Onam : ಓಣಂ ಹಬ್ಬದ ದಿನ ಕೇರಳದಲ್ಲಿ ಬ್ಯಾಂಕ್ ಉದ್ಯೋಗಿಯೊಬ್ಬರು ಮಹಾಬಲಿಯಂತೆ ವೇಷ ಧರಿಸಿ ಬಂದು ಕರ್ತವ್ಯನಿರತರಾದ ವಿಡಿಯೋ ವೈರಲ್ ಆಗುತ್ತಿದೆ. ಹತ್ತು ದಿನಗಳ ಕಾಲ ಸಂಭ್ರಮದಿಂದ ಆಚರಿಸುವ ಓಣಂಗೆ ಅದರದೇ ಆದ ಪುರಾಣ ಐತಿಹ್ಯವಿದೆ. ಪ್ರತೀ ವರ್ಷ ತನ್ನ ಪ್ರಜೆಗಳನ್ನು ಕಾಣಲು ರಾಜ ಮಹಾಬಲಿ ಬರುತ್ತಾನೆ. ಅವನನ್ನು ಸ್ವಾಗತಿಸಲೆಂದು ಜನರು ಹಬ್ಬದ ಸಂಭ್ರಮದಲ್ಲಿ ತೊಡಗಿಕೊಳ್ಳುತ್ತಾರೆ. ಆಥಂದಿಂದ ಆರಂಭವಾಗಿ ಹತ್ತು ದಿನಗಳ ಕಾಲ ತಿರುವೋಣಂಗೆ ಇದು ಮುಕ್ತಾಯವಾಗುತ್ತದೆ. ಈ ಆಚರಣೆಯಿಂದ ಶುಭ ಪ್ರಾಪ್ತಿಯಾಗುತ್ತದೆ ಎಂಬ ಪ್ರತೀತಿ ಇದೆ. ಹಾಗಾಗಿ ಬ್ಯಾಂಕ್ ಗ್ರಾಹಕರಿಗೆಲ್ಲ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಬ್ಯಾಂಕ್ ಉದ್ಯೋಗಿ ಹೀಗೆ ಮಹಾಬಲಿಯಂತೆ ವೇಷ ಧರಿಸಿ ಬಂದರೋ!?
A staff of @TheOfficialSBI Tellicherry dispensing services at the counter dressed as the legendary King Mahabali whose yearly visits fall on the #Onam day. Kudos to his spirit and gumption ?? @opmishra64 #Kerala pic.twitter.com/jELIGsKowl
ಇದನ್ನೂ ಓದಿ— Nixon Joseph (@NixonJoseph1708) September 4, 2022
ಕೇರಳದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತಲಶ್ಶೇರಿಯ ಉದ್ಯೋಗಿಯೇ ವೇಷ ಧರಿಸಿ ಬಂದವರು. ಟ್ವಿಟರ್ನಲ್ಲಿ ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಅನ್ನು ನಿಕ್ಸನ್ ಜೋಸೆಫ್ ಭಾನುವಾರದಂದು ಹಂಚಿಕೊಂಡಿದ್ದಾರೆ. ‘ಎಸ್‌ಬಿಐ ಸಿಬ್ಬಂದಿಯೊಬ್ಬರು ರಾಜ ಮಹಾಬಲಿಯಂತೆ ವೇಷಧರಿಸಿ ಕೌಂಟರ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಈ ಉತ್ಸಾಹಕ್ಕೆ ಅಭಿನಂದನೆಗಳು’ ಎಂಬ ಒಕ್ಕಣೆ ಈ ವಿಡಿಯೋಗಿದೆ. ಇದು 32,000ಕ್ಕಿಂತಲೂ ಹೆಚ್ಚು ವೀಕ್ಷಣೆ ಪಡೆದಿದೆ. ಮೆಚ್ಚಿದವರ ಸಂಖ್ಯೆ ಇನ್ನೇನು 1,000ಕ್ಕೆ ತಲುಪಲಿದೆ.
ಗ್ರಾಹಕರು ಮಹಾಬಲಿ ವೇಷಧಾರಿ ಸಿಬ್ಬಂದಿಯೊಂದಿಗೆ ವ್ಯವಹರಿಸುವುದನ್ನು ನೆಟ್ಟಿಗರು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಹಬ್ಬದ ದಿನವೂ ವ್ಯಕ್ತಿಯ ವೃತ್ತಿಬದ್ಧತೆ ಅದ್ಭುತ!’ ಎಂದು ಟ್ವಿಟರ್ ಖಾತೆದಾರರು ಪ್ರತಿಕ್ರಿಯಸಿದ್ದಾರೆ. ಇನ್ನೊಬ್ಬರು, ‘ಬ್ಯಾಂಕ್ಗಳು ಹೀಗೆ ಎಲ್ಲ ಹಬ್ಬಗಳನ್ನೂ ಹೀಗೆ ಉತ್ಸಾಹದಿಂದ ಆಚರಿಸಬೇಕು’ ಎಂದಿದ್ದಾರೆ. ‘ಸಂಸ್ಕೃತಿ, ಸೇವೆ ಮತ್ತು ಮಾರ್ಕೆಟಿಂಗ್ ಈ ಮೂರನ್ನು ಸಂಯೋಜಿಸಿರುವ ಹೊಸ ಪಥ’ ಎಉ ಮಗದೊಬ್ಬರು ತಿಳಿಸಿದ್ದಾರೆ.
ಆದರೆ ಕೆಲ ಟ್ವಿಟ್ಟರ್ ಖಾತೆದಾರರು, ಹಬ್ಬಕ್ಕೆ ಉದ್ಯೋಗಿಯು ಇಂಥ ಉಡುಗೆ ಧರಿಸಿದ್ದನ್ನು ಟೀಕಿಸಿದ್ದಾರೆ. ಸಾಮಾನ್ಯವಾಗಿ ಎಸ್‌ಬಿಐ ಉದ್ಯೋಗಿಗಳು ಡ್ರೆಸ್ ಕೋಡ್ ಹೊಂದಿದ್ದಾರೆ. ಆ ನಿಯಮವನ್ನು ಮುರಿಯಬಾರದು ಎಂದಿದ್ದಾರೆ.
ಈ ವರ್ಷ ಆಗಸ್ಟ್ 30ರಿಂದ ಪ್ರಾರಂಭವಾದ ಈ ಹಬ್ಬ ಸೆಪ್ಟೆಂಬರ್ 8ರಂದು ಮುಗಿಯುತ್ತದೆ. ಸಿಬ್ಬಂದಿ ಇನ್ನೂ ಯಾವ ಯಾವ ವೇಷ ಹಾಕುತ್ತಾರೋ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:51 am, Tue, 6 September 22