ನರೇಂದ್ರ ಮೋದಿಯವರಿಗೆ ಸೀರೆ ಉಡುಗೊರೆ ಕೊಟ್ಟ ಪದ್ಮಶ್ರೀ ಪುರಸ್ಕೃತ; ಗಿಫ್ಟ್​ ನೋಡಿ ಪ್ರಧಾನಿಗೆ ಖುಷಿಯೋ ಖುಷಿ !

| Updated By: Lakshmi Hegde

Updated on: Nov 13, 2021 | 12:48 PM

ಈ ಬಾರಿ ಪದ್ಮಶ್ರೀ ಪ್ರಶಸ್ತಿ ಪಡೆದ 102 ಜನರಲ್ಲಿ ಬಿರನ್​ ಕುಮಾರ್​ ಬಸಕ್​ ಅವರೂ ಒಬ್ಬರು. ಒಂದು ರೂಪಾಯಿ ಬಂಡವಾಳದಿಂದ ಸೀರೆ ನೇಯ್ಗೆ ಮತ್ತು ಮಾರಾಟ ಶುರು ಮಾಡಿದವರು.1970ರ ಅವಧಿಯಲ್ಲಂತೂ ಬಿರನ್​ ಕುಮಾರ್​ ತಮ್ಮ ಸೋದರನೊಂದಿಗೆ ಸೇರಿ ಕೋಲ್ಕತ್ತದಲ್ಲಿ ಮನೆಮನೆಗೆ ತೆರಳಿ ಸೀರೆ ಮಾರಾಟ ಮಾಡುತ್ತಿದ್ದರು.

ನರೇಂದ್ರ ಮೋದಿಯವರಿಗೆ ಸೀರೆ ಉಡುಗೊರೆ ಕೊಟ್ಟ ಪದ್ಮಶ್ರೀ ಪುರಸ್ಕೃತ; ಗಿಫ್ಟ್​ ನೋಡಿ ಪ್ರಧಾನಿಗೆ ಖುಷಿಯೋ ಖುಷಿ !
ಪ್ರಧಾನಿಗೆ ವಿಶೇಷ ಉಡುಗೊರೆ ನೀಡಿದ ಬಿರನ್​ ಕುಮಾರ್ ಬಿಸಕ್​
Follow us on

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಬಿರನ್​ ಕುಮಾರ್ ಬಸಕ್ (Biren Kumar Basak)​ ಅವರು ಪ್ರಧಾನಿ ನರೇಂದ್ರ ಮೋದಿ(PM Narendra Modi)ಯವರಿಗೊಂದು ವಿಶೇಷ ಉಡುಗೋರೆ ನೀಡಿದ್ದಾರೆ. ಅದನ್ನು ನೋಡಿ ನರೇಂದ್ರ ಮೋದಿಯವರು ಫುಲ್​ ಖುಷಿಯಾಗಿ, ತಮ್ಮ ಸೋಷಿಯಲ್ ಮೀಡಿಯಾ(Social Media)ಗಳಲ್ಲೂ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಬಿರನ್​ ಕುಮಾರ್ ಬಸಕ್​ ಪ್ರಧಾನಿಯವರಿಗೆ ನೀಡಿದ ಉಡುಗೊರೆ ಏನಪ್ಪ ಅಂದರೆ ಅದೊಂದು ಸೀರೆ. ಈ ಸೀರೆಯ ಮೇಲೆ, ಪ್ರಧಾನಿ ಮೋದಿಯವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿರುವಂತೆ ಪೇಂಟಿಂಗ್​ ಮಾಡಿದ್ದು ತುಂಬ ಗಮನಸೆಳೆಯುತ್ತಿದೆ.  

ಬಿರನ್​ ಕುಮಾರ್​ ಅವರು ನೀಡಿದ ಈ ವಿಶೇಷ ಉಡುಗೊರೆಯನ್ನು ನೋಡಿದ ಪ್ರಧಾನಿ ಮೋದಿ ತುಂಬ ಖುಷಿಯಿಂದ ಟ್ವೀಟ್​ ಮಾಡಿಕೊಂಡಿದ್ದಾರೆ. ಬಿರನ್​ ಕುಮಾರ್ ಬಸಕ್​ ಅವರು ಪಶ್ಚಿಮ ಬಂಗಾಳದ ನಾದಿಯಾದವರು. ಅವರೊಬ್ಬ ಹೆಸರಾಂತ ನೇಕಾರರು. ಸೀರೆಗಳ ಮೇಲೆ ಭಾರತೀಯ ಇತಿಹಾಸ, ಸಂಸ್ಕೃತಿ, ಪರಂಪರೆಯ ಚಿತ್ರಗಳನ್ನು ಚಿತ್ರಿಸುವುದು ಅವರ ವಿಶೇಷತೆ. ಈ ಬಾರಿ ಪದ್ಮಶ್ರೀ ಪುರಸ್ಕೃತರಾಗಿದ್ದು, ನಾನು ಅವರೊಂದಿಗೆ ಮಾತನಾಡುತ್ತಿದ್ದಾಗ ಈ ಸೀರೆ ಉಡುಗೊರೆಯನ್ನಾಗಿ ನೀಡಿದರು. ನನಗಂತೂ ತುಂಬ ಖುಷಿಯಾಯಿತು ಎಂದು ಹೇಳಿಕೊಂಡಿದ್ದಾರೆ.

ಈ ಬಾರಿ ಪದ್ಮಶ್ರೀ ಪ್ರಶಸ್ತಿ ಪಡೆದ 102 ಜನರಲ್ಲಿ ಬಿರನ್​ ಕುಮಾರ್​ ಬಸಕ್​ ಅವರೂ ಒಬ್ಬರು. ಒಂದು ರೂಪಾಯಿ ಬಂಡವಾಳದಿಂದ ಸೀರೆ ನೇಯ್ಗೆ ಮತ್ತು ಮಾರಾಟ ಶುರು ಮಾಡಿದವರು 1970ರ ಅವಧಿಯಲ್ಲಂತೂ ಬಿರನ್​ ಕುಮಾರ್​ ತಮ್ಮ ಸೋದರನೊಂದಿಗೆ ಸೇರಿ ಕೋಲ್ಕತ್ತದಲ್ಲಿ ಮನೆಮನೆಗೆ ತೆರಳಿ ಸೀರೆ ಮಾರಾಟ ಮಾಡುತ್ತಿದ್ದರು. ನಾದಿಯಾದಿಂದ ರೈಲಿನ ಮೂಲಕ ಕೋಲ್ಕತ್ತಕ್ಕೆ ಹೋಗುತ್ತಿದ್ದರು. ಆಗಂತೂ ಅವರು ಕೇವಲ 15-30 ರೂಪಾಯಿಯೂ ಸೀರೆ ಮಾರಿದ್ದುಂಟು. ಈಗ ಅವರ ವಾರ್ಷಿಕ ವಹಿವಾಟು  25 ಕೋಟಿ ರೂ.ಗೂ ಅಧಿಕ. ಸುಮಾರು 5000 ಜನರು ಅವರ ಬಳಿ ಕೆಲಸ ಮಾಡುತ್ತಿದ್ದಾರೆ.  ಮಮತಾ ಬ್ಯಾನರ್ಜಿ, ಸೌರವ್​ ಗಂಗೂಲಿ, ಗಾಯಕರಾದ ಉಸ್ತಾದ್​ ಅಮ್ಜದ್​ ಅಲಿ ಖಾನ್, ಆಶಾ ಬೋಸ್ಲೆ, ಲತಾ ಮಂಗೇಶ್ಕರ್​ರಂಥ ಹಲವು ಗಣ್ಯರು ಬಿರನ್​ ಕುಮಾರ್ ಅವರ ಗ್ರಾಹಕರಾಗಿದ್ದಾರೆ.

ಇದನ್ನೂ ಓದಿ: ರೈತರ ತೀವ್ರ ವಿರೋಧದ ಮಧ್ಯೆ ಹಲಗಾ-ಮಚ್ಚೆ ಬೈಪಾಸ್ ರಸ್ತೆ ಕಾಮಗಾರಿ; ಎರಡೇ ದಿನದಲ್ಲಿ 5 ಕಿಲೋ ಮೀಟರ್ ಕಚ್ಚಾ ರಸ್ತೆ ನಿರ್ಮಾಣ