Russia: ಈ ಮರಿಯ ಅಮ್ಮ ಇದನ್ನು ಹೀಗೆ ಯಾಕೆ ಬಿಟ್ಟು ಹೋದಳೋ ಗೊತ್ತಿಲ್ಲ. ಕಣ್ಣುತೆರೆಯದ ಹಸುಗೂಸು ಮಣ್ಣಮೆತ್ತಿಕೊಂಡು ನಡುದಾರಿಯಲ್ಲಿ ಬಿದ್ದಿದೆ. ಈ ಮಹಿಳೆ ಬೆಕ್ಕಿನಮರಿಯೆಂದು ಅದನ್ನೆತ್ತಿಕೊಂಡು ಮನೆಗೆ ಬಂದಿದ್ದಾಳೆ. ಮನೆಯ ನಾಯಿ ಕೂಡ ಈ ಅನಾಥ ಮರಿಯನ್ನು ತನ್ನದೇ ಮರಿಯೆಂಬಂತೆ ಪೋಷಿಸಿದೆ. ಬೆಳೆಯುತ್ತ ಹೋದಂತೆ ಅದು ಬೆಕ್ಕಲ್ಲ ಕರಿಚಿರತೆ (Black Panther) ಮರಿ ಎನ್ನುವುದು ಆಕೆಗೆ ಅರಿವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದ ನೆಟ್ಮಂದಿ ಅಬ್ಬಬ್ಬಾ ಎಂದು ಬಾಯಿ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ. ರಷ್ಯಾದ ಮಹಿಳೆಯ ಪ್ರಾಣಿಪ್ರೀತಿ, ಸಹಾನುಭೂತಿಯನ್ನು ಕಂಡು ಅಚ್ಚರಿಗೊಳ್ಳುತ್ತಿದ್ದಾರೆ.
ಇದನ್ನೂ ಓದಿ : Viral Video: ರೀಲ್ಮಂದಿ; ಮೆಟ್ರೋದಲ್ಲಿ ಲಗಾಟಿ ಹೊಡಿಯಲು ಹೋಗಿ ಏನಾಯಿತು ನೋಡಿ
@factmayor ಎಂಬ ಇನ್ಸ್ಟಾಗ್ರಾಂ ಖಾತೆದಾರರು ಇದನ್ನು ಪೋಸ್ಟ್ ಮಾಡಿದ್ದಾರೆ. ಮೂಲದಲ್ಲಿ ಇದನ್ನು @luna_the_pantera ಎಂಬ ಖಾತೆಯಿಂದ ಅಪ್ಲೋಡ್ ಮಾಡಲಾಗಿದೆ. ಸೆ. 21 ರಂದು ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ 10 ಮಿಲಿಯನ್ಗಿಂತ ಹೆಚ್ಚು ಜನರು ನೋಡಿದ್ದಾರೆ. ಲೂನಾ, ವೆಂಝಾ ಮತ್ತು ನೀವು ಮೂವರು ಅದೃಷ್ಟವಂತರು, ಒಟ್ಟಿಗೇ ಬದುಕುತ್ತಿದ್ದೀರಿ. ನಿಮಗೆ ಒಳ್ಳೆಯದಾಗಲಿ ಎಂದು ಹರಸಿದ್ದಾರೆ ನೆಟ್ಟಿಗರು.
ನಿಮ್ಮ ಮನೆಗೆ ಬಂದ ಯಾರಿಗೇ ಆಗಲಿ ಮೊದಲಿಗೆ ಇದೊಂದು ಕಾವಲುನಾಯಿ ಎನ್ನಿಸಬಹುದು. ಹತ್ತಿರ ಹೋದಾಗಲೇ ಇದೊಂದು ಕರಿಚಿರತೆ ಎಂಬ ಅರಿವಾಗುವುದು ಎಂದಿದ್ದಾರೆ ಒಬ್ಬರು. ನಿಜಕ್ಕೂ ಇದು ಅದ್ಭುತವಾಗಿದೆ ಎಂದಿದ್ದಾರೆ ಇನ್ನೊಬ್ಬರು. ಈ ಮಗುವಿನ ಜೀವ ಉಳಿಸಿದ್ದಕ್ಕೆ ನಿಮಗೆ ಧನ್ಯವಾದ ಎಂದಿದ್ದಾರೆ ಹಲವಾರು ಜನರು. ಈ ಬಾಂಧವ್ಯ ನಿಜಕ್ಕೂ ಅದ್ಭುತವಾಗಿದೆ, ನೀವೆಲ್ಲರೂ ಒಟ್ಟಿಗೇ ಇರುವುದು ಇನ್ನೂ ಸಂತೋಷ ಎಂದಿದ್ದಾರೆ ಒಂದಿಷ್ಟು ಜನ.
ಲೂನಾ ಹೀಗೆ ಸತತ ನೆಕ್ಕುತ್ತಿರುವುದು ವೆಂಝಾಳಿಗೆ ಇಷ್ಟವೆ? ಅಥವಾ ಸಹಿಸಿಕೊಳ್ಳುತ್ತಿದ್ದಾಳೆಯೇ? ಎಂದು ಕೇಳಿದ್ದಾರೆ ಒಬ್ಬರು. ನಿಮ್ಮ ನೆರೆಹೊರೆಯವರೊಂದಿಗೆ ಇವರಿಬ್ಬರೂ ಹೊಂದಿಕೊಳ್ಳುತ್ತಾರಾ? ಎಂದು ಕೇಳಿದ್ದಾರೆ ಇನ್ನೂ ಕೆಲವರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:25 am, Tue, 26 September 23