Robot : ರೋಬೋಟ್ಗಳು ವೈದ್ಯರಂತೆ ಶಸ್ತ್ರಚಿಕಿತ್ಸೆಯನ್ನು ಮಾಡುವುದನ್ನು ಕಲಿತವು. ಹೋಟೆಲ್ನಲ್ಲಿ ಅಡುಗೆ ಮಾಡುವುದನ್ನೂ ಮತ್ತು ಸರ್ವ್ ಮಾಡುವುದನ್ನೂ ಕಲಿತವು. ಈಗ ಸಂಗೀತ ಕ್ಷೇತ್ಷಕ್ಕೂ ಕಾಲಿಟ್ಟವು. ಜೂ. 30ರ ಸಂಜೆ ದಕ್ಷಿಣ ಕೊರಿಯಾ ರೋಮಾಂಚನದ ಕ್ಷಣಗಳಿಗೆ ಸಾಕ್ಷಿಯಾಯಿತು. ಕೊರಿಯಾ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (KITECH) ಅಭಿವೃದ್ಧಿಪಡಿಸಿದ ರೋಬೋಟ್ ಕಂಡಕ್ಟರ್ EveR 6 ಕೊರಿಯಾದ ನ್ಯಾಷನಲ್ ಥಿಯೇಟರ್ನ ವೇದಿಕೆಯ ಮೇಲಿದ್ದ ಆರ್ಕೆಸ್ಟ್ರಾ ತಂಡವನ್ನು ನಿರ್ವಹಿಸಿತು. ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಜನರು ಕುತೂಹಲದಿಂದ ಹೊಸ ಮ್ಯೂಸಿಕ್ ಕಂಡಕ್ಟರ್ ಮತ್ತದರ ಜಾಣ್ಮೆಯನ್ನು ಪದೇ ಪದೇ ನೋಡುತ್ತಿದ್ದಾರೆ.
ರೋಬೋಟ್ ಕಂಡಕ್ಟರ್ ವೇದಿಕೆಗೆ ಬಂದೊಡನೆ ನೆರೆದ ಪ್ರೇಕ್ಷಕರಿಗೆ ನಮಸ್ಕರಿಸಿ ವಾದ್ಯವೃಂದವನ್ನು ನಿರ್ವಹಿಸಲು ತೊಡಗಿಕೊಂಡಿತು. ‘ಈ ಮ್ಯೂಸಿಕ್ ಕಂಡಕ್ಟರ್ ನಾವು ನಿರೀಕ್ಷಿಸಿದ್ದಕ್ಕಿಂತ ಅತ್ಯುತ್ತಮವಾದ ಆಂಗಿಕ ಚಲನೆಗಳ ಮೂಲಕ ಈ ವಾದ್ಯವೃಂದವನ್ನು ನಿರ್ವಹಿಸಿದೆ. ಹಾಗೆಂದು ದೋಷಗಳು ಇಲ್ಲವೆಂದೇನಿಲ್ಲ, ಇನ್ನೂ ಸಾಕಷ್ಟು ಕೆಲಸ ಬಾಕೀ ಇದೆ’ ಎಂದು KITECH ತಂಡದ ಚೋಯ್ ಸೂ ಯೌಲ್ ಹೇಳಿದ್ದಾರೆ. ಈ ವಿಡಿಯೋ ಅನ್ನು ಕೊರಿಯಾದ ನ್ಯಾಷನಲ್ ಥಿಯೇಟರ್ ತನ್ನ ಯೂಟ್ಯೂಬ್ನಲ್ಲಿ ಹಂಚಿಕೊಂಡಿದೆ.
ಇದನ್ನೂ ಓದಿ : Viral Video: ಮನುಷ್ಯರೇ, ಬದುಕಿನ ಬ್ಯಾಲೆನ್ಸ್ ಸೂತ್ರವೂ ಇದೇ; ದಂಡಿಸಿ ದೇಹವನ್ನೂ ಮನಸ್ಸನ್ನೂ
ಪ್ರೇಕ್ಷಕರೊಬ್ಬರು, EveR 6 ನ ಕೌಶಲವು ಇನ್ನೂ ಪ್ರಾಥಮಿಕ ಮಟ್ಟದಲ್ಲಿ ಇದೆ. ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ಸಂಗೀತವನ್ನು ಅರ್ಥೈಸಿಕೊಳ್ಳಲು ಮತ್ತು ವಿಶ್ಲೇಷಿಸಲು ಮುಂದಿನ ದಿನಗಳಲ್ಲಿ ಇದಕ್ಕೆ ಸಾಧ್ಯವಾಗಬಹುದು ಎಂದುಕೊಂಡಿದ್ದೇನೆ’ ಎಂದಿದ್ಧಾರೆ. ಸುಮ್ಮನೇ ಬುದ್ಧಿಶಕ್ತಿಯನ್ನು ವ್ಯರ್ಥ ಮಾಡಲಾಗಿದೆ. ಶಾಸ್ತ್ರೀಯ ಕಲೆಯನ್ನು ಹೀಗೆಲ್ಲ ಯಂತ್ರಗಳ ಮೂಲಕ ನಿರೂಪಿಸಲು ಸಾಧ್ಯವಿಲ್ಲ ಎಂದಿದ್ದಾರೆ ನೆಟ್ಟಿಗರೊಬ್ಬರು.
ಇದನ್ನೂ ಓದಿ : Viral Video: ‘ಐ ಕೇಮ್ ಫ್ರಂ ಹನೇಹಳ್ಳಿ’; ಈ ಅಪ್ಪಟ ಅವಿದ್ಯಾವಂತನ ಗಂಟಲೋಳ್ ಇಳಿದ ಇಂಗ್ಲಿಷ್
ಇದು ಭಾವಸಂವೇದನೆಯನ್ನು ಅರ್ಥ ಮಾಡಿಕೊಳ್ಳಬಲ್ಲುದೆ? ಎಂದು ಕೇಳಿದ್ಧಾರೆ ಮತ್ತೊಬ್ಬರು. ಸಂಗೀತ ಬೇಕಿರುವುದು ಪರಸ್ಪರ ಮನುಷ್ಯಸ್ಪಂದನಕ್ಕೆ. ಅದುಬಿಟ್ಟು ಹೀಗೆ ಯಂತ್ರಗಳನ್ನು ಅಳವಡಿಸುವುದು ಎಷ್ಟು ಉಚಿತ? ಎಂದು ಕೇಳಿದ್ದಾರೆ ಮಗದೊಬ್ಬರು. ಗ್ರೇಟ್! ಸಂಗೀತ ಕ್ಷೇತ್ರಕ್ಕೂ ರೋಬೋಟ್ಗಳು ಕಾಲಿಡುತ್ತಿವೆ. ಸಂಗೀತವನ್ನು ಮತ್ತಷ್ಟು ಹೃದಯಕ್ಕೆ ತಲುಪಿಸುವಲ್ಲಿ ಇವುಗಳು ಶ್ರಮಿಸುತ್ತವೆಯೋ, ಮುಂದಿನ ದಿನಗಳಲ್ಲಿ ಈ ಬಗ್ಗೆ ಕುತೂಹಲವಿದೆ ಎಂದು ಇನ್ನೂ ಒಬ್ಬರು ಹೇಳಿದ್ದಾರೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ