AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಏಳನೇ ಕ್ಲಾಸಿನಿಂದ ನಮ್ಮ ಪ್ರೀತಿ ಹೀಗೆಯೇ ಇದೆ

Love : 80 ರ ವಯಸ್ಸಿನಲ್ಲಿಯೂ ಈ ಜೋಡಿ ಅಷ್ಟೇ ಪ್ರೀತಿಯಿಂದ ಇದೆ. ಇದಕ್ಕೆ ಸಾಕ್ಷಿ ಈ ವಿಡಿಯೋ. 6 ಲಕ್ಷಕ್ಕೂ ಹೆಚ್ಚು ಜನರು ಈ ಜೋಡಿಯನ್ನು ಇಷ್ಟಪಟ್ಟಿದ್ದಾರೆ.

Viral Video : ಏಳನೇ ಕ್ಲಾಸಿನಿಂದ ನಮ್ಮ ಪ್ರೀತಿ ಹೀಗೆಯೇ ಇದೆ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 05, 2022 | 5:07 PM

Viral Video : ಪ್ರೀತಿಯಲ್ಲಿ ಬೀಳುವುದು ಸುಲಭ ಆದರೆ ಬಹುಕಾಲದವರೆಗೆ ಸಂಬಂಧದೊಳಗೆ ಪರಸ್ಪರ ಪ್ರೀತಿಯಿಂದ ಇರಬೇಕೆಂದರೆ ಅಪಾರ ತಾಳ್ಮೆ ಬೇಕಾಗುತ್ತದೆ. ಕಠಿಣ ಪರಿಶ್ರಮ ಬೇಕಾಗುತ್ತದೆ. ಇದೆಲ್ಲವೂ ಸೂಕ್ತ ದಿಕ್ಕಿನಲ್ಲಿ ಸಾಗಲು ಅದೃಷ್ಟವೂ ಬೇಕಾಗುತ್ತದೆ. ಇದೆಲ್ಲವೂ ಮೇಳೈಸಿರುವ ಒಂದು ಜೋಡಿಯ ವಿಡಿಯೋ ಇಲ್ಲಿದೆ.  ಟಿಕ್‌ಟಾಕ್‌ನಲ್ಲಿ ಹಂಚಿಕೊಳ್ಳಲಾದ ಮತ್ತು ಇನ್​ಸ್ಟಾಗ್ರಾಂನ ಟುಡೇ ಇಯರ್ಸ್ ಓಲ್ಡ್ ಪುಟದಲ್ಲಿ ಮರುಹಂಚಿಕೆಯಾದ ಈ ವಿಡಿಯೋ ನೋಡಿ. ಇಲ್ಲಿರುವ ಈ ಅಜ್ಜ-ಅಜ್ಜಿ ಏಳನೇ ತರಗತಿಯಲ್ಲಿದ್ದಾಗ ಪರಿಚಯವಾದರು. ಕಾಲಕ್ರಮೇಣ ಪ್ರೀತಿಸಿ ಮದುವೆಯಾದರು. ಇವರಿಬ್ಬರ ಮದುವೆಗೆ ಈಗ 60 ವರ್ಷಗಳು. ಇಬ್ಬರಿಗೂ 80 ವರ್ಷಗಳು. ಈಗಲೂ ಇವರಲ್ಲಿ ಪ್ರೀತಿಯ ಅದೇ ನವಿರಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ದಿನಮಾನಗಳಲ್ಲಿ ಇಂಥ ಜೋಡಿ ಅಪರೂಪ ಎಂದು ನೆಟ್ಟಿಗರು ಪ್ರಶಂಸಿದಿದ್ದಾರೆ. ಸುಮಾರು ಆರು ದಿನಗಳ ಹಿಂದೆ ಪೋಸ್ಟ್ ಮಾಡಲಾದ ಈ ವಿಡಿಯೋ ಇದುವರೆಗೆ 6.81 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ.

ನೀವಿಬ್ಬರೂ ಅದ್ಭುತವಾಗಿ ಕಾಣುತ್ತಿದ್ದೀರಾ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ನಿಮಗೆ ಅಭಿನಂದನೆಗಳು ಹೀಗೆ ಬಾಳಿ ಬದುಕಿ ಎಂದು ಮತ್ತೊಬ್ಬರು ಹೇಳಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ

Published On - 5:06 pm, Mon, 5 September 22