Viral: ಪ್ರಬಲ ಭೂಕಂಪದ ನಡುವೆಯೂ ರೋಗಿಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು, ವಿಡಿಯೋ ವೈರಲ್

ರಷ್ಯಾದ ಕಮ್ಚಟ್ಕಾ ದ್ವೀಪದಲ್ಲಿ 8.8 ತೀವ್ರತೆಯ ಪ್ರಬಲ ಭೂಕಂಪ ಜುಲೈ 30ರಂದು ಸಂಭವಿಸಿತ್ತು. ಈ ವೇಳೆ ವೈದ್ಯರು ರೋಗಿಯನ್ನು ರಕ್ಷಿಸಲು ಒದ್ದಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆಯನ್ನು ಪಡೆದುಕೊಂಡಿದೆ. ಈ ಬಗ್ಗೆ ಅನೇಕ ಎಕ್ಸ್​​ ಬಳಕೆದಾರರು ಕಾಮೆಂಟ್​​ ಮಾಡಿದ್ದು, ರೋಗಿಯನ್ನು ಉಳಿಸಿಕೊಳ್ಳಲು ವೈದ್ಯರು ಮಾಡಿದ ಸೇವೆಗೆ ಮೆಚ್ಚುಗೆ ಸೂಚಿಸಿದ್ದಾರೆ.

Viral: ಪ್ರಬಲ ಭೂಕಂಪದ ನಡುವೆಯೂ ರೋಗಿಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು, ವಿಡಿಯೋ ವೈರಲ್
ವೈರಲ್​​​ ವಿಡಿಯೋ

Updated on: Jul 31, 2025 | 6:17 PM

ರಷ್ಯಾ, ಜುಲೈ 31:  ರಷ್ಯಾದ (Russia) ಕಮ್ಚಟ್ಕಾ ದ್ವೀಪದಲ್ಲಿ ನೆನ್ನೆ (ಜು.30) 8.8 ತೀವ್ರತೆಯ ಪ್ರಬಲ ಭೂಕಂಪ(Earthquake) ಸಂಭವಿಸಿತ್ತು. ಭೂಕಂಪದ ನಂತರ, ಸಾಗರದಲ್ಲಿ ಭಾರಿ ಸುನಾಮಿ ಎದ್ದಿದೆ. ಇದರಿಂದ ಅಲ್ಲಿನ ಜನರನ್ನು ಅಲ್ಲಿಂದ ಸ್ಥಳಾಂತರಿಸಲಾಗಿತ್ತು. ಇದೀಗ ಇದರ ನಡುವೆ ವಿಡಿಯೋವೊಂದು ವೈರಲ್​​ ಆಗಿದೆ. ಭೂಕಂಪ ನಡುವೆಯೂ ತಮ್ಮ ಪ್ರಾಣವನ್ನು ಲೆಕ್ಕಿಸದೆ ತಮ್ಮ ರೋಗಿಗೆ ಶಸ್ತ್ರಚಿಕಿತ್ಸೆಯನ್ನು ಇಲ್ಲಿನ ವೈದ್ಯರು ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋ ನೋಡಿ ವೈದ್ಯರ ಸೇವೆಗೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇನ್ನು ಈ ವಿಡಿಯೋದಲ್ಲಿ ಭೂಕಂಪದಿಂದ ಆಸ್ಪತ್ರೆ ಅಲುಗಾಡುತ್ತಿದೆ. ಇದರ ನಡುವೆಯೂ ವೈದ್ಯರು ರೋಗಿಯನ್ನು ಹಿಡಿದುಕೊಂಡು ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಈ ವಿಡಿಯೋ ಎಕ್ಸ್​​​​​​ ಖಾತೆಯಲ್ಲಿ ಮರುಹಂಚಿಕೊಳ್ಳಲಾಗಿದ್ದು, 14 ವರ್ಷಗಳಲ್ಲಿ ಜಗತ್ತು ಕಂಡ ಅತ್ಯಂತ ಪ್ರಬಲವಾದ ಭೂಕಂಪ ಇದು. ವೀಡಿಯೊದಲ್ಲಿ, ವೈದ್ಯರು ಭೂಕಂಪನದ ನಡುವೆಯೂ ಸ್ಥಿರವಾಗಿ ಇರುವಂತೆ ಹಾಗೂ ಯಾರು ಭಯಪಡದಂತೆ ಹೇಳಿ, ರೋಗಿಗೆ ಚಿಕಿತ್ಸೆಯನ್ನು ನೀಡುತ್ತಾರೆ. ಆಪರೇಷನ್​​​ ಕೊಠಡಿ ಅಲುಗಾಡುತ್ತಲೇ ಇತ್ತು. ಅದರೂ ತಮ್ಮ ಕರ್ತವ್ಯವನ್ನು ಮರೆಯದೇ ಅಲ್ಲಿದ್ದ ರೋಗಿದೆ ಸರಿಯಾದ ಚಿಕಿತ್ಸೆ ನೀಡುವುದನ್ನು ಕಾಣಬಹುದು. ಪೆಟ್ರೋಪಾವ್ಲೋವ್ಸ್ಕ್-ಕಾಮ್ಚಾಟ್ಸ್ಕಿಯಲ್ಲಿ ಪ್ರಬಲ ಭೂಕಂಪದ ಸಂದರ್ಭದಲ್ಲಿ ವೈದ್ಯರು ರೋಗಿಗೆ ಶಸ್ತ್ರಚಿಕಿತ್ಸೆ ಮುಂದುವರೆಸಿದ್ದಾರೆ ಎಂದು ಆರೋಗ್ಯ ಸಚಿವ ಒಲೆಗ್ ಮೆಲ್ನಿಕೋವ್ ತಮ್ಮ ಟೆಲಿಗ್ರಾಮ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ
ವಾಕಿಂಗ್‌ ಹೊರಟಿದ್ದ ಮಹಿಳೆಯ ಮೇಲೆ ಏಕಾಏಕಿ ದಾಳಿ ಮಾಡಿದ ಸಾಕು ನಾಯಿ
16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣ ಉಪಯೋಗಿಸುವಂತಿಲ್ಲ
ಭಿಕ್ಷೆ ಬೇಡಿ ಈ ವ್ಯಕ್ತಿ ಸಂಪಾದಿಸಿದ ಒಟ್ಟು ಆಸ್ತಿ ಎಷ್ಟು ಗೊತ್ತಾ?
ನಡು ರಸ್ತೆಯಲ್ಲಿಯೇ ಬಾಲಕಿಗೆ ಮುತ್ತಿಟ್ಟು ಎಸ್ಕೇಪ್‌ ಆದ ವ್ಯಕ್ತಿ

ಇದನ್ನೂ ಓದಿ: ಮಳೆಯ ಮಧ್ಯೆ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಯೋಗ ಮಾಡಿದ ವೃದ್ಧ ವ್ಯಕ್ತಿ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಅನೇಕ ಬಳಕೆದಾರರು ವೈದ್ಯರ ಈ ವೃತ್ತಿ ಸೇವೆ ಹಾಗೂ ಧೈರ್ಯವನ್ನು ಶ್ಲಾಘಿಸಿದ್ದಾರೆ. ವೈದ್ಯರ ಧೈರ್ಯ ಅದ್ಭುತವಾಗಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಇಂತಹ ಸೇವೆಯನ್ನು ಮಾಡಿದ್ದಾರೆ ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ. ಇಂತಹ ವೈದ್ಯರಿಗೆ ಪ್ರಶಸ್ತಿಯನ್ನು ನೀಡಬೇಕು. ಭೂಕಂಪದ ಸಮಯದಲ್ಲೂ ರೋಗಿಯನ್ನು ಕಾಪಾಡುವ ಧೈರ್ಯಕ್ಕೆ ಉಕ್ಕಿನ ನರಗಳು ಬೇಕು ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ. ಇನ್ನು ಕೆಲವರು ತಮ್ಮ ರೋಗಿಗಳನ್ನು ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಕ್ಕಾಗಿ ವೈದ್ಯರನ್ನು ಶ್ಲಾಘಿಸಿದರು. ಇಂತಹ ಕಠಿಣ ಸಮಯದಲ್ಲೂ ರೋಗಿಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸಿದ್ದಾರೆ. ಇಂತಹ ವೈದ್ಯರು ಬೇಕು ಎಂಬು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ