Viral: ದೈತ್ಯ ಹೆಬ್ಬಾವಿನ ಜೊತೆ ಸರಸವಾಡಲು ಹೋಗಿ ಪಜೀತಿಗೆ ಸಿಲುಕಿದ ಯುವಕ; ವಿಡಿಯೋ ವೈರಲ್‌

ಹಾವುಗಳ ಭಯವಿದ್ದರೂ ಕೂಡಾ ಕೆಲ ಆಸಾವಿಗಳು ವಿಡಿಯೋ ಅಥವಾ ರೀಲ್ಸ್‌ ಮಾಡುವ ಸಲುವಾಗಿ ವಿಷಪೂರಿತ ಹಾವುಗಳನ್ನು ಕೈಯಲ್ಲಿ ಹಿಡಿದುಕೊಂಡು ಸರಸವಾಡುತ್ತಾರೆ. ಹೀಗೆ ಹಾವಿನ ಜೊತೆ ಸರಸವಾಡಲು ಹೋಗಿ ಪಜೀತಿಗೆ ಸಿಲುಕಿದವರ ಸುದ್ದಿಗಳ ಬಗ್ಗೆ ಕೇಳಿರುತ್ತೀರಿ ಅಲ್ವಾ. ಇದೀಗ ಇಲ್ಲೊಂದು ಇದೇ ರೀತಿಯ ಘಟನೆ ನಡೆದಿದ್ದು, ಯುವಕನೊಬ್ಬ ದೈತ್ಯ ಹೆಬ್ಬಾವನ್ನು ಬರಿಗೈಲಿ ಹಿಡಿದು, ಅದಕ್ಕೆ ಮುತ್ತಿಡಲು ಹೋಗಿ ಕಚ್ಚಿಸಿಕೊಂಡಿದ್ದಾನೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Viral: ದೈತ್ಯ ಹೆಬ್ಬಾವಿನ ಜೊತೆ ಸರಸವಾಡಲು ಹೋಗಿ ಪಜೀತಿಗೆ ಸಿಲುಕಿದ ಯುವಕ; ವಿಡಿಯೋ ವೈರಲ್‌
ವಿಡಿಯೋ ವೈರಲ್‌
Edited By:

Updated on: Dec 16, 2024 | 3:39 PM

ಹಾವುಗಳೆಂದರೆ ಯಾರಿಗೆ ತಾನೇ ಭಯವಿರಲ್ಲ ಹೇಳಿ. ಅದರಲ್ಲೂ ಹೆಬ್ಬಾವು, ಕಾಳಿಂಗ ಸರ್ಪದಂತಹ ದೈತ್ಯ ಹಾವುಗಳನ್ನು ಕಂಡರೆ ಸಾಕು ಜನ ಮಾರು ದೂರ ಓಡಿ ಹೋಗ್ತಾರೆ. ಇವರುಗಳ ನಡುವೆ ಒಂದಿಷ್ಟು ಧೈರ್ಯವಂತ ಉರಗ ಪ್ರೇಮಿಗಳೂ ಇದ್ದಾರೆ. ಎಲ್ಲೇ ಎಷ್ಟು ದೊಡ್ಡ ಹಾವುಗಳಿದ್ದರೂ, ವಿಷಪೂರಿತ ಹಾವುಗಳಿದ್ದರೂ ಕೂಡಾ ಅದನ್ನು ಸಲೀಸಾಗಿ ಹಿಡಿದು ಅದರೊಂದಿಗೆ ಸರಸವಾಡುತ್ತಾರೆ. ಹೀಗೆ ಹಾವಿನ ಜೊತೆ ಸರಸವಾಡಲು ಹೋಗಿ ಪಜೀತಿಗೆ ಸಿಲುಕಿದವರ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದೀಗ ಇಲ್ಲೊಂದು ಇದೇ ರೀತಿಯ ಘಟನೆ ನಡೆದಿದ್ದು, ಯುವಕನೊಬ್ಬ ದೈತ್ಯ ಹೆಬ್ಬಾವನ್ನು ಬರಿಗೈಲಿ ಹಿಡಿದು, ವಿಡಿಯೋ ಮಾಡುವ ಸಲುವಾಗಿ ಆ ಹಾವಿಗೆ ಮುತ್ತಿಡಲು ಹೋಗಿ ಕಚ್ಚಿಸಿಕೊಂಡಿದ್ದಾನೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ವಿಡಿಯೋ, ರೀಲ್ಸ್‌ ಸಲುವಾಗಿ ಹಾವುಗಳ ಜೊತೆ ಸರಸವಾಡಲು ಹೋಗಿ ಪಜೀತಿಗೆ ಸಿಲುಕಿದವರ ವಿಡಿಯೋಗಳು ಆಗೊಮ್ಮೆ ಈಗೊಮ್ಮೆ ಸೋಷಿಯಲ್‌ ಮೀಡಿಯಾದಲ್ಲಿ ಕಾಣಸಿಗುತ್ತಿರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ದೃಶ್ಯ ವೈರಲ್‌ ಆಗಿದೆ. ಯುವಕನೊಬ್ಬ ರೀಲ್ಸ್‌ ಮಾಡುವ ಸಲುವಾಗಿ ದೈತ್ಯ ಹೆಬ್ಬಾವನ್ನು ಕೈಯಲ್ಲಿ ಹಿಡಿದು ಅದಕ್ಕೆ ಮುತ್ತಿಡಲು ಹೋಗಿ ಹಾವಿನಿಂದ ಕಚ್ಚಿಸಿಕೊಂಡಿದ್ದಾನೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಪೂನಂ ಶರ್ಮಾ (Poonam_1992) ಎಂಬವರು ಈ ವಿಡಿಯೋವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಬಹುಶಃ ರೀಲ್ಸ್‌ ಮಾಡುವ ಹವ್ಯಾಸ ದುಬಾರಿಯಾಗಬಹುದು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಯುವಕನೊಬ್ಬ ಬರಿಗೈಲಿ ದೈತ್ಯ ಹೆಬ್ಬಾವನ್ನು ಹಿಡಿದಿರುವ ದೃಶ್ಯವನ್ನು ಕಾಣಬಹುದು. ಹೀಗೆ ಹಾವಿಗೆ ಆತ ಹಾವಿಗೆ ಮುತ್ತಿಡಲು ಹೋದಾಗ ಹಾವು ಒಮ್ಮೆಲೆ ಎಗರಿ ಯುವಕನ ಮುಖಕ್ಕೆ ಕಚ್ಚಿದೆ. ಈ ಹಾವಿನ ದಾಳಿಯಿಂದ ಬಿಡಿಸಿಕೊಳ್ಳಲು ಆತ ಹರ ಸಾಹಸವನ್ನೇ ಪಟ್ಟಿದ್ದಾನೆ.

ಇದನ್ನೂ ಓದಿ;  ದೇಶದಲ್ಲಿ ಪ್ರಸ್ತುತ 144 ಕೋಟಿ ಜನಸಂಖ್ಯೆ ಇದ್ದರೂ ಭಾರತ ಏಕೆ ಇನ್ನೂ ಹೆಚ್ಚು ಮಕ್ಕಳು ಬೇಕೆಂದು ಬಯಸುತ್ತಿದೆ?

ಡಿಸೆಂಬರ್‌ 12 ರಂದು ಹಂಚಿಕೊಳ್ಳಲಾದ ಈ ವಿಡಿಯೋ 16.9 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇತ್ತೀಚಿನ ದಿನಗಳಲ್ಲಿ ಜನ ಲೈಕ್ಸ್‌, ವೀವ್ಸ್‌ಗಾಘಿ ತಮ್ಮ ಜೀವವನ್ನೇ ಅಪಾಯಕ್ಕೆ ತಳ್ಳುತ್ತಿದ್ದಾರೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹೆಬ್ಬಾವು ವಿಷವಲ್ಲ ಆದ್ರೆ ಈ ದೃಶ್ಯ ನಿಜಕ್ಕೂ ಭಯಾನಕವಾಗಿದೆʼ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ