Viral Video : ಮ್ಯೂಸಿಯಂನಲ್ಲಿ ಅಪ್ಪ ಮಗಳ ಈ ಮಸ್ತಿ ನೋಡಿ

Father and Daughter : ಈ ಅಪ್ಪ, ಮಗಳನ್ನು ಕರೆದುಕೊಂಡು ವಿಜ್ಞಾನ ವಸ್ತುಸಂಗ್ರಹಾಲಯಕ್ಕೆ ಬರುತ್ತಾರೆ. ಅಲ್ಲಿರುವ ನೂರಾರು ಪ್ರಯೋಗಸಾಧನಗಳ ಹೊರತಾಗಿಯೂ ಅವರಿಗೆ ಈ ಪ್ರಯೋಗವೇ ಹೆಚ್ಚು ಇಷ್ಟವಾಗಿದ್ದು ಯಾಕಿರಬಹುದು? ವಿಡಿಯೋ ನೋಡಿ.

Viral Video : ಮ್ಯೂಸಿಯಂನಲ್ಲಿ ಅಪ್ಪ ಮಗಳ ಈ ಮಸ್ತಿ ನೋಡಿ
ಮ್ಯೂಸಿಯಮ್​ನಲ್ಲಿ ಅಪ್ಪ ಮಗಳ ಮೋಜು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 06, 2022 | 11:13 AM

Viral Video : ಅಪ್ಪಂದಿರು ಮಕ್ಕಳಿಗೆ ಹೊರಜಗತ್ತನ್ನು ತೋರಿಸುವಲ್ಲಿ ಸದಾಮುಂದು. ಸಾಮಾನ್ಯವಾಗಿ ತಮ್ಮ ಮಕ್ಕಳು ಬೇಗಬೇಗ ಎಲ್ಲವನ್ನೂ ಕಲಿತುಬಿಡಬೇಕು ಎನ್ನುವ ಉತ್ಸಾಹ, ನಿರೀಕ್ಷೆ ಅವರದು. ಅದರಲ್ಲೂ ಹೆಣ್ಣುಮಕ್ಕಳೆಂದರೆ ಅಪ್ಪಂದಿರಿಗೆ ಪ್ರಾಣ. ಇಲ್ಲೊಬ್ಬ ಅಪ್ಪ, ಮಗಳನ್ನು ವಿಜ್ಞಾನ ವಸ್ತುಸಂಗ್ರಹಾಲಯಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಸ್ಥಿರ ವಿದ್ಯುತ್ ಕುರಿತು ಪ್ರಯೋಗದಲ್ಲಿ ತೊಡಗಿಕೊಂಡಾಗಿನ ವಿಡಿಯೋ ಅನ್ನು ಅವರು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಜ್ಞಾನವನ್ನು ಹೀಗೆ ಆಟ ಮತ್ತು ಮೋಜಿನೊಂದಿಗೆ ಕಲಿಯುವ ರೀತಿ ಯಾರಿಗೆ ತಾನೆ ಇಷ್ಟವಾಗುವುದಿಲ್ಲ? ಈ ವಿಡಿಯೋ ಈಗ ವೈರಲ್ ಆಗಿದೆ.

ನಿಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳಿ. ನೀವೂ ಕೂಡ ನಿಮ್ಮ ಹತ್ತಿರದ ಮ್ಯೂಸಿಯಂಗೆ ಹೀಗೆ ಹೋಗಿರುತ್ತೀರಿ. ಅಷ್ಟೊಂದು ಪ್ರಯೋಗಸಾಧನಗಳಿದ್ದರೂ ನಿಮಗೆ ನೆನಪಿನಲ್ಲಿ ಉಳಿಯುವುವು ಒಂದೋ ಎರಡು ಮಾತ್ರ. ಹಾಗೆ ಈ ಅಪ್ಪ ಮಗಳಿಗೂ ಈ ಪ್ರಯೋಗ ಬಹಳ ಆಕರ್ಷಿಸಿರಬಹುದು. ಅದಕ್ಕೇ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಕೆನ್ ಮತ್ತು ಬೀ ಎಂಬ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Ken & Bea (@pookienmonkey)

ತಂದೆಯು ಒಂದು ಕೈಯಲ್ಲಿ ಮಗಳನ್ನು ಎತ್ತಿಕೊಂಡಿದ್ದಾನೆ. ಇನ್ನೊಂದು ಕೈಯನ್ನು ವ್ಯಾನ್ ಡಿ ಗ್ರಾಫ್ ಎಂಬ ಸ್ಥಾಯೀವಿದ್ಯುತ್ತಿನ ಜನರೇಟರ್‌ ಮೇಲೆ ಇರಿಸಿದ್ದಾರೆ. ಆ ಜನರೇಟರ್ ಮೂಲಕ ವಿದ್ಯುತ್ ಇವರ ದೇಹದೊಳಗೆ ಸಂಚರಿಸುತ್ತದೆ. ಆಗ ಮಗುವಿನ ಕೂದಲು ನಿಗುರಿ ನಿಲ್ಲುತ್ತವೆ. ಯಾರೂ ಇಂಥ ಪ್ರಯೋಗವನ್ನು ಆನಂದಿಸುವಲ್ಲಿ ಉತ್ಸಾಹ ಇರುತ್ತದೆ ಅಲ್ಲವೆ?

ನಿಮ್ಮ ಮಕ್ಕಳನ್ನು ಹತ್ತಿರದ ಮ್ಯೂಸಿಯಂಗೆ ಕರೆದೊಯ್ಯಲು ಮರೆಯದಿರಿ. ಎಳವೆಯಿಂದಲೇ ಅವರಿಗೆ ಇಂಥ ಆಸಕ್ತಿಗಳಲ್ಲಿ ತೊಡಗಿಸಬೇಕು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:12 am, Tue, 6 September 22