Viral Video: ರಿಚ್ಚಿ ಸಿನೆಮಾದ ಅಂಕಿತಾ ಕುಂಡು ಹಾಡಿರುವ ‘ಮೊಗದಲ್ಲಿ’ ನಾಳೆ ಬಿಡುಗಡೆ

|

Updated on: Aug 07, 2023 | 6:47 PM

Richie : ಲವ್ ಸಸ್ಪೆನ್ಸ್​ ಥ್ರಿಲ್ಲರ್​ ಕಥಾಹಂದರವಿರುವ 'ರಿಚ್ಚಿ' ಕನ್ನಡ ಮತ್ತು ಹಿಂದಿಯಲ್ಲಿ ನಿರ್ಮಾಣವಾಗಿದ್ದು ಬಿಡುಗಡೆಗಾಗಿ ಕಾಯುತ್ತಿದೆ. ಹಿನ್ನೆಲೆ ಗಾಯಕಿ ಅಂಕಿತಾ ಕುಂಡು ಹಾಡಿರುವ ಈ ಸುಮಧುರ ಗೀತೆ ಗುಂಗು ಹಿಡಿಸುವಂತಿದೆ.

Viral Video: ರಿಚ್ಚಿ ಸಿನೆಮಾದ ಅಂಕಿತಾ ಕುಂಡು ಹಾಡಿರುವ ಮೊಗದಲ್ಲಿ ನಾಳೆ ಬಿಡುಗಡೆ
ರಿಚ್ಚಿ ಸಿನೆಮಾದ 'ಮೊಗದಲ್ಲಿ' ಹಾಡಿನ ಹಿನ್ನೆಲೆ ಗಾಯಕಿ ಅಂಕಿತಾ ಕುಂಡು
Follow us on

Kannada Cinema : ‘ಹೊಂಗನಸ ಶಶಿ ನೀನು ಎಂದೆಂದೂ ನಗುತಲಿರು/ ಮನಸಾರೆ ನಾ ನಿನ್ನ ಜೊತೆಯಾಗುವೆ /ಮೊಗದಲ್ಲಿ ಅರಳುತಿದೆ ಹೂವಂಥ ನಗುವು/ ಇದಕೆಲ್ಲ ಕಾರಣ ನೀನಾ ಹೇಳು/ ಕಣ್ಣಲ್ಲಿ ಜಿನುಗುತ್ತಿದೆ ಕನಸುಗಳ ಮಣಿಯೇ/ ಇದಕೆಲ್ಲ ನೀನಾ ಕಾರಣ ಹೇಳು…’ ಗಾಯಕಿ ಅಂಕಿತಾ ಕುಂಡು (Ankita Kundu) ಹಾಡಿರುವ ರಿಚ್ಚಿ  (Richie) ಸಿನೆಮಾದ ಈ ಹಾಡು ನಾಳೆ (ಆ.8) ಬಿಡುಗಡೆಯಾಗಲಿದೆ. ಈ ಹಾಡಿನ ಟ್ರೇಲರ್​ ಇದೀಗ ಸಾಮಾಜಿಕ ಜಾಲತಾಣಿಗರಲ್ಲಿ ತನ್ನ ಮಧುರತೆಯಿಂದಾಗಿ ಗುಂಗು ಹಿಡಿಸುತ್ತಿದೆ.

ಝೀ ಟಿವಿ ಸಾರೆಗಮಪ ಲಿಟಲ್​ ಚಾಂಪ್ಸ್​ ಮೂಲಕ ಕನ್ನಡಿಗರಿಗೆ ಪರಿಚಯವಾದ ಅಂಕಿತಾ ಮೂಲತಃ ಬೆಂಗಾಲಿಯವರು. ಬೆಂಗಳೂರಿನಲ್ಲಿ ವಾಸವಾಗಿರುವ ಇವರು ಪಿಇಎಸ್ ಕಲಾಪ್ರದರ್ಶನ ವಿಷಯದಲ್ಲಿ ಪದವಿ ಓದುತ್ತಿದ್ದಾರೆ. ಕಲೆಯಲ್ಲಿ ಅಪಾರ ಆಸಕ್ತಿ ಬೆಳೆಸಿಕೊಂಡ ಇವರನ್ನು ಇವರ ಅಭಿರುಚಿ, ಆಸಕ್ತಿ, ಅಭಿವ್ಯಕ್ತಿಗಳ ಕುರಿತು ನೆಟ್ಟಿಗರು ಆಗಾಗ ಟ್ರೋಲ್ ಮಾಡುವುದು ವಿಷಾದನೀಯ.

ಇದನ್ನೂ ಓದಿ : Viral Optical Illusion: ಬಾರ್ಬಿ; ಕಣ್ಣುಮುಚ್ಚಿ ನೋಡಿದರೆ ಮಾತ್ರ ಈ ಚಿತ್ರದೊಳಗಿನ ಪಾತ್ರ ಕಾಣುತ್ತದೆ

ಈತನಕ ನಾ ನಿನ್ನ ಕಾವಲುಗಾರ, ಹಿಡಿಯಷ್ಟೇ ಇರುವೆ, ಓ ಹೃದಯವೇ, ಓಹ್ ನನ್ನ ಅಕ್ಷರಾ, ಹೇ ಸಜ್ಜನಾ, ಮನಸಾ ಬಿಚ್ಚಿ, ನಿನ್ನೊಲವೇ ನನ್ನ ಗೆಲುವು, ಅವಳ ಸೆರೆಯಾಗಿದೆ, ಹೇ ಹೃದಯವೇ ಚೂರು, ನೀನೇ ಬೇಕು, ನಲ್ಮೆಯ ನಾಯಕ, ಜೈ ಜವಾನ್, ಜೈಕಿಸಾನ್, ಒಂದಲ್ಲಾ ಸಾವಿರ, ಅಪ್ಪಾ ನೀನಾದ್ರೆ ಮುಂತಾದ ಹಾಡುಗಳಿಗೆ ಅಂಕಿತಾ ಧ್ವನಿಯಾಗಿದ್ದಾರೆ. ಇದೀಗ ರಿಚ್ಚಿಯ ಈ ಹಾಡು ಕೂಡ ಅತ್ಯಂತ ಮಧುರವಾಗಿ ಮೂಡಿ ಬಂದಿದೆ.

ಇದನ್ನೂ ಓದಿ : Viral Video: ವೊರ್ಲಿ ಲಿಂಕ್​ನಿಂದ ಗೇಟ್​ವೇ ಆಫ್​ ಇಂಡಿಯಾ; 36 ಕಿಮೀ ಈಜಿ ತಲುಪಿದ ಸುಚೇತಾ ಬರ್ಮನ್

ಇದೀಗ ಅಂಕಿತಾ ಹಾಡಿರುವ ಲವ್ ಸಸ್ಪೆನ್ಸ್​ ಥ್ರಿಲ್ಲರ್​ ಕಥಾಹಂದರವಿರುವ ರಿಚ್ಚಿ ಕನ್ನಡ ಮತ್ತು ಹಿಂದಿಯಲ್ಲಿ ನಿರ್ಮಾಣವಾಗಿದ್ದು ಬಿಡುಗಡೆಗಾಗಿ ಕಾಯುತ್ತಿದೆ. ಹೊಸ ಪ್ರತಿಭೆ ರಿಚ್ಚಿ ಈ ಸಿನೆಮಾದ ನಾಯಕ ನಟ, ನಿರ್ದೇಶಕ ಮತ್ತು ನಿರ್ಮಾಪಕ. ಅಗಸ್ತ್ಯ ಸಂತೋಷ್​ ಸಂಗೀತ ನೀಡಿದ್ದಾರೆ. ಕುನಾಲ್ ಗಾಂಜಾವಾಲಾ, ಸೋನು ನಿಗಮ್​ ಮತ್ತು ಅಂಕಿತಾ ಕುಂಡು ಈ ಸಿನೆಮಾದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಸಾಹಿತ್ಯ ಗೌಸ್​ ಪೀರ್​, ಆನಂದ ಮತ್ತು ವಿನೋದ್ ಅವರದು. ನಟರಾಜ್, ಶ್ರದ್ಧಾ ಶ್ರೀನಾಥ್ ಮತ್ತು ಲಕ್ಷ್ಮಿ ಪ್ರಿಯಾ ಚಂದ್ರಮೌಳಿ ಪ್ರಮುಖ ತಾರಾಗಣದಲ್ಲಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 6:46 pm, Mon, 7 August 23