Royal Enfield Himalayan 450 : ಐಷರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಿದ್ಧಾರ್ಥ್ ಲಾಲ್ ಸಾಮಾಜಿಕ ಮಾಧ್ಯಮದಲ್ಲಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ರ ಅಧಿಕೃತ ಟೀಸರ್ ಬಿಡುಗಡೆ ಮಾಡಿದ್ದಾರೆ. ಕಂಪನಿಯು ಇದೇ ತಿಂಗಳಲ್ಲಿ ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಹಂಟರ್ 350 ಅನ್ನು ಬಿಡುಗಡೆ ಮಾಡಿತ್ತು. ಇದೀಗ ಎರಡನೇ ಬೈಕ್ ರಾಯಲ್ ಎನ್‌ಫೀಲ್ಡ್ 450 ಅನ್ನು ಇನ್ನೇನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಮುಂದಿನ ವರ್ಷದ ಆರಂಭದಲ್ಲಿ ಭಾರತದ ಮಾರುಕಟ್ಟೆಗೆ ಈ ಬೈಕ್ ಬರುವ ನಿರೀಕ್ಷೆ ಇದೆ.
Royal Enfield Himalayan 450ನಲ್ಲಿ 450 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಫ್ಯುಯೆಲ್ ಇಂಜೆಕ್ಟೆಡ್ ಇಂಜಿನ್ ಇರುತ್ತದೆ. ಆದರೆ ಬೈಕ್ನ ಪವರ್ ಬಗ್ಗೆ ಅಷ್ಟಾಗಿ ಮಾಹಿತಿ ಲಭ್ಯವಾಗಿಲ್ಲ. 40 Bhp ಶಕ್ತಿ ಮತ್ತು 45 Nm ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ ಎಂಬ ಅಂದಾಜಿದೆ. ಈ ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ಗೆ ಜೋಡಣೆಯಾಗಿರುವುದರ ಜೊತೆಗೆ ದೊಡ್ಡ ಇಂಧನ ಟ್ಯಾಂಕ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿರುವ ಸಾಧ್ಯತೆ ಇದೆ.
ಹಿಮಾಲಯನ್ 450 ಕಡಿದಾದ ಮತ್ತು ದುರ್ಗಮ ರಸ್ತೆಗಳ ಪ್ರಯಾಣವನ್ನು ಗಮನದಲ್ಲಿಟ್ಟುಕೊಂಡು ತಯಾರಿಸಿದ ಬೈಕ್ ಆಗಿದೆ. ಇದಕ್ಕೆ ಅರ್ಬನ್ ಸ್ಕ್ರಾಂಬ್ಲರ್ ಅನ್ನು ಅಳವಡಿಸಲಾಗುತ್ತದೆ. ಆದ್ದರಿಂದ ಆಫ್-ರೋಡ್ ಟ್ರಯಲ್‌ಗೆ ಈ ಬೈಕ್ ಹೇಳಿಮಾಡಿಸಿದಂತಿದೆ. ಇದರ ಬೆಲೆಯ ಸಾಧ್ಯತೆ ಸುಮಾರು ರೂ. 3 ಲಕ್ಷ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:09 am, Wed, 24 August 22