AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಈ ಸಲ ಕಪ್​ನೊಳಗಿನದು ನಮ್ದೇ!?

Golden Retriever : ನಿಮ್ಮ ಸಾಕುನಾಯಿಗೆ ಇಂಥ ಆಟವನ್ನು ಆಡಿಸಿದ್ದೀರಾ? ಈ ನಾಯಿ ಆಡುವ ಈ ಆಟವನ್ನು 14.7 ಮಿಲಿಯನ್​ಗಿಂತಲೂ ಹೆಚ್ಚು ಜನ ವೀಕ್ಷಿಸಿದ್ದಾರೆ.

Viral Video : ಈ ಸಲ ಕಪ್​ನೊಳಗಿನದು ನಮ್ದೇ!?
ಓಹೋ ಇದರಲ್ಲಿತ್ತಾ?
TV9 Web
| Edited By: |

Updated on:Sep 06, 2022 | 10:12 AM

Share

Viral Video : ಮಕ್ಕಳು ತಮ್ಮನ್ನು ಹೇಗೆ ಸದಾ ಆಟವಾಡಿಸುತ್ತಲೇ ಇರಬೇಕೆಂದು ಬಯಸುತ್ತವೆಯೋ ಹಾಗೆ ನಾಯಿಗಳು ಕೂಡ. ತಮಗಿಷ್ಟವಾದ ಆಟಗಳನ್ನು ಆಡಿದ ನಂತರ ಸೂಕ್ತ ಪ್ರತಿಫಲಕ್ಕಾಗಿ ಅವು ಕಾಯುತ್ತಿರುತ್ತವೆ. ಇಲ್ಲೊಂದು ಗೋಲ್ಡನ್ ರಿಟ್ರೈವರ್ ನಾಯಿ ಇದೆ. ಅದರ ಪೋಷಕರು ಅದಕ್ಕೆ ಕಪ್ ಆಟ ಆಡಿಸುತ್ತಿದ್ದಾರೆ. ಆನ್​ಲೈನ್​ನಲ್ಲಿ ವೈರಲ್ ಆಗಿರುವ ಈ ವಿಡಿಯೋ ನಿಮ್ಮ ಮನಸ್ಸನ್ನು ಅರಳಿಸದೇ ಇರದು. ಈ ವಿಡಿಯೋ ಎಲ್ಲಿ ಯಾವಾಗ ಚಿತ್ರೀಕರಿಸಲಾಗಿದೆ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ. Yoda4ever ಎಂಬ ಟ್ವಿಟ್ಟರ್ ಖಾತೆದಾರರು ಇದನ್ನು ಆನ್​ಲೈನ್​ನಲ್ಲಿ ಪೋಸ್ಟ್ ಮಾಡಿದ ನಂತರ ವೈರಲ್ ಆಗಿದೆ.

‘ನಾನು ನನ್ನ ಮನಸ್ಸನ್ನು ಬದಲಾಯಿಸಿದೆ, ನನಗಿದನ್ನು ಕೊಡಿ’ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ಪೋಸ್ಟ್​ ಆಗಿದೆ. ಅದರ ಪೋಷಕರು ಎರಡು ಕಪ್​ಗಳನ್ನಿಟ್ಟು ಇವುಗಳಲ್ಲಿ ಒಂದನ್ನು ಮುಟ್ಟು ಎಂದು ಹೇಳುತ್ತಾರೆ. ಅದು ಒಂದು ಕಪ್​ ಮುಟ್ಟಿ ಆರಿಸಿಕೊಳ್ಳುತ್ತದೆ. ನೋಡಿದರೆ ಅದರಲ್ಲಿ ಒಂದೇ ಪೀಸ್​ ಅದರ ಆಹಾರವಿರುತ್ತದೆ. ನಂತರ ಇನ್ನೊಂದು ಕಪ್​ ಅನ್ನು ಪೋಷಕರು ತೋರಿಸುತ್ತಾರೆ. ಅದರಲ್ಲಿ ಸಾಕಷ್ಟು ಆಹಾರದ ತುಣುಕುಗಳಿರುತ್ತವೆ! ಹೀಗೆ ನಾಯಿಗಳೊಂದಿಗೆ ಇಂಥ ಆಟಗಳನ್ನು ಆಡುವುದರಿಂದ ಸಾಕಿದವರಿಗೂ ನಾಯಿಗೂ ಮನಸ್ಸು ಉಲ್ಲಸಿತವಾಗುತ್ತದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸೆಪ್ಟೆಂಬರ್ 4 ರಂದು ಹಂಚಿಕೊಳ್ಳಲಾದ ಈ ವಿಡಿಯೋ ನಂತರ 14.7 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಗಳಿಸಿದೆ. ಸುಮಾರು 5 ಲಕ್ಷಕ್ಕೂ ಹೆಚ್ಚು ಲೈಕ್‌ಗಳು, 37,000 ಪ್ರತಿಕ್ರಿಯೆ, 73,500 ಕ್ಕೂ ಹೆಚ್ಚು ರೀಟ್ವೀಟ್ ಹೊಂದಿದೆ.

‘ಇವನ ಕೊನೆಯ ಲುಕ್​ ಇದೆಯಲ್ಲ, ಅದನ್ನು ನಾನು ಪ್ರೀತಿಸುತ್ತೇನೆ’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಈ ಜಗತ್ತಿನಲ್ಲಿ ನಾಯಿಗಳಿಗಿಂತ ಉತ್ತಮ ಜೀವಿಗಳಿದ್ದರೆ, ನಾನಿನ್ನೂ ಅವರನ್ನು ಭೇಟಿ ಮಾಡಬೇಕಿದೆ’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:09 am, Tue, 6 September 22

Follow Us
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು