AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕುಕ್ಕರ್​ನಲ್ಲಿ ಚಪಾತಿ ಬೇಯಿಸಿದ ಮಹಿಳೆ! ನೀವೂ ಮಾಡುವುದಾದರೆ ಎಚ್ಚರ!

ಊಫ್.. ಎಷ್ಟೆಲ್ಲಾ ಕೆಲಸ.. ಹೀಗಿರುವಾಗ ಮನೆಯ ಹೆಂಗಸರು ಸುಲಭದಲ್ಲಿ ರೊಟ್ಟಿ ಬೇಯಿಸುವ ವಿಧಾನವನ್ನು ಹುಡುಕುತ್ತಿರುತ್ತಾರೆ. ಅಂತಹ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Viral Video: ಕುಕ್ಕರ್​ನಲ್ಲಿ ಚಪಾತಿ ಬೇಯಿಸಿದ ಮಹಿಳೆ! ನೀವೂ ಮಾಡುವುದಾದರೆ ಎಚ್ಚರ!
ಕುಕ್ಕರ್​ನಲ್ಲಿ ಚಪಾತಿ ಬೇಯಿಸಿದ ಮಹಿಳೆ
shruti hegde
| Edited By: |

Updated on:May 22, 2021 | 9:30 AM

Share

ರೊಟ್ಟಿ ಅಥವಾ ಚಪಾತಿ ತಯಾರಿಸುವುದು ಒಂದು ಕಲೆ. ಶ್ರದ್ಧೆ ಜತೆಗೆ ತಾಳ್ಮೆ ಬೇಕು. ವಿಭಕ್ತ ಕುಟುಂಬಗಳಲ್ಲಿ 4 ಜನರಿದ್ದರೆ ಒಬ್ಬರಿಗೆ ನಾಲ್ಕು ರೊಟ್ಟಿಯಂತೆ ಹದಿನಾರು ಜಪಾತಿ ತಟ್ಟಿದರೆ ಸಾಕು. ಅದೇ ಅವಿಭಕ್ತ ಕುಟುಂಬಗಳಲ್ಲಿ ಮನೆತುಂಬ ಜನ. ಬೆಳಿಗ್ಗಿನ ಉಪಹಾರಕ್ಕೆ ರೊಟ್ಟಿ ತಟ್ಟುವುದರಲ್ಲಿ ಮಹಿಳೆಯ ಸಾಹಸವೇ ಸರಿ. ರೊಟ್ಟಿ ರುಚಿಯಾಗಿರಬೇಕು. ಹದವಾಗಿ ಬೆಂದಿರಬೇಕು. ತಾಳ್ಮೆಯಿಂದ ಹಿಟ್ಟು ತಟ್ಟಬೇಕು. ಊಫ್.. ಎಷ್ಟೆಲ್ಲಾ ಕೆಲಸ. ಹೀಗಿರುವಾಗ ಮನೆಯ ಹೆಂಗಸರು ಸುಲಭದಲ್ಲಿ ರೊಟ್ಟಿ ಬೇಯಿಸುವ ವಿಧಾನವನ್ನು ಹುಡುಕುತ್ತಿರುತ್ತಾರೆ. ಅಂತಹ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಯಾವಾಗ ಯಾವ ವಿಡಿಯೋ ಹೇಗೆ ವೈರಲ್​ ಆಗುತ್ತದೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಪ್ರತಿನಿತ್ಯವೂ ವಿವಿಧ ರೀತಿಯ ವಿಡಿಯೋಗಳು ವೈರಲ್​ ಆಗುತ್ತಿರುತ್ತದೆ. ಇದೀಗ ಸುಲಭದಲ್ಲಿ ಕುಕ್ಕರ್​ ಬಳಸಿ ರೊಟ್ಟಿ ಅಥವಾ ಚಪಾತಿ ತಯಾರಿಸುವ ವಿಧಾನವೊಂದು ಹರಿದಾಡುತ್ತಿದೆ. ಮಹಿಳೆಯೋರ್ವಳು ಸುಲಭದಲ್ಲಿ ಕುಕ್ಕರ್​ ಮೂಲಕ ಚಪಾತಿ ಮಾಡುತ್ತಾಳೆ. ವಿಡಿಯೋ ಇಲ್ಲಿದೆ ನೀವೂ ನೋಡಿ. ಮನೆಯಲ್ಲಿ ನೀವು ಇದೇ ವಿಧಾನ ಅಳವಡಿಸುವುದಾದರೆ ಎಚ್ಚರವಿರಲಿ.

ವಿಡಿಯೋದಲ್ಲಿ ನೀವು ಗಮನಿಸಿದಂತೆ ಮಹಿಳೆಯು ಹಿಟ್ಟು ತೆಗೆದುಕೊಂಡು ಮಣೆಯ ಮೇಲಿಟ್ಟು ಲಟ್ಟಿಸುತ್ತಾಳೆ. ನಂತರ ಒಲೆಯ ಮೇಲಿರುವ ಕುಕ್ಕರ್​ನೊಳಗೆ ಲಟ್ಟಿಸಿದ 3 ರೊಟ್ಟಿಯನ್ನು ಇಟ್ಟು ಮುಚ್ಚಳ ಮುಚ್ಚುತ್ತಾಳೆ. 2 ನಿಮಿಷಗಳ ಕಾಲ ಬೇಯಿಸಿ ಒಲೆಯನ್ನು ನಂದಿಸುತ್ತಾಳೆ. ಕುಕ್ಕರ್​ ಬಿಸಿ ಆರಿದ ಬಳಿಕ ಮುಚ್ಚಳ ತೆಗೆಯುತ್ತಾಳೆ. ಅದಾಗ ರೊಟ್ಟಿ ಸಿದ್ಧವಾಗಿರುತ್ತದೆ. ಈ ವಿಡಿಯೋ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದೆ ಮೊದಲು ಸುಲಭದಲ್ಲಿ ರೊಟ್ಟಿ ತಯಾರಿಸುವ ವಿಡಿಯೋ ವೈರಲ್​ ಆದದ್ದಲ್ಲ. ಈ ಹಿಂದೆ ಲಟ್ಟಣಿಗೆ ಇಲ್ಲದೇ ರೌಂಡ್​ ಆಕರದಲ್ಲಿ ರೊಟ್ಟಿ ತಟ್ಟುವ ವಿಧಾನವೂ ವೈರಲ್​ ಆಗಿತ್ತು.

ಇದನ್ನೂ ಓದಿ: ಲಟ್ಟಣಿಗೆ ಇಲ್ಲದೇ ರೌಂಡ್​ ರೊಟ್ಟಿ ತಟ್ಟುವುದು ಹೇಗೆ? ಸರಳ ವಿಧಾನದ ವಿಡಿಯೋ ವೈರಲ್​ ಆಯ್ತು

Published On - 2:09 pm, Fri, 21 May 21