿಸೆಂಬರ್​​ನಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ.

ದೇಶದಲ್ಲಿ 10,000 ಜನರಲ್ಲಿ ಒಬ್ಬರು ಇಂತಹ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದು, ಈ ಅಸ್ವಸ್ಥತೆಗಳನ್ನು ಗುಣಪಡಿಸಲು ಜೀನ್ ಥೆರಪಿ ಅಧ್ಯಯನ ಅತ್ಯಗತ್ಯ. ಜೀನ್ ಚಿಕಿತ್ಸೆಯು ರೋಗಿಗಳನ್ನು ಕಾಯಿಲೆಯಿಂದ ಗುಣಪಡಿಸಲು ಸಹಾಯ ಮಾಡುವುದು ಮಾತ್ರವಲ್ಲದೆ ತಾಯಿಯಿಂದ ಮಗುವಿಗೆ ಅನುವಂಶಿಕವಾಗಿ ಹರಡುವ ಅಸ್ವಸ್ಥತೆಗಳನ್ನು ತಡೆಯಲು ಸಹಕಾರಿ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ. ರೋಹಿತ್ ಶೆಟ್ಟಿ ಹೇಳಿದ್ದಾರೆ.

ದೇಶದಲ್ಲಿ 70 ಲಕ್ಷಕ್ಕೂ ಹೆಚ್ಚು ಅನುವಂಶಿಕ ಅಸ್ವಸ್ಥತೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಜೀನ್ ಥೆರಪಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಸ್ತುತ ಜೀನ್ ಥೆರಪಿ ಚಿಕಿತ್ಸೆಯು ಹೊರ ದೇಶಗಳಲ್ಲಿ ಮಾತ್ರ ಲಭ್ಯವಿದ್ದು, ಆ ದೇಶಗಳಲ್ಲಿ ಒಬ್ಬ ರೋಗಿಗೆ ಚಿಕಿತ್ಸೆ ನೀಡಲು 1.4 ಮಿಲಿಯನ್ ಡಾಲರ್ (11,51,74,640.00) ವರೆಗೂ ವೆಚ್ಚವಾಗುತ್ತದೆ. ಇಲ್ಲಿಯವರೆಗೆ ಭಾರತದಲ್ಲಿ ಈ ರೀತಿಯ ಯಾವುದೇ ಪ್ರಯೋಗಗಳನ್ನು ಮಾಡಲಾಗಿಲ್ಲ. ಹಾಗಾಗಿ ನಾರಾಯಣ ನೇತ್ರಾಲಯವು ಕಡಿಮೆ ವೆಚ್ಚದಲ್ಲಿ ಅನುವಂಶಿಕ ಅಸ್ವಸ್ಥತೆಗಳನ್ನು ಗುಣಪಡಿಸಲು ಜೀನ್ ಥೆರಪಿ ಪ್ರಯೋಗವನ್ನು ಪ್ರಾರಂಭಿಸಿದೆ.

ಇದನ್ನೂ ಓದಿ:ಮಧ್ಯಾಹ್ನ ಊಟ ಮಾಡಿದ ಬಳಿಕ ಮಲಗುವ ಅಭ್ಯಾಸ ನಿಮಗಿದೆಯೇ? ಇದು ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ? 

ನಾರಾಯಣ ನೇತ್ರಾಲಯದ ಸಂಸ್ಥಾಪಕ ಮತ್ತು ಮಾಜಿ ಅಧ್ಯಕ್ಷ ಡಾ. ಭುಜಂಗ ಶೆಟ್ಟಿ ನೇತೃತ್ವದಲ್ಲಿ 10 ವರ್ಷಗಳ ಹಿಂದೆ ಜೀನ್ ಥೆರಪಿ ಸಂಶೋಧನೆಯನ್ನು ಪ್ರಾರಂಭಿಸಲಾಗಿದ್ದು, ಬಹು ಪ್ರಯೋಗಗಳನ್ನು ಸ್ಥಾಪಿಸಲು ಮತ್ತು ಜೀನ್ ಥೆರಪಿ ಪ್ರಯೋಗವನ್ನು ಪ್ರಾರಂಭಿಸಲು ಸಂಸ್ಥೆಯು ಇಲ್ಲಿಯವರೆಗೆ 150 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ.

ಜೀನ್ ಚಿಕಿತ್ಸೆ ಎಂದರೇನು?

ಜೀನ್ ಥೆರಪಿ ಎಂಬುವುದು ಒಂದು ಬಗೆಯ ವೈದ್ಯಕೀಯ ಚಿಕಿತ್ಸಾ ವಿಧಾನವಾಗಿದ್ದು, ಆಧಾರವಾಗಿರುವ ಅನುವಂಶಿಕ ಸಮಸ್ಯೆಗಳನ್ನು ಸರಿಪಡಿಸುವ ಮೂಲಕ ರೋಗವನ್ನು ಗುಣಪಡಿಸಲಾಗುತ್ತದೆ. ಜೀನ್ ಥೆರಪಿ ಸಹಾಯದಿಂದ ಔಷಧಿಗಳು ಅಥವಾ ಶಸ್ತ್ರಚಿಕಿತ್ಸೆಯ ಬದಲಿಗೆ, ವೈದ್ಯರು ವ್ಯಕ್ತಿಯ ಅನುವಂಶಿಕ ಪರಿಸ್ಥಿತಿಗಳನ್ನು ಬದಲಾಯಿಸುವ ಮೂಲಕ ಅನುವಂಶಿಕ ಅಸ್ವಸ್ಥತೆಗೆ ಚಿಕಿತ್ಸೆ ನೀಡುತ್ತಾರೆ. ಜೀನ್ ಥೆರಪಿಯಲ್ಲಿ ದೋಷಮುಕ್ತ ಜೀನ್​​​ಗಳನ್ನು ಬದಲಾಯಿಸಲಾಗುತ್ತದೆ ಮತ್ತು ರೋಗವನ್ನು ನಿವಾರಿಸಲು ಅಥವಾ ಅದರ ವಿರುದ್ಧ ಹೋರಾಡಲು ದೇಹದ ಸಾಮರ್ಥ್ಯವನ್ನು ಹೆಚ್ಚಿಸಲು ಹೊಸ ಜೀನ್​​​ಗಳನ್ನು ಸೇರಿಸಲಾಗುತ್ತದೆ.

ಇನ್ನಷ್ಟು ಹೆಲ್ತ್​ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು