Viral Video : ಈ ಆನೆಗಳು ಆಸ್ಪತ್ರೆಯ ವಾರ್ಡಿಗೆ ಯಾರನ್ನು ನೋಡಲು ಬಂದವೋ?

Elephant : ಕೆಲವರಿಗೆ ಗಾಬರಿ, ಕೆಲವರಿಗೆ ಅಚ್ಚರಿ, ಹೆಚ್ಚಿನ ಜನಕ್ಕೆ ಇದು ತಮಾಷೆ! ಹೀಗೆ ಜನವಸತಿ ಇದ್ದಲ್ಲಿ ಆನೆಗಳು ನುಗ್ಗುತ್ತವೆ ಎಂದರೆ ಅರಣ್ಯನಾಶದ ಪರಿಣಾಮ ಎಂದು ಕೆಲ ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Viral Video : ಈ ಆನೆಗಳು ಆಸ್ಪತ್ರೆಯ ವಾರ್ಡಿಗೆ ಯಾರನ್ನು ನೋಡಲು ಬಂದವೋ?
ಆಸ್ಪತ್ರೆಗೆ ಯಾಕೆ ಬರುತ್ತಿರಬಹುದು ಆನೆಗಳು?
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 06, 2022 | 12:42 PM

Viral Video : ಈ ಹಿಂದೆ ಕಾಡು ಪ್ರಾಣಿಗಳು ವಸತಿ ಪ್ರದೇಶಗಳಿಗೆ ನುಗ್ಗಿರುವ ಅನೇಕ ವಿಡಿಯೋಗಳನ್ನು  ನೋಡಿದ್ದೇವೆ. ಹಾಗೆಯೇ ಈ ನುಗ್ಗುವಿಕೆಗೆ ಆನೆಗಳೂ ಹೊರತಾಗಿಲ್ಲ. ಆನೆ ಎಷ್ಟು ಸೂಕ್ಷ್ಮ, ಸ್ನೇಹಮಯಿ ಪ್ರಾಣಿಯೋ ಅಷ್ಟೇ ದೈತ್ಯ ಪ್ರಾಣಿ. ಆದ್ದರಿಂದ ಕಾಡಲ್ಲಿರುವ ಅದು ನಾಡಿಗೆ ಬಂದರೆ ಯಾರಿಗೂ ಭೀತಿಯೇ. ಈಗಿಲ್ಲಿ ಆರ್ಮಿ ಕಂಟೋನ್ಮೆಂಟ್‌ನಲ್ಲಿರುವ ಆಸ್ಪತ್ರೆಯ ವಾರ್ಡ್‌ ಈ ಆನೆಗಳು ಯಾಕೆ ನುಗ್ಗಿವೆ. ಈ ವಿಡಿಯೋ ವಿಡಿಯೋ ವೈರಲ್ ಆಗುತ್ತಿದೆ. ಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ನೆಟ್ಟಿಗರು ಅಚ್ಚರಿ ಗಾಬರಿಯಿಂದ ಈ ವಿಡಿಯೋ ನೋಡುತ್ತಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by India Today (@indiatoday)

ವಿಡಿಯೋ ನೋಡಿದಿರಲ್ಲವೆ? ಒಂದರ ಹಿಂದೆ ಒಂದು ಬಂದ ಆನೆಗಳು ವಾರ್ಡ್​ ಅನ್ನು ಎಷ್ಟು ಸರಾಗವಾಗಿ ಒಳಹೊಕ್ಕಿವೆ ನೋಡಿ. ನಿತ್ಯವೂ ಓಡಾಡುವ ಮನೆಯೋ ಆಸ್ಪತ್ರೆಯೋ ಎಂಬಂತೆ. ಆಸ್ಪತ್ರೆಯಲ್ಲಿರುವ ಜನರು ಮೂರು ಮೊಬೈಲ್​ಗಳಿಂದ ಈ ದೃಶ್ಯವನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದಾರೆ. ಅವುಗಳನ್ನು ಓಡಿಸಲು ಜೋರಾಗಿ ಶಬ್ದ ಕೂಡ ಮಾಡಿದ್ದಾರೆ. ಆದರೆ ಇದ್ಯಾವುದೂ ತಮಗೆ ಸಂಬಂಧವೇ ಇಲ್ಲವೆಂಬಂತೆ ಯಾರೋ ತಮ್ಮ ಸಂಬಂಧಿಕರನ್ನು ಭೇಟಿಯಾಗಲು ಬಂದಂತೆ ವಾರ್ಡ್​ಗೆ ನುಗ್ಗಿವೆ!

ಕೆಲವರಿಗೆ ಗಾಬರಿ, ಕೆಲವರಿಗೆ ಅಚ್ಚರಿ, ಹೆಚ್ಚಿನ ಜನಕ್ಕೆ ಇದು ತಮಾಷೆ! ಹೀಗೆ ಜನವಸತಿ ಇದ್ದಲ್ಲಿ ಆನೆಗಳು ನುಗ್ಗುತ್ತವೆ ಎಂದರೆ ಅರಣ್ಯನಾಶದ ಪರಿಣಾಮ ಎಂದು ಕೆಲ ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದರೂ ಈ ಪೋಸ್ಟ್​ ಕುತೂಹಲವನ್ನಂತೂ ಉಳಿಸಿದೆ. ಯಾಕೆ ಬಂದವೋ ಇಲ್ಲಿ ಆನೆಗಳು? ಈ ಹಿಂದೆ ಬಿಹಾರದಲ್ಲಿ ಗಾಯಗೊಂಡ ಕೋತಿಯೊಂದು ಕ್ಲಿನಿಕ್​ಗೆ ಬಂದು ಚಿಕಿತ್ಸೆ ಪಡೆದು ಹೋಗಿತ್ತು. ಈ ಆನೆಗಳಿಗೆ ಏನು ತೊಂದರೆಯೋ!

ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ

Published On - 12:42 pm, Tue, 6 September 22