Viral Video: ಕೀಬೋರ್ಡ್​ ನುಡಿಸಿದ ಖಡ್ಗಮೃಗ! ಹುಟ್ಟು ಹಬ್ಬದ ಸಂಭ್ರಮದಲ್ಲಿ ಭಾವಪೂರ್ಣ ರಾಗ

|

Updated on: May 21, 2021 | 4:24 PM

ಹುಟ್ಟುಹಬ್ಬ ಎಂಬುದು ಎಲ್ಲರಿಗೆ ಖುಷಿ ನೀಡುವ ವಿಚಾರ. ನಮ್ಮ ಹುಟ್ಟುಹಬ್ಬ ಬಂದಾಗ ನಾವು ಎಲ್ಲರೊಂದಿಗೆ ಸಡಗರದಿಂದ ಆಚರಿಸುತ್ತೇವೆ. ಅದೇರೀತಿ ಇಲ್ಲೊಂದು ಖಡ್ಗಮೃಗ ನಾನೇನೂ ಕಡಿಮೆ ಇಲ್ಲ ಎಂದು ಕೀಬೋರ್ಡ್​ನಲ್ಲಿ ಒಳ್ಳೆಯ ಸಂಗೀತ ನುಡಿಸಿದೆ. ಪ್ರಾಣಿ ಕೀಬೋರ್ಡ್​ ನುಡಿಸುವದನ್ನು ನೋಡುತ್ತಿದ್ದರೆ ನಿಜಕ್ಕೂ ಆಶ್ಚರ್ಯ ಎನಿಸುತ್ತದೆ.

Viral Video: ಕೀಬೋರ್ಡ್​ ನುಡಿಸಿದ ಖಡ್ಗಮೃಗ! ಹುಟ್ಟು ಹಬ್ಬದ ಸಂಭ್ರಮದಲ್ಲಿ ಭಾವಪೂರ್ಣ ರಾಗ
ಕೀಬೋರ್ಡ್​ ನುಡಿಸಿದ ಖಡ್ಗಮೃಗ
Follow us on

ಖಡ್ಗಮೃಗ ಕೀಬೋರ್ಡ್​ ನುಡಿಸುವದನ್ನು ನೀವೆಲ್ಲಾದರೂ ನೋಡಿದ್ದೀರಾ? ಇಲ್ಲೊಂದು ಖಡ್ಗಮೃಗ ತನ್ನ ಖುಷಿಗೆ ಕೀಬೋರ್ಡ್​ ನುಡಿಸಿದೆ. ಸೋಷಿಯಲ್​ ಮಿಡಿಯಾದಲ್ಲಿ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಎಲ್ಲರನ್ನು ಅಚ್ಚರಿ ಮೂಡಿಸುವಂತಿದೆ. ವಿಡಿಯೋ ನೋಡಿದ ನೆಟ್ಟಿಗರು ಒಳ್ಳೆಯ ಹಾಡು ಎಂದು ಸಂತೋಷಪಟ್ಟಿದ್ದಾರೆ. ಡೆನ್ವರ್​ ಮೃಗಾಲಯದಲ್ಲಿದ್ದ ಖಡ್ಗಮೃಗಕ್ಕೆ ಹುಟ್ಟುಹಬ್ಬದ ಸಂಭ್ರಮ. ಅದಕ್ಕೀಗ 12 ವರ್ಷ ತುಂಬಿದೆ. ಈ ವಿಶೇಷ ದಿನದಂದು ಖಡ್ಗಮೃಗ ಕೀಬೋರ್ಡ್​ ನುಡಿಸುತ್ತ ತನ್ನ ಹುಟ್ಟಿದ ದಿನವನ್ನು ಸಡಗರದಿಂದ ಸಂಭ್ರಮಿಸಿದೆ. ಕೀಬೋರ್ಡ್​ನಲ್ಲಿ ನುಡಿಸಿದ ರಾಗ ಕೇಳಿದ ನೆಟ್ಟಿಗರಿಗೆ ಮುದ ನೀಡಿದೆ. 

ಹುಟ್ಟುಹಬ್ಬ ಎಂಬುದು ಎಲ್ಲರಿಗೆ ಖುಷಿ ನೀಡುವ ವಿಚಾರ. ನಮ್ಮ ಹುಟ್ಟುಹಬ್ಬ ಬಂದಾಗ ನಾವು ಎಲ್ಲರೊಂದಿಗೆ ಸಡಗರದಿಂದ ಆಚರಿಸುತ್ತೇವೆ. ಸಿಹಿ ಹಂಚಿಕೊಂಡು ಸಂಭ್ರಮಿಸುತ್ತೇವೆ. ಅದೇ ರೀತಿ ಇಲ್ಲೊಂದು ಖಡ್ಗಮೃಗ ನಾನೇನೂ ಕಡಿಮೆ ಇಲ್ಲ ಎಂದು ಕೀಬೋರ್ಡ್​ನಲ್ಲಿ ಒಳ್ಳೆಯ ಸಂಗೀತ ನುಡಿಸಿದೆ. ಪ್ರಾಣಿ ಕೀಬೋರ್ಡ್​ ನುಡಿಸುವದನ್ನು ನೋಡುತ್ತಿದ್ದರೆ ನಿಜಕ್ಕೂ ಆಶ್ಚರ್ಯ ಎನಿಸುತ್ತದೆ.

ವಿಡಿಯೋವನ್ನು ತನ್ನ ಅಧಿಕೃತ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡ ಡೆನ್ವರ್​ ಮೃಗಾಲಯ, ‘ಜನ್ಮ ದಿನದ ಶುಭಾಶಯಗಳು’ ಎಂದು ಬರೆದುಕೊಂಡಿದೆ. ಕೀಬೋರ್ಡ್​ ನುಡಿಸುತ್ತಿರುವುದನ್ನು ವಿಡಿಯೋದಲ್ಲಿ ನೀವು ನೋಡಬಹುದು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ 22 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿಕೊಂಡಿದೆ. ಹಾಗೆಯೇ 4,200 ಲೈಕ್ಸ್​ಗಳನ್ನು ಗಳಿಸಿಕೊಂಡಿದೆ. ಖಡ್ಗಮೃಗ ಕೀಬೋರ್ಡ್​ ನುಡಿಸಿದ್ದನ್ನು ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ‘ಒಳ್ಳೆಯ ಹಾಡು’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Viral Video: ಕುಕ್ಕರ್​ನಲ್ಲಿ ಚಪಾತಿ ಬೇಯಿಸಿದ ಮಹಿಳೆ! ನೀವೂ ಮಾಡುವುದಾದರೆ ಎಚ್ಚರ!