ವಿಜ್ಞಾನ ಕ್ಷೇತ್ರದಲ್ಲಿ ಪ್ರತಿನಿತ್ಯ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಮಾನವನ ಕೆಲಸವನ್ನು ಸುಲಭಗೊಳಿಸುವ ಯಂತ್ರಗಳನ್ನು, ರೋಬೋಟ್ ಸೇರಿದಂತೆ ಜೀವಗಳನ್ನು ಉಳಿಸಲು ವೈದ್ಯಕೀಯ ಕ್ಷೇತ್ರಗಳಲ್ಲೂ ಹಲವಾರು ಆವಿಷ್ಕಾರಗಳು ನಡೆಯುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ವಿಜ್ಞಾನಿಗಳ ತಂಡ ಅವಧಿಪೂರ್ವವವಾಗಿ ಜನಿಸಿದ ಶಿಶುಗಳ ಪ್ರಾಣ ರಕ್ಷಣೆಗಾಗಿ ಮತ್ತು ಸರಿಯಾದ ಬೆಳವಣಿಗೆಗಾಗಿ ಕೃತಕ ಗರ್ಭಾಶಯ ತಂತ್ರಜ್ಞಾನವನ್ನು ಕಂಡುಹಿಡಿದಿದೆ. ಕೆಲವೊಮ್ಮೆ ಅವಧಿ ಪೂರ್ವವಾಗಿ ಜನಿಸಿದ ಶಿಶುಗಳು ಸರಿಯಾದ ಪೋಷಣೆ ಸಿಗದೆ ಸಾವನ್ನಪ್ಪುವ ಅಥವಾ ಸರಿಯಾಗಿ ಬೆಳವಣಿಗೆ ಹೊಂದದಿರುವ ಸಾಧ್ಯತೆಯಿರುತ್ತವೆ. ಹಾಗಾಗಿ ಪ್ರಸವಪೂರ್ವವಾಗಿ ಜನಿಸಿದ ಶಿಶುಗಳ ರಕ್ಷಣೆಗಾಗಿ ಈ ಹೊಸ ತಂತ್ರಜ್ಞಾನವನ್ನು ಆವಿಷ್ಕಾರ ಮಾಡಲಾಗಿದೆ. ಈ ಕುರಿತ ವಿಡಿಯೋ ಇದೀಗ ವೈರಲ್ ಆಗಿದೆ.
ಪ್ರಸ್ತುತ ಅವಧಿ ಪೂರ್ವವಾಗಿ ಜನಿಸಿದ ಶಿಶುಗಳನ್ನು ಕಾಪಾಡಿಕೊಳ್ಳಲು ವೆಂಟಿಲೇಟರ್ ವ್ಯವಸ್ಥೆಯಲ್ಲಿ ಆ ಶಿಶುಗಳನ್ನು ಇರಿಸಗುತ್ತದೆ. ಇದರಿಂದ ಮಗು ಸಂಪೂರ್ಣವಾಗಿ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ. ಅದೇ ರೀತಿ ಇದೀಗ ಅವಧಿ ಪೂರ್ವವಾಗಿ ಜನಿಸಿದ ಶಿಶುಗಳನ್ನು ಬದುಕಿಸಿ ಜೋಪಾನವಾಗಿರಿಸಲು ಹೊಸ ತಂತ್ರಜ್ಞಾನವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಈ ತಂತ್ರಜ್ಞಾನದ ಸಹಾಯದಿಂದ ಅಕಾಲಿಕವಾಗಿ ಜನಿಸಿದ ಶಿಶುವಿಗೆ ಗರ್ಭದೊಳಗಿರುವಂತಹ ಉಷ್ಣತೆಯ ವಾತಾವರಣವನ್ನು ಒದಗಿಸಿ, ಮಗುವಿಗೆ ಉತ್ತಮ ಆರೋಗ್ಯಕರ ಜೀವನವನ್ನು ನೀಡಬಹುದು. ಇದೀಗ ಪ್ರಸವಪೂರ್ವ ಕುರಿ ಮರಿಯ ಮೇಲೆ ಈ ತಂತ್ರಜ್ಞಾನವನ್ನು ಯಶಸ್ವಿಯಾಗಿ ಪ್ರಯೋಗಿಸಲಾಗಿದೆ.
Scientists have created an “artificial womb” in the hopes of someday using the device to save babies born extremely prematurely.
Tthe device has only been tested on fetal lambs.pic.twitter.com/6v749K0wUA
— Massimo (@Rainmaker1973) December 21, 2023
ಈ ವಿಡಿಯೋವನ್ನು Massimo ಎಂಬ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಅವಧಿಪೂರ್ವವಾಗಿ ಜನಿಸಿದ ಶಿಶುಗಳನ್ನು ಉಳಿಸಲು ವಿಜ್ಞಾನಿಗಳು ಕೃತಕ ಗರ್ಭದ ರೀತಿಯ ಸಾಧನವನ್ನು ರಚಿಸಿದ್ದಾರೆ. ಈ ಸಾಧನವನ್ನು ಉಪಯೋಗಿಸಿಕೊಂಡು ಕುರಿ ಮರಿಯ ಮೇಲೆ ಪ್ರಯೋಗ ನಡೆಸಲಾಗಿದೆ ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ಈ ವೈರಲ್ ವಿಡಿಯೋದಲ್ಲಿ ಕೃತಕ ಗರ್ಭಾಶಯದಂತಿರುವ ಸಾಧನದೊಳಗೆ ಅವಧಿ ಪೂರ್ವವಾಗಿ ಜನಿಸಿದ ಕುರಿ ಮರಿಯನ್ನು ಪ್ರಯೋಗಕ್ಕೆ ಒಳಪಡಿಸಿರುವುದನ್ನು ಕಾಣಬಹುದು.
ಇದನ್ನೂ ಓದಿ: ಇದು ಭಾರೀ ಖತರ್ನಾಕ್ ಗಿಳಿ… ಧರ್ಮಕ್ಕೆ ಎಳನೀರು, ದುಡಿದು ತಿನ್ಬೇಕು ಮಾರ್ರೆ
ಡಿಸೆಂಬರ್ 21 ರಂದು ಹಂಚಿಕೊಳ್ಳಲಾದ ಈ ವಿಡಿಯೋ 8.9 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಲೈಕ್ಸ್ಗಳನ್ನು ಪಡುಕೊಂಡಿದೆ. ಒಬ್ಬ ಬಳಕೆದಾರರು ಇದು ತುಂಬಾ ಉಪಯುಕ್ತವಾಗಲಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇತ್ತೀಚಿನ ವರ್ಷಗಳಲ್ಲಿ ವಿಜ್ಞಾನಿಗಳು ಕೃತಕ ಗರ್ಭಾಶಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದಾರೆʼ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ಅನೇಕರಲ್ಲಿ ಭರವಸೆಯ ಕಿರಣವನ್ನು ಮೂಡಿಸುವ ಒಂದೊಳ್ಳೆ ತಂತ್ರಜ್ಞಾನʼ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: