AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : 82ರ ‘ಹುಡುಗ’ನೊಬ್ಬ ಕುಣಿದ ರೀತಿಗೆ ಪಾರ್ಟಿಯಲ್ಲಿದ್ದವರಿಗೆಲ್ಲ ಉತ್ಸಾಹ ಉಕ್ಕಿತು

Dance : ಸುಮಾರು 9 ಲಕ್ಷ ನೆಟ್ಟಿಗರು ಬಾದ್‌ಶಾ ಮತ್ತು ಆಸ್ಥಾ ಗಿಲ್‌ರ ಅಭಿ ತೋ ಪಾರ್ಟಿ ಶುರು ಹುಯೀ ಹೈ ಹಾಡಿಗೆ ಈ ಅಜ್ಜ ಹೆಜ್ಜೆ ಹಾಕಿದ್ದನ್ನು ವೀಕ್ಷಿಸಿದ್ದಾರೆ.

Viral Video : 82ರ ‘ಹುಡುಗ’ನೊಬ್ಬ ಕುಣಿದ ರೀತಿಗೆ ಪಾರ್ಟಿಯಲ್ಲಿದ್ದವರಿಗೆಲ್ಲ ಉತ್ಸಾಹ ಉಕ್ಕಿತು
82 ವರ್ಷದ ಈ ಅಜ್ಜನ ಉತ್ಸಾಹ!
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 06, 2022 | 10:55 AM

Viral Video : ನೃತ್ಯವನ್ನು ಶ್ರಮಪಟ್ಟು ಕಲಿತು ಪ್ರದರ್ಶನ ಮಾಡುವ ಸಾಕಷ್ಟು ಜನರು ನಮ್ಮ ನಡುವೆ ಇದ್ದಾರೆ. ಕೆಲವರು ಉತ್ಸಾಹದಿಂದ ತಮ್ಮಷ್ಟಕ್ಕೆ ತಾವು ಮಾಡುವವರೂ ಇದ್ದಾರೆ. ಎಲ್ಲೋ ಹಾಡು ಕೇಳಿದರೆ ಸಾಕು ಇದ್ದಲ್ಲಿಯೇ ಕುಣಿಯುವವರೂ ಇದ್ದಾರೆ. ಇಲ್ಲೊಂದು ಪ್ರಸಿದ್ಧ ಪಾರ್ಟಿ ಟ್ರ್ಯಾಕ್‌ಗೆ ವಯಸ್ಸಾದ ವ್ಯಕ್ತಿಯೊಬ್ಬರು ಕುಣಿಯುತ್ತಿರುವುದನ್ನು ನೋಡಿ. 2014 ರ ಖೂಬ್‌ಸೂರತ್‌ನ ಸೋನಮ್ ಕಪೂರ್ ಅಭಿನಯದ ಅಭಿ ತೋ ಪಾರ್ಟಿ ಶುರು ಹುಯೀ ಹೈ ಹಾಡಿಗೆ ಇವರು ನರ್ತಿಸಿದ್ದಾರೆ. ಇದನ್ನು ಗಾಯಕರಾದ ಬಾದ್‌ಶಾ ಮತ್ತು ಆಸ್ಥಾ ಹಾಡಿದ್ದಾರೆ.  ಎಂಟರ್‌ಟೈನರ್ ನಿಗಮ್ ಪಟೇಲ್ ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Neegam Patel (@bigneegs)

ಪಾರ್ಟಿಯಲ್ಲಿ ಡ್ಯಾನ್ಸ್​ ಮಾಡಿದ ಈ ಅಜ್ಜನಿಗೆ 82. ಯಾವುದೇ ಹಿಂಜರಿಕೆ ಇಲ್ಲದೆ ಮನದುಂಬಿ ಕುಣಿದಿದ್ದಾರೆ. ಇವರ ಈ ಜೋಶ್​ನಿಂದ ವೇದಿಕೆಯ ಮೇಲಿರುವವರಿಗೆಲ್ಲ ಉತ್ಸಾಹ ಉಕ್ಕಿ ಹರಿದಿದೆ. ಆಗಸ್ಟ್ 18 ರಂದು ಈ ವಿಡಿಯೋ ಅನ್ನು ಆನ್​ಲೈನ್​ನಲ್ಲಿ ಹಂಚಿಕೊಳ್ಳಲಾಗಿದೆ. ಈತನಕವೂ ಸುಮಾರು 9 ಲಕ್ಷ ವೀಕ್ಷಣೆ, 28,000 ಕ್ಕೂ ಹೆಚ್ಚು ಲೈಕ್ಸ್​ ಪಡೆದಿದೆ.

ಈ ವಿಡಿಯೋ ಎಲ್ಲರಿಗೂ ಸ್ಪೂರ್ತಿ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬ ಖಾತೆದಾರರು, ‘ವಾಹ್​, ನಾನು ಜಿಮ್​ಗೆ ಹೋಗಲು ಶುರು ಮಾಡುತ್ತಿದ್ದೇನೆ. ಬಹುಶಃ 82ರ ವಯಸ್ಸಿನಲ್ಲಿ ಇವರಂತೆಯೇ ನಾನೂ ನೃತ್ಯ ಮಾಡಬಲ್ಲೆ’ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ಜೀವನವನ್ನು ಹೀಗೆಯೇ ಕಳೆಯಬೇಕು’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ನಿಮಗೂ ಈಗ ಪಾರ್ಟಿಗೆ ಹೋಗಿ ಡ್ಯಾನ್ಸ್​ ಮಾಡಬೇಕು ಅನ್ನಿಸುತ್ತಿದೆಯಾ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:40 am, Tue, 6 September 22

ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ
ಸೋಮನಹಳ್ಳಿ ಟೋಲ್ ವಿರುದ್ಧ ರೈತರು, ಸ್ಥಳೀಯರಿಂದ ಹೋರಾಟ
ಸೋಮನಹಳ್ಳಿ ಟೋಲ್ ವಿರುದ್ಧ ರೈತರು, ಸ್ಥಳೀಯರಿಂದ ಹೋರಾಟ