ನಾನೂ ಡ್ಯಾನ್ಸ್ ಮಾಡಬೇಕು; ‘ಸೆಕ್ಯೂರಿಟಿ ಗಾರ್ಡ್​’ ಚಿಯರ್ ಲೀಡರ್ಸ್ ಜೊತೆ ನರ್ತಿಸಿದ ವಿಡಿಯೋ ವೈರಲ್

| Updated By: ಶ್ರೀದೇವಿ ಕಳಸದ

Updated on: Nov 18, 2022 | 1:24 PM

Cheer Leaders : ಹೀಗಿವರು ಮಧ್ಯೆ ಪ್ರವೇಶಿಸಿದಾಗ ಚಿಯರ್ ಲೀಡರ್ಸ್ ಕೋಪದಿಂದ ಹೊರಹೋಗುವಂತೆ ಸೂಚಿಸಿದರು. ಆದರೆ ತಾನೂ ಡ್ಯಾನ್ಸ್ ಮಾಡಲೇಬೇಕು ಸೆಕ್ಯೂರಿಟಿ ಗಾರ್ಡ್​ ಹಟ ಹಿಡಿದರು. ಮುಂದೇನಾಯಿತು ನೋಡಿ.

ನಾನೂ ಡ್ಯಾನ್ಸ್ ಮಾಡಬೇಕು; ‘ಸೆಕ್ಯೂರಿಟಿ ಗಾರ್ಡ್​’ ಚಿಯರ್ ಲೀಡರ್ಸ್ ಜೊತೆ ನರ್ತಿಸಿದ ವಿಡಿಯೋ ವೈರಲ್
Security Guard Surprises Football Fans By Dancing With Cheerleaders Stadium Erupts In Cheers
Follow us on

Viral Video : ಫುಟ್​ಬಾಲ್​ ಸ್ಟೇಡಿಯಂನಲ್ಲಿ ಸೆಕ್ಯೂರಿಟಿ ಗಾರ್ಡ್​ ಒಬ್ಬರು ಚಿಯರ್ ಲೀಡರ್​ಗಳೊಂದಿಗೆ ಡ್ಯಾನ್ಸ್​ ಮಾಡಿದ ವಿಡಿಯೋ ವೈರಲ್ ಆಗುತ್ತಿದೆ. ಚಿಯರ್​ಲೀಡರ್​ಗಳು ತಮ್ಮ ಪಾಡಿಗೆ ತಾವು ಡ್ಯಾನ್ಸ್​ ಮಾಡುತ್ತಿದ್ದರು. ಕ್ರೀಡಾಪ್ರೇಮಿಗಳೆಲ್ಲ ಅದನ್ನು ಆಸ್ವಾದಿಸುತ್ತಿದ್ದರು. ಇದ್ದಕ್ಕಿದ್ದಂತೆ ಸೆಕ್ಯೂರಿಟಿ ಗಾರ್ಡ್​ ಚಿಯರ್ ಲೀಡರುಗಳೆಡೆ ಹೋದರು. ಇದನ್ನು ನೋಡಿದ ಒಬ್ಬರು ಕೋಪದಿಂದ ಇವರನ್ನು ಹೊರಹೋಗುವಂತೆ ಸೂಚಿಸಿದರು. ಆದರೆ ತಾನೂ ಡ್ಯಾನ್ಸ್ ಮಾಡಲೇಬೇಕು ಎಂದು ಹಟ ಹಿಡಿದರು. ನಂತರ ಸೆಕ್ಯೂರಿಟಿ ಗಾರ್ಡ್​ನ ನೃತ್ಯಕೌಶಲ ನೋಡಿ ಕ್ರೀಡಾಪ್ರೇಮಿಗಳೆಲ್ಲ ಹರ್ಷೋದ್ಗಾರದಲ್ಲಿ ಮುಳುಗಿದರು.

ಈಗಾಗಲೇ ಈವಿಡಿಯೋ ಅನ್ನು 43 ಮಿಲಿಯನ್​ ಜನರು ವೀಕ್ಷಿಸಿದ್ದಾರೆ. 3.4 ಮಿಲಿಯನ್ ಜನ ಇಷ್ಟಪಟ್ಟಿದ್ದಾರೆ. ಟೆನ್ನೆಸ್ಸೀ ಡ್ಯಾನ್ಸ್​ ಟೀಮ್​ ಈ ಕ್ರೀಡಾಂಗಣದಲ್ಲಿ ನೃತ್ಯಪ್ರದರ್ಶನ ಕೊಡುತ್ತಿತ್ತು. ಮಧ್ಯೆ ಪ್ರವೇಶಿಸಿದ ಸೆಕ್ಯೂರಿಟಿ ಗಾರ್ಡ್​ನ್ನು ನೋಡಿ ಆರಂಭದಲ್ಲಿ ಕಿರಿಕಿರಿಗೆ ಒಳಗಾದವರಂತೆ ತೋರುತ್ತಾರೆ ಚಿಯರ್​ ಲೀಡರ್ಸ್​. ಆದರೆ ಯಾವಾಗ ಈ ಸೆಕ್ಯೂರಿಟಿ ಗಾರ್ಡ್​ ಡ್ಯಾನ್ಸ್​ ಮಾಡಲು ಆರಂಭಿಸುತ್ತಾರೋ ಆಗ ಎಲ್ಲರೂ ಅಚ್ಚರಿಯಿಂದ ನಗುತ್ತ ನರ್ತಿಸುತ್ತಾರೆ.

ಆದರೆ ಇದು ಪೂರ್ವನಿಯೋಜಿತವಾಗಿತ್ತು. ಇವರು ಸೆಕ್ಯೂರಿಟಿ ಗಾರ್ಡ್​ನ ವೇಷ ತೊಟ್ಟಿದ್ದರಷ್ಟೇ. ಶಾಲಾದಿನಗಳಿಂದಲೇ ಇವರು ಚಿಯರ್ ಲೀಡರ್ ಆಗಿದ್ದರು. 20 ವರ್ಷಗಳ ಹಿಂದೆ ಈ ವೃತ್ತಿಯಿಂದ ಹಿಂದೆ ಸರಿದಿದ್ದರು. ಆದರೆ ಇದೀಗ ಹೀಗೆ ಸ್ಟೇಡಿಯಂನಲ್ಲಿ ಅಚಾನಕ್ಕಾಗಿ ಬಂದು ನರ್ತಿಸಿ ಅಚ್ಚರಿ ಮೂಡಿಸಲು ಇವರನ್ನು ಕೇಳಿಕೊಳ್ಳಲಾಗಿತ್ತು. ಇಷ್ಟು ವರ್ಷಗಳ ನಂತರ ಹೀಗೆ ಭಾಗವಹಿಸಿದ್ದು ಇವರಿಗೆ ಖುಷಿ ಕೊಟ್ಟಿತು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 1:18 pm, Fri, 18 November 22