Viral Video: ಸಲೀಸಾಗಿ ಪರ್ಸ್​​ ಕದ್ದು ಪರಾರಿಯಾದ ಕಳ್ಳಿ; ಸಿಸಿಟಿವಿ ದೃಶ್ಯಾವಳಿ ಇಲ್ಲಿದೆ ನೋಡಿ

|

Updated on: Apr 02, 2024 | 6:24 PM

ಪಕ್ಕದಲ್ಲಿದ್ದ ಮಹಿಳೆಯ ಪರ್ಸ್‌ ಸಲೀಸಾಗಿ ತೆಗೆದು ತನ್ನ ಬ್ಯಾಗಿನಲ್ಲಿ ಇಟ್ಟುಕೊಳ್ಳುತ್ತಾಳೆ. ಇದಾದ ನಂತರ ಏನು ತಿಳಿಯದಂತೆ ಅಂಗಡಿಯಿಂದ ಹೊರಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

Viral Video: ಸಲೀಸಾಗಿ ಪರ್ಸ್​​ ಕದ್ದು ಪರಾರಿಯಾದ ಕಳ್ಳಿ; ಸಿಸಿಟಿವಿ ದೃಶ್ಯಾವಳಿ ಇಲ್ಲಿದೆ ನೋಡಿ
ROBBERY CAUGHT ON CCTV
Follow us on

ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಡಿಯೋಗಳು ವೈರಲ್​ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಮತ್ತೊಬ್ಬ ಮಹಿಳೆಯ ಪರ್ಸ್ ಕದಿಯುತ್ತಿರುವುದು ಕಂಡು ಬಂದಿದೆ. ವೀಡಿಯೊ ನೋಡಿದ ಮೇಲೆ ಎಷ್ಟು ಸಲೀಸಾಗಿ ಒಂಚೂರು ಅನುಮಾನ ಬಾರದಂತೆ ಪರ್ಸ್ ಕದ್ದು ಬಿಟ್ರಲ್ಲ ಅಂತ ನಿಮಗೆ ಆಶ್ಚರ್ಯವಾಗುವುದಂತೂ ಖಂಡಿತಾ.

ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಅನೇಕ ಜನರು ಅಂಗಡಿಯಲ್ಲಿ ಸಾಮಾನು ಖರೀದಿಸಲು ಬಂದಿರುವುದು ಕಂಡುಬರುತ್ತದೆ. ಒಬ್ಬ ಮಹಿಳೆ ತನ್ನ ಪತಿಯೊಂದಿಗೆ ಅಂಗಡಿಯ ಮುಂದೆ ನಿಂತಿರುವುದು ಕಾಣಬಹುದು. ಅಷ್ಟರಲ್ಲಿ ಅಲ್ಲಿಗೆ ಇನ್ನೊಬ್ಬ ಮಹಿಳೆ ಬರುತ್ತಾಳೆ ಮತ್ತು ಅವಳು ಬಂದ ತಕ್ಷಣ ಅಲ್ಲಿರುವ ಮಹಿಳೆಯ ಪರ್ಸ್‌ನ ಝಿಪ್​​ ಅನ್ನು ತೆರೆಯುತ್ತಾಳೆ. ಇದಾದ ನಂತರ ಅವಳು ಅಂಗಡಿಯವನಿಗೆ ಯಾವುದೋ ಸಾಮಾನುಗಳನ್ನು ತರಲು ಹೇಳುತ್ತಾಳೆ. ಅಂಗಡಿಯವನು ಬರುವ ಹೊತ್ತಿಗೆ, ಮಹಿಳೆಯು ಪಕ್ಕದಲ್ಲಿದ್ದ ಮಹಿಳೆಯ ಪರ್ಸ್‌ ಸಲೀಸಾಗಿ ತೆಗೆದು ತನ್ನ ಬ್ಯಾಗಿನಲ್ಲಿ ಇಟ್ಟುಕೊಳ್ಳುತ್ತಾಳೆ. ಇದಾದ ನಂತರ ಏನು ತಿಳಿಯದಂತೆ ಅಂಗಡಿಯಿಂದ ಹೊರಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಹುಟ್ಟು ಹಬ್ಬದಂದು ಕೇಕ್​ ತಿಂದ ಕೆಲ ಹೊತ್ತಿನಲ್ಲೇ ಬಾಲಕಿ ಸಾವು; ಕುಟುಂಬಸ್ಥರು ಅಸ್ವಸ್ಥ

ಈ ವೀಡಿಯೊವನ್ನು @theindiansarcasm ಎಂಬ ಇನ್ಟ್ಸಾಗ್ರಾಮ್​​ ಖಾತೆಯಲ್ಲಿ ಏಪ್ರಿಲ್​​ 2ರಂದು ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ಕೇವಲ 8 ಗಂಟೆಗಳಲ್ಲಿ 1ಮಿಲಿಯನ್​​ ಅಂದರೆ 10 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ