Dog Love : ನಾಲ್ಕೈದು ದಿನಗಳ ನಂತರ, ಎರಡು ವಾರಗಳ ನಂತರ, ತಿಂಗಳುಗಳ ನಂತರ ಹೋಗಲಿ ಒಂದು ವರ್ಷದ ನಂತರ ಕಳೆದುಹೋದ ಸಾಕುಪ್ರಾಣಿಗಳು ಮನೆಗೆ ಮರಳಿದ ಉದಾಹರಣೆಗಳಿವೆ. ಆದರೆ 12 ವರ್ಷಗಳ ನಂತರ? ಹೌದು, 12 ವರ್ಷಗಳ ನಂತರ ಸಾಕುನಾಯಿ ವಾಪಾಸು ತನ್ನ ಮನೆಗೆ ಮರಳಿದೆ. ಅಷ್ಟೇ ಅಲ್ಲಾ, ಮನೆಯಲ್ಲಿದ್ದ ಇತರೇ ನಾಯಿಗಳೊಂದಿಗೆ (Dogs) ಓಡಾಡಿಕೊಂಡು ಆಟವನ್ನೂ ಆಡಿದೆ. ಪೋಷಕರೊಂದಿಗಿನ ಈ ಪುನರ್ಮಿಲನದ ಈ ಫೋಟೋ ನೋಡಿ ನೆಟ್ಟಿಗರು ಭಾವುಕರಾಗುತ್ತಿದ್ದಾರೆ. ಮ್ಯಾರಿಕೋಪಾ ಕೌಂಟಿ ಎನಿಮಲ್ ಕೇರ್ ಅಂಡ್ ಕಂಟ್ರೋಲ್ ಎಂಬ ಫೇಸ್ಬುಕ್ ಪುಟದಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ.
ಇದನ್ನೂ ಓದಿ : Viral Video: ಮಹಾಬಿಲ್ಲಿ ಹಬ್ಬ! ಹೇಗಿದೆ ಎಲ್ಸಾ ಕುಟ್ಟಿಯ ಓಣಂ ಆಚರಣೆ, ಬನ್ನಿ ನೀವೂ
ಮಿನಿಯನ್ ಎಂಬ ಈ ನಾಯಿಯನ್ನು ಮ್ಯಾರಿಕೋಪಾ ಕೌಂಟಿ ಎನಿಮಲ್ ಕೇರ್ ಅಂಡ್ ಕಂಟ್ರೋಲ್ನ ಕ್ಷೇತ್ರಾಧಿಕಾರಿಯೊಬ್ಬರು ರಕ್ಷಿಸಿದ್ದಾರೆ. ವಯಸ್ಸಾಗಿರುವ ಈ ನಾಯಿ ಸಂಕೋಚದಿಂದ, ದುಃಖದಿಂದ ಬಾಲವನ್ನೂ ಅಲ್ಲಾಡಿಸದೇ ನಿಂತಿತ್ತು. ನಂತರ ಅದರ ಮೈಕ್ರೋಚಿಪ್ ಸಹಾಯದಿಂದ ಪೋಷಕರ ಸಂಪರ್ಕ ಸಂಖ್ಯೆ ಪತ್ತೆ ಹಚ್ಚಿ ಅವರಿಗೆ ಒಪ್ಪಿಸಲಾಯಿತು.
ಮಿನಿಯನ್ ಪೋಷಕರು ಕರೆದೊಯ್ಯಲು ಬಂದಾಗ, ಬಹುಶಃ ಗುರುತಿಸಲು ಸಮಯ ತೆಗೆದುಕೊಳ್ಳಬಹುದು ಎಂದುಕೊಳ್ಳಲಾಗಿತ್ತು. ಆದರೆ ಅಚ್ಚರಿ ಎಂಬಂತೆ ಅವರನ್ನು ನೋಡಿ ತಕ್ಷಣವೇ ಬಾಲ ಅಲ್ಲಾಡಿಸತೊಡಗಿತು. ಅವರೊಂದಿಗೆ ಹೋಗಲು ಉತ್ಸಾಹವನ್ನೂ ತೋರಿತು. 2011ರಲ್ಲಿ ಮತ್ತು ಆಗಸ್ಟ್ 30, 2023ರಂದು ತೆಗೆದ ಮಿನಿಯನ್ ತನ್ನ ಪೋಷಕರೊಂದಿಗೆ ತೆಗೆಸಿಕೊಂಡ ಫೋಟೋಗಳೇ ಈ ಪುನರ್ಮಿಲನಕ್ಕೆ ಸಾಕ್ಷಿ.
ಇದನ್ನೂ ಓದಿ : Viral Video: ನಾಲೆಯೊಳಗೆ ಬಿದ್ದು ಒದ್ದಾಡುತ್ತಿದ್ದ ಗೂಬೆಯನ್ನು ರಕ್ಷಿಸಿದ ಮಹಿಳೆಯ ವಿಡಿಯೋ ವೈರಲ್
ಈತನಕ ಈ ಫೇಸ್ಬುಕ್ ಪೋಸ್ಟ್ಗೆ 1,100 ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. 400ಕ್ಕೂ ಹೆಚ್ಚು ಜನರು ಶೇರ್ ಮಾಡಿದ್ದಾರೆ. 175 ಜನರು ಪ್ರತಿಕ್ರಿಯಿಸಿದ್ದಾರೆ. ಅಬ್ಬಾ! ಇದು ಅದ್ಭುತ, ನನ್ನ ಕಣ್ಣಲ್ಲಿ ನೀರಾಡುತ್ತಿದೆ, ಆ ಮಗು ಚೆನ್ನಾಗಿರಲಿ. 12 ವರ್ಷ ಹೇಗಿತ್ತೋ ಏನೋ ಎಲ್ಲಿತ್ತೋ ಪಾಪ ಎಂದು ಅನೇಕರು ಹೇಳಿದ್ದಾರೆ. ಇದು ನಿಜಕ್ಕೂ ನಂಬಲು ಅಸಾಧ್ಯವಾದಂಥದ್ದು. ಒಟ್ಟಿನಲ್ಲಿ ಅವ ಚೆನ್ನಾಗಿರಲಿ. ಪೋಷಕರೊಂದಿಗೆ ಮತ್ತು ಮನೆಯಲ್ಲಿರುವ ನಾಯಿಗಳೊಂದಿಗೆ ಸಂತೋಷದಿಂದ ಇರಲಿ. ವೃದ್ಧಾಪ್ಯದಲ್ಲಿ ಆದರೂ ಅವನು ಎಲ್ಲಾ ರೀತಿಯಿಂದ ಚೆನ್ನಾಗಿರಲಿ ಎಂದು ಅನೇಕರು ಹಾರೈಸಿದ್ದಾರೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ