22 ಮಿಲಿಯನ್​ ವೀಕ್ಷಣೆ ಪಡೆದಿದೆ ಸ್ಕೂಬಾ ಡೈವರ್ ​ ಮತ್ತು ಸೀಲ್​ನ ವಿಡಿಯೋ

| Updated By: ಶ್ರೀದೇವಿ ಕಳಸದ

Updated on: Oct 29, 2022 | 9:09 AM

Seal : ‘ಸೀಲ್​ಗಳು ಕಡಲ ನಾಯಿಗಳಿದ್ದಂತೆ’! ಕಡಲನಾಯಿ ಎನ್ನುವ ಬಗ್ಗೆ ಭಾರೀ ಚರ್ಚೆಯಾಗಿದೆ. ಹಾಗೇ ಸೀಲ್​ ಎಷ್ಟು ಅಪಾಯಕಾರಿ ಎನ್ನುವುದನ್ನು ಒಬ್ಬರು ಸಾಕ್ಷಿ ಸಮೇತ ಟ್ವೀಟ್ ಮಾಡಿದ್ದಾರೆ.

22 ಮಿಲಿಯನ್​ ವೀಕ್ಷಣೆ ಪಡೆದಿದೆ ಸ್ಕೂಬಾ ಡೈವರ್ ​ ಮತ್ತು ಸೀಲ್​ನ ವಿಡಿಯೋ
Scuba diver takes adorable underwater video with a seal
Follow us on

Viral Video : ಇಡೀ ವಾರ ಒತ್ತಡದಲ್ಲಿ ಕೆಲಸ ಮಾಡಿದ ನಿಮಗೆ ವಾರಾಂತ್ಯವನ್ನು ಆರಾಮಾಗಿ ಕಳೆಯಬೇಕೆನ್ನಿಸುತ್ತಿರುತ್ತದೆ. ಮನಸ್ಸನ್ನು ಸಮಾಧಾನ, ಶಾಂತಗೊಳಿಸುವ ವಿಡಿಯೋಗಳನ್ನು ನೋಡಲು ಬಯಸುತ್ತಿರುತ್ತೀರಿ. ಹಾಗೆಯೇ ಸ್ವಲ್ಪ ತಮಾಷೆ, ಖುಷಿ ಕೊಡುವಂಥವನ್ನೂ. ಈಗ ವೈರಲ್ ಆಗುತ್ತಿರುವ ಈ ವಿಡಿಯೋ ಈತನಕ 22 ಮಿಲಿಯನ್​ಗಿಂತಲೂ ಹೆಚ್ಚು ಜನರನ್ನು ಸೆಳೆದಿದೆ. ಮುದ್ದಾದ ಸೀಲ್​ನ ವಿಡಿಯೋ ಬಹಳ ಆಪ್ತವಾಗಿದೆ. ‘ಸೀಲ್​ಗಳು ಕಡಲ ನಾಯಿಗಳಿದ್ದಂತೆ’ ಎಂದು ಈ ಸ್ಕೂಬಾ ಡೈವರ್​ ಟ್ವೀಟ್ ಮಾಡಿದ್ದಾರೆ. ಆದರೆ ‘ಕಡಲ ನಾಯಿ’ ಎಂದು ಹೇಳಿದ್ದರ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದಾರೆ ನೆಟ್ಟಿಗರು.

ಈತನಕ 72,700 ಜನರು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. Seal ಗೆ ನೇರವಾಗಿ ಕಡಲ ನಾಯಿ ಎಂದು ಹೇಳಲು ಸಾಧ್ಯವಿಲ್ಲ. ಸೀಲ್​ಗಳು ಸಮುದ್ರ ಪ್ರಾಣಿಗಳಲ್ಲೊಂದು ಎಂದು ಒಬ್ಬರು ಹೇಳಿದ್ದಾರೆ. ಅದಕ್ಕೆ ಪ್ರತಿಯಾಗಿ  ವಿವಿಧ ಭಾಷೆಯಲ್ಲಿ Seal ಅನ್ನು ಏನೆಂದು ಕರೆಯುತ್ತಾರೆ ಎಂದು ಹೇಳಿದ್ದಾರೆ; In Bahasa its Anjing Laut (Sea Dog), In German its Seehund (Sea Dog), In Dutch its Zeehond (Sea Dog), In Arab its El Bahr Calb (Sea Dog), Is English the problem here? ಹಾಗಿದ್ದರೆ Sea Lion ಬೇರೆ ಪ್ರಾಣಿಯಾ? ಎಂದು ಮತ್ತೊಬ್ಬರು ಕೇಳಿದ್ದಾರೆ.

ಇದನ್ನೂ ಓದಿ
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಸೀಲ್​ಗಳನ್ನು ಎಂದೂ ಸಾಕಬೇಡಿ.​ ಅವು ನೋಡಲು ಮುದ್ದಾದ ಪ್ರಾಣಿಗಳೇನೋ ನಿಜ. ಆದರೆ ಅಪಾಯಕಾರಿ ಬ್ಯಾಕ್ಟೀರಿಯಾಗಳನ್ನು ಹೊಂದಿವೆ. ‘ಸೀಲ್​ ಫಿಂಗರ್​’ ಆದರೆ ಆಸ್ಪತ್ರೆಗೆ ಸೇರಬೇಕಾಗುತ್ತದೆ ಎಂದು ಪುರಾವೆಸಮೇತ ಟ್ವೀಟ್ ಮಾಡಿದ್ದಾರೆ ಇನ್ನೂ ಒಬ್ಬರು.

ಅದು ನಿಮ್ಮ ರೆಗ್ಯೂಲೇಟರ್, ಮಾಸ್ಕ್​, ಆಕ್ಸಿಜನ್​ ಸಿಲಿಂಡರ್ ಅನ್ನು ಎಳೆದು ತೆಗೆಯುವ ತನಕ ಬಹಳೇ ಮುದ್ದು! ಎಂದು ಎಚ್ಚರಿಕೆ ನೀಡಿದ್ದಾರೆ ಮಗದೊಬ್ಬರು. ಸಮುದ್ರ ಪ್ರಾಣಿಗಳು ನಮ್ಮನ್ನು ಬಹಳ ಪ್ರೀತಿಸುತ್ತವೆ ಎಂದು ಇನ್ನೂ ಒಬ್ಬರು ಹೇಳಿದ್ದಾರೆ. ಸೀಲ್​, ಡಾಲ್ಫಿನ್ಸ್​, ನಾಯಿ ಈ ಪ್ರಾಣಿಗಳು ಮನುಷ್ಯನೊಂದಿಗೆ ಬಹಳ ಆಳವಾದ ಭಾವನೆಯನ್ನು ಹೊಂದಿರುತ್ತವೆ ಎಂದು ಒಬ್ಬರು ಹೇಳಿದ್ದಾರೆ.

ಒಟ್ಟಿನಲ್ಲಿ ಈ ಸೀಲ್​ ಬಹಳಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಆದರೆ ‘ಸೀಲ್​’ ಪ್ರಭೇದದಡಿ ಸಾಕಷ್ಟು ಪ್ರಾಣಿಗಳು ಸಮುದ್ರದಲ್ಲಿ ವಾಸಿಸುತ್ತವೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 9:05 am, Sat, 29 October 22