Viral Video: ಹುಟ್ಟುಮಚ್ಚೆ; ಈ ‘ಸಂಜಯ’ನಿಂದಲೇ ಸಾಗರದ ‘ಮಂದಾರ’ ಅರಳಿದ ಕಥೆ ಇದು

|

Updated on: Sep 08, 2023 | 3:43 PM

Love: ಈ ವಿಡಿಯೋ ನೋಡಿದ ಮೇಲೆ ಅದೆಷ್ಟು ಜನರು ತಮ್ಮ ಮಕ್ಕಳಿಗೆ ಆಂತರಿಕ ಸೌಂದರ್ಯವನ್ನು ನೋಡುವ ಬಗೆಯನ್ನು ಕಲಿಸಿಕೊಟ್ಟಿದ್ಧಾರೆ ಮತ್ತು ಕಲಿಸುತ್ತಿದ್ದಾರೆ ಎನ್ನುವ ಗಂಭೀರ ಪ್ರಶ್ನೆ ಉಂಟಾಗುತ್ತದೆ. ಹುಟ್ಟಿನಿಂದಲೇ ಬಲಗೆನ್ನೆಯ ಮೇಲೆ ಕಪ್ಪುಮಚ್ಚೆ ಹೊಂದಿದ ಸಾಗರದ ಮಂದಾರ ಬಾಳಿನಲ್ಲಿ ಸಂಜಯ್​ ನಿಜಕ್ಕೂ ಬೆಳಕಿನಂತೆ ಬಂದ ಕಥೆ ಇದು.

Viral Video: ಹುಟ್ಟುಮಚ್ಚೆ; ಈ ಸಂಜಯನಿಂದಲೇ ಸಾಗರದ ಮಂದಾರ ಅರಳಿದ ಕಥೆ ಇದು
ಮಂದಾರ ಸಾಗರ ಮತ್ತು ಸಂಜಯ ದಂಪತಿ
Follow us on

Birth Mark : ‘ನಾನು ಶಿವಮೊಗ್ಗದ ಸಾಗರದವಳು. ಹುಟ್ಟಿನಿಂದಲೇ ನನ್ನ ಬಲಗೆನ್ನೆಯ ಮೇಲೆ ಕಪ್ಪನೆಯ ದೊಡ್ಡಮಚ್ಚೆ ಕಾಣಿಸಿಕೊಂಡಿತು. ಅದನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯಬಹುದೆ? ಎಂದು ಸಾಕಷ್ಟು ವೈದ್ಯರುಗಳನ್ನು ನನ್ನ ಅಪ್ಪ ಸಂಪರ್ಕಿಸಿದರು. ಆದರೆ ಹಾಗೆ ಮಾಡಿದರೆ ಕ್ಯಾನ್ಸರ್​ಗೆ (Cancer)ತುತ್ತಾಗುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದರು. ಅಲ್ಲದೆ ಬೆಳೆಯುತ್ತ ಹೋದಂತೆ ವಿಟಿಲಿಗೋದಿಂದ ಮೈಮೇಲೆ ಬಿಳಿಮಚ್ಚೆಗಳು ಕಾಣಿಸಿಕೊಂಡವು. ನಿನಗೆ ಒಳ್ಳೆಯ ಹುಡುಗ ಹೇಗೆ ಸಿಕ್ಕಾನು? ಎಂದು ಸಂಬಂಧಿಕರು ಮೂದಲಿಸತೊಡಗಿದರು. ಇನ್ನೇನು ಎಲ್ಲವೂ ಮುಗಿದೇ ಹೋಯಿತು ಎನ್ನುವಾಗ ಸಂಜಯ್​ ಪರಿಚಯವಾಯಿತು.’

ಇದನ್ನೂ ಓದಿ : Viral Video: ಮುಂಬೈ; ಯುವಕನ ಸಿಂಗಲ್​ ಬೆಡ್ರೂಮ್ ಪ್ಲ್ಯಾಟ್​​ ಟೂರ್​; ನೆಟ್ಟಿಗರ ಮಿಶ್ರಪ್ರತಿಕ್ರಿಯೆ

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ನನ್ನ ಮತ್ತು ಸಂಜಯ್​ ಮಧ್ಯೆ ಸ್ನೇಹ ಪ್ರೀತಿಗೆ ತಿರುಗಿತು. ಪ್ರೀತಿಯಲ್ಲಿ ಮತ್ತೆ ನಂಬಿಕೆಯನ್ನು ಹುಟ್ಟಿಸಿದ್ದೇ ಅವನು. ಬದುಕಿನುದ್ದಕ್ಕೂ ಅನುಭವಿಸಿದ ಅಭದ್ರತೆ ಮತ್ತು ಆತಂಕ ಮೆಲ್ಲನೆ ಕರಗತೊಡಗಿತು. ಇಬ್ಬರು ಜೊತೆಯಾಗಿ ಬಾಳಬೇಕು ಎಂದು ನಿರ್ಧರಿಸಿದಾಗ ಅವನ ಮನೆಯವರು ನಿರಾಕರಿಸಿದರು. ಆದರೆ, ಮೂರು ವರ್ಷಗಳ ನಂತರ ಮದುವೆಗೆ ಒಪ್ಪಿದರು. ನನ್ನ ಏರುಪೇರುಗಳೊಂದಿಗೆ ನನ್ನನ್ನು ಇಡಿಯಾಗಿ ಸ್ವೀಕರಿಸಿದ್ದಾನೆ ಸಂಜಯ. ಈ ಅನುಭವವನ್ನು, ಭಾವವನ್ನು ಈತನಕ ಯಾರೂ ಕೊಟ್ಟಿದ್ದಿಲ್ಲ.’ ಮಂದಾರ ಸಾಗರ.

ಮಂದಾರ ಮತ್ತು ಸಂಜಯರ ಪಯಣ ಇಲ್ಲಿದೆ

4 ತಾಸುಗಳ ಹಿಂದೆ officialpeopleofindia ಎಂಬ ಇನ್​ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈತನಕ ಸುಮಾರು 2 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. 50,000 ಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಈ ಜೋಡಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ ಅಭಿನಂದಿಸಿದ್ಧಾರೆ. ನಿಜವಾದ ಪ್ರೀತಿ ಮತ್ತೊಮ್ಮೆ ಸಾಬೀತಾಗಿದೆ ಎಂದಿದ್ದಾರೆ.

ಇದನ್ನೂ ಓದಿ :Viral Video: ಬೆಯಾನ್ಸ್​​ ಸಂಗೀತ ಕಛೇರಿಯಲ್ಲಿ ಮಹಿಳೆಯೊಬ್ಬಳಿಗೆ ಹೆರಿಗೆನೋವು; ಹೆಣ್ಣುಮಗು ಜನನ

ಆಂತರಿಕ ಸೌಂದರ್ಯವನ್ನು ಗುರುತಿಸುವ ಮನುಷ್ಯ ಈ ಜಗತ್ತಿನಲ್ಲಿ ಇದ್ಧಾನೆಯೇ? ಈತನಕ ಇದನ್ನು ನಂಬಲಾಗುತ್ತಿಲ್ಲ! ಎಂದು ಅಚ್ಚರಿಗೆ ಒಳಗಾಗಿದ್ಧಾರೆ ಒಬ್ಬರು. ಆದರೆ ಆಕೆ ಆ ಕಲೆಯಿದ್ದರೂ ಕೂಡ ಬಹಳ ಲಕ್ಷಣವಾಗಿಯೇ ಕಾಣುತ್ತಿದ್ದಾಳೆ ಎಂದಿದ್ದಾರೆ ಇನ್ನೊಬ್ಬರು. ನಿಮ್ಮ ನಗು ಅತ್ಯಂತ ಸುಂದರವಾಗಿದೆ, ಆ ಮಚ್ಚೆ ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:10 pm, Fri, 8 September 23