Samsung Galaxy F12 ಪರಿಚಯಿಸುತ್ತಿದೆ #FullOnFab ಅನುಭವ ನೀಡುವ True 48MP Camera. ಅಷ್ಟೇ ಅಲ್ಲ 90Hz refresh rate ನೊಂದಿಗೆ ಸಲೀಸಾದ ಸ್ಕ್ರೋಲಿಂಗ್!
ಇಂದಿನ ಮಾಹಿತಿ ಜಗತ್ತಿನಲ್ಲಿ ಜನ್ಮತಾಳಿ ತಂತ್ರಜ್ಞಾನವನ್ನೇ ಉಸಿರಾಡುತ್ತಾ ಬೆಳೆದಿರುವ ಇಂದಿನ ಯುವಪೀಳಿಗೆಗೆ ಸ್ಮಾರ್ಟ್ ಫೋನ್ ಬದುಕಿನ ಅವಿಭಾಜ್ಯ ಅಂಗವಾಗಿದೆ. ಪ್ರಸ್ತುತ ಪ್ರಪಂಚದಲ್ಲಿ ಸ್ಮಾರ್ಟ್ ಫೋನ್ ಅಗತ್ಯ ಅನ್ನುವುದಕ್ಕಿಂತ ಅನಿವಾರ್ಯ ಅನ್ನಬಹುದು. ಈ ಪೀಳಿಗೆಯವರನ್ನು ಕೇವಲ ಟೆಕ್ ಸ್ಯಾವಿ ಎಂದಷ್ಟೇ ಹೇಳಲಾಗದು. ಡಿಜಿಟಲ್ ಜಗತ್ತಿನೊಳಗೆ ಅವರಿದ್ದಾರೆ ಅನ್ನುವುದಕ್ಕಿಂತ ಝೆಡ್ (Z) ಪೀಳಿಗೆಯ ಯುವಜನತೆಯ ಬದುಕಿನಲ್ಲಿ ಡಿಜಿಟಲ್ ಜ್ಞಾನ, ತಂತ್ರಜ್ಞಾನ ಹಾಸುಹೊಕ್ಕಾಗಿದೆ.
Neilsen ಸಮೀಕ್ಷೆ ಪ್ರಕಾರ ಸುಮಾರು 83% ಜನರು ಸ್ಮಾರ್ಟ್ ಫೋನ್ ನೊಂದಿಗೆ ಜೀವಿಸುತ್ತಾರೆ ಎಂಬುದು ಆಶ್ಚರ್ಯಕರ ಹಾಗೂ ಆಸಕ್ತಿದಾಯಕ ಸಂಗತಿ. ಈ ಹೊಸ ಪೀಳಿಗೆಗೆ ಸ್ಮಾರ್ಟ್ ಫೋನ್ “ಸೆಕೆಂಡ್ ನೇಚರ್”. ಅವರು ನೈಜ ಪ್ರಪಂಚದಲ್ಲಿ ಎಷ್ಟು ಜೀವಿಸುತ್ತಾರೋ ಅದಕ್ಕಿಂತ ಹೆಚ್ಚಿನ ಸಮಯ ಸ್ಮಾರ್ಟ್ ಫೋನ್ ಮೂಲಕ ಭ್ರಮಾ ಪ್ರಪಂಚದಲ್ಲಿರುತ್ತಾರೆ. ಈ ಸ್ಮಾರ್ಟ್ ಹಾಗೂ ಫಾಸ್ಟ್ ಪೀಳಿಗೆಯವರು ತೀಕ್ಷ್ಣಮತಿಗಳು. ಜೀವನ ಶೈಲಿಗೆ ಸೂಕ್ತವಾಗಿರುವ ಸ್ಮಾರ್ಟ್ ಫೋನ್‌ಗಳ ಕಡೆಗೇ ಅವರ ಚಿತ್ತ.
ಪ್ರಪಂಚದಾದ್ಯಂತ ಈ ಪೀಳಿಗೆಯವರೇ ಸಾಮಾಜಿಕ ಮಾಧ್ಯಮ ಬಳಕೆಯ ಸ್ವರೂಪವನ್ನೇ ಪರಿವರ್ತಿಸಿದ್ದು. ಇವರು ವಿಷಯಗಳ ಸೃಷ್ಟಿಕರ್ತರು. ಇವರು ಸೆರೆ ಹಿಡಿಯುವ ಛಾಯಾಚಿತ್ರಗಳು ಅತ್ಯಂತ ಸುಂದರ ಹಾಗೂ ನಯನಮನೋಹರ. ತಮ್ಮ ಆಸಕ್ತಿಯನ್ನು ಅರ್ಥೈಸಿಕೊಂಡು, ಬೇಕಾದ ಫೋಟೊಗಳನ್ನು ಸೆರೆಹಿಡಿಯಬಲ್ಲ ಸ್ಮಾರ್ಟ್ ಫೋನ್‌ಗಳ ನಿರೀಕ್ಷೆಯಲ್ಲೇ ಇವರು ಇರುತ್ತಾರೆ.
Samsung Galaxy F12 ಅನ್ನೊಮ್ಮೆ ನೋಡಿ. ಯುವ ಪೀಳಿಗೆಗೆ ಬೇಕಾದ ಎಲ್ಲಾ ಅಗತ್ಯಗಳನ್ನು ಸಾಕಾರಗೊಳಸಲೆಂದೇ ಬಂದಿದೆ. ಇದರ ವಿಶೇಷತೆ ಏನೆಂದರೆ #FullOnFab ಫೀಚರ್ ನೊಂದಿಗೆ ಬಹಳ ನಯವಾಗಿ ಅಮೋಘವಾದ ಫೋಟೋಗಳನ್ನು ಕ್ಲಿಕ್ಕಿಸುವುದು. ಇದು ದುಬಾರಿ ಅಲ್ಲ ಎಂಬ ಸಿಹಿ ಸುದ್ದಿಯೂ ಇಲ್ಲಿದೆ.
Fab Camera ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್‌ಗಳು ನಾವೀನ್ಯತೆಯಲ್ಲಿ ಎತ್ತಿದ ಕೈ. ಯಾವಾಗಲೂ ತನ್ನ ಗ್ರಾಹಕರ ನಿರೀಕ್ಷೆಗೂ ಮೀರಿ ಹೊಸ ಹೊಸ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಅಲ್ಲದೆ ಮೊಬೈಲ್ ಫೋಟೋಗ್ರಫಿಯಲ್ಲಿ ಹೊಸತನವನ್ನು ನೀಡುವ ಭರವಸೆ ಪ್ರತಿ ಆವೃತ್ತಿಯಲ್ಲಿ ತೋರ್ಪಡಿಸಿದೆ. ಅದೇ ಹಾದಿಯಲ್ಲಿ ಬಂದಿರುವ ಇನ್ನೊಂದು ಅದ್ಭುತ ಸ್ಯಾಮಸಂಗ್ ಕುಟುಂಬದ ಹೊಸ ಕುಡಿ Galaxy F12. ಇದು True 48MP main quad camera ದೊಂದಿಗೆ ನಿಮ್ಮ ದಿನದ ಪ್ರತಿಕ್ಷಣವನ್ನು ಸೆರೆಹಿಡಿದು ನವಿರಾದ ನೆನಪಿನ ಬುತ್ತಿಯನ್ನು ಸೃಷ್ಟಿಸುತ್ತದೆ.
ಹಿಂದೆಂದೂ ಕಂಡರಿಯದ ಸ್ಪಷ್ಟತೆ ಹಾಗೂ ವಿವರದೊಂದಿಗೆ ನೈಜ ಚಿತ್ರಣವೇ ಜೀವತಳೆದು ಬಂದಂತೆ ಭಾಸವಾಗುವ ಫೋಟೋಗಳನ್ನು ಕ್ಲಿಕ್ಕಿಸುತ್ತದೆ. ಹಗಲು-ರಾತ್ರಿ, ಗ್ರೀಷ್ಮ-ವಸಂತ ಯಾವುದೇ ಕಾಲದಲ್ಲಾಗಲಿ ನಿಮ್ಮ ಸೃಜನಾತ್ಮಕ ಅಭಿವ್ಯಕ್ತಿಗೆ ಇದು ಕನ್ನಡಿ. #FullOnFab smartphone ಅತ್ಯಂತ ಅದ್ಭುತವಾದ ಫೋಟೋಗಳನ್ನು ಕ್ಲಿಕ್ಕಿಸಿ ನಿಮ್ಮಲ್ಲಿ ಅಡಗಿರುವ ಕಲೆಗೆ ಅಭಿವ್ಯಕಿ ನೀಡುತ್ತದೆ. ಇನ್ನು ಮುಂದೆ ನೀವು grainy ಅಥವಾ blurry ಫೋಟೋಗಳನ್ನು ಕ್ಲಿಕ್ಕಿಸಬೇಕಿಲ್ಲ. ಯಾಕೆ ಗೊತ್ತಾ? ನೀವು ಜೀವಿಸಬೇಕಾದದ್ದು #FullOnFab ಜೀವನ ಅತ್ಯುತ್ತಮವಾದ True 48MP camera ಇರುವ ಸೂಪರ್ ಸ್ಪಷ್ಟತೆಯೊಂದಿಗಿನ Samsung Galaxy F12 ನೊಂದಿಗೆ.
ಬಣ್ಣದೋಕುಳಿಯನ್ನು ಪ್ರಾಕೃತಿಕವಾಗಿ ಸೃಷ್ಟಿಸುವ ಈ ಶರದ್ ಋತುವಿನಲ್ಲಿ ಹೊರಬಂದು ಆ ಸೌಂದರ್ಯನ್ನು ಸೆರೆಹಿಡಿಯುವುದಕ್ಕಿಂತ ಖುಷಿಕೊಡುವ ಸಂಗತಿ ಯಾವುದಿದೆ? ಚಿಂತಿಸಬೇಡಿ ನಿಮ್ಮ ಕನಸನ್ನು Samsung Galaxy F12 ನನಸಾಗಿಸುತ್ತದೆ. ಆ ಅದ್ಭುತ ಕ್ಷಣಗಳನ್ನು ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿಯಿರಿ. ಸದಾ better details in photos, brighter colours, zoom ಮಾಡಿದಾಗಲೂ ಚಿತ್ರದ ನೈಜತೆ ಕದಡದಿರುವ ಕಡಿಮೆ pixelation ಇರುವ ಫೋಟೊ ಸೆರೆಹಿಡಿದು ನಿಮ್ಮ ಸ್ಮರಣೆಯಲ್ಲಿ ಇರಿಸುತ್ತದೆ ಈ ಫೋನ್. ಈ ಚಿತ್ರಗಳು ನಿಮ್ಮ ಸೋಷಿಯಲ್ ಮೀಡಿಯಾ ವಾಲ್ ಮೇಲೆ ರಾರಾಜಿಸಿದರೆ comments ಹಾಗೂ DMs ಪ್ರವಾಹವನ್ನು ಎದುರಿಸಲು ಸಜ್ಜಾಗಿರಿ.
Fab Display ಬರೇ ಕ್ಯಾಮೆರಾ ಒಂದಕ್ಕೆ ಬೆರಗಾಗಬೇಡಿ. ಇದರ superlative display ಅನ್ನೊಮ್ಮೆ ನೋಡಿ. ನಿಮ್ಮಿಷ್ಟದ ವಿಷಯವನ್ನು ಹುಡುಕುವಾಗ ಆಚೀಚೆ ಇಣುಕುವ ಅವಶ್ಯಕತೆಯೇ ಇಲ್ಲ. ಫೋನ್ನಿಂದ ನಿಮ್ಮ ದೃಷ್ಟಿ ಹೊರ ನೆಡದಂತೆ 6.5″ HD+ Infinity V Display ಯೊಂದಿಗೆ super smooth 90Hz refresh rate ಕೂಡ ಇದ್ದು ಬಹಳ ಸರಾಗವಾಗಿ ಸ್ಕ್ರೀನ್ ಬಳಸಲು ಅವಕಾಶ ಕಲ್ಪಿಸಲಾಗಿದೆ. ನಿಮ್ಮ ಬೆರಳುಗಳು ಅನಾಯಾಸವಾಗಿ ಜಾರುವ ಅನುಭವಕೊಡುವಷ್ಟು ನಯವಾದ ಡಿಸ್ಪ್ಲೇ ವ್ಯವಸ್ಥೆ ಇದೆ. ಇದೋ 90Hz refresh rate ಇರುವ Samsung Galaxy F12 ನೊಂದಿಗೆ #FullOnFab ಜೀವನ ಜೀವಿಸಿ.
Gaming mode ಆನ್ ಮಾಡಿದರಂತೂ ಹಗಲು ರಾತ್ರಿಯ ಅರಿವಿಲ್ಲದೇ ಸತತವಾಗಿ ಆಟದಲ್ಲಿ ಮಗ್ನರಾಗಿ ಬಿಡುತ್ತೀರಿ. Lag-free gaming ನ ನೈಜ ಅನುಭವ ಪಡೆಯಬೇಕೆನ್ನುವುದು ಹಲವರ ಬಯಕೆ. ಈಗ ಇದನ್ನು ಸಾಧ್ಯವಾಗಿಸಿರುವುದು ತಂತ್ರಜ್ಞಾನದ ಅಚ್ಚರಿ Samsung Galaxy F12.ನಿಮ್ಮ ನೆಚ್ಚಿನ ಶೋ ನೋಡಲು ಕಾತರರಾಗಿದ್ದಾಗ ಲ್ಯಾಪ್ ಟಾಪ್ ಆನ್ ಮಾಡಲು ಆಲಸ್ಯವೆನಿಸುತ್ತದೆಯೇ? ಇನ್ನು ಚಿಂತಿಸಬೇಕಿಲ್ಲ. smartphone’s display and high refresh rate ನೊಂದಿಗೆ Samsung Galaxy F12 ಉತ್ಕೃಷ್ಟ ಗುಣಮಟ್ಟದ ನೋಡುವಿಕೆಯ ಅನುಭವ ನೀಡುತ್ತದೆ. ಆಮೇಲೆ ನಿದ್ದೆ ಕೆಡಿಸಿತು ಅಂತ ಮಾತ್ರ ನಮ್ಮನ್ನು ದೂಷಿಸುವ ಹಾಗೆ ಇಲ್ಲ. ನೋಡ ನೋಡುತ್ತಾ ಸಮಯ ಹೋಗಿದ್ದೇ ತಿಳಿಯದು.
ಇನ್ನು ವೈಶಿಷ್ಟ್ಯ ಎಂದರೆ..
ವಿಶೇಷ ಸಮಾಚಾರ ಒಂದಿದೆ. ಈ ಸ್ಯಾಮ್ಸಂಗ್ ಅದ್ಭುತ ರೂ. 10,000 ಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಸಿಗುತ್ತಿರುವುದು. ಆಶ್ಚರ್ಯವಾದರೂ ಸತ್ಯ. ಇನ್ಯಾಕೆ ತಡ? ಬನ್ನಿ ಇಂದು ಈ ಅಮೋಘ Samsung Galaxy F12 ಅನ್ನು ನಿಮ್ಮದಾಗಿಸಿಕೊಳ್ಳಿ. #FullOnFab ಜೀವನದ ಅದ್ಭುತ ಕ್ಷಣಗಳನ್ನು ಸಂಪೂರ್ಣವಾಗಿ ಸವಿಯಿರಿ.
ಈ ಸ್ಮಾರ್ಟ್ ಫೋನ್, Flipkart ಹಾಗೂ Samsung.com ನಲ್ಲಿ ಲಭ್ಯವಿದೆ. ಈ ಕೂಡಲೆ Flipkart ಹಾಗೂ Samsung.comಗಳಿಂದ ಸೂಚನೆ ಸ್ವೀಕರಿಸಲು ಅನುವು ಮಾಡಿಕೊಳ್ಳಿ. ಈ ಅಮೋಘ ಕ್ಷಣಗಳಿಗೆ ಇನ್ನು ಕೆಲವೇ ದಿನಗಳು ಬಾಕಿ. ಗಡಿಯಾರದ ಮುಳ್ಳು ಉತ್ಕರ್ಷದ ಘಳಿಗೆ ಎಡೆಗೆ ಓಡುತ್ತಿದೆ. ಏಪ್ರಿಲ್ 5, ಮಧ್ಯಾಹ್ನ12 ಗಂಟೆಗೆ ಬಹುನಿರೀಕ್ಷಿತ ಸ್ಮಾರ್ಟ್ ಫೋನ್ ಬಿಡುಗಡೆಯನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡಿ.
ಅಷ್ಟೆ ಅಲ್ಲ. ಇನ್ನಷ್ಟು ವಿಚಾರಗಳನ್ನು Samsung ತಿಳಿಸಲಿದೆ. ಕುತೂಹಲದಿಂದ ನಿರೀಕ್ಷಿಸಿ..
Published On - 3:12 pm, Sat, 3 April 21