Viral Video: ಅಮೆರಿಕದ ನೌಕಾಪಡೆಯ ಅಧಿಕಾರಿಗಳು ಹಾಡಿದ ‘ಸ್ವದೇಸ್​‘ ಹಾಡು ವೈರಲ್

| Updated By: ಶ್ರೀದೇವಿ ಕಳಸದ

Updated on: Aug 25, 2022 | 12:35 PM

Shahrukh Khan : ಅಮೆರಿಕದ ನೌಕಾಪಡೆಯ ಅಧಿಕಾರಿಗಳು ಹಾಡಿದ ‘ಏ ಜೋ ದೇಶ್ ಹೈ ತೇರಾ’ ವಿಡಿಯೋ ನೋಡಿದ ನಟ ಶಾರುಖ್ ಖಾನ್ ‘ಸ್ವದೇಸ್‘ ಸಿನೆಮಾದ ಗಳಿಗೆಗಳನ್ನು ನೆನಪಿಸಿಕೊಂಡು ರೀಟ್ವೀಟ್ ಮಾಡಿದ್ದಾರೆ. 

Viral Video: ಅಮೆರಿಕದ ನೌಕಾಪಡೆಯ ಅಧಿಕಾರಿಗಳು ಹಾಡಿದ ‘ಸ್ವದೇಸ್​‘ ಹಾಡು ವೈರಲ್
ಹಾಡುತ್ತಿರುವ ನೌಕಾ ಅಧಿಕಾರಿಗಳು
Follow us on

Viral Video : ಅಮೆರಿಕದಲ್ಲಿರುವ ಭಾರತದ ರಾಯಭಾರಿ ತರಂಜೀತ್ ಸಿಂಗ್ ಸಂಧು ಟ್ವಿಟರ್​ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಅಮೆರಿಕದ ನೌಕಾಪಡೆಯ ಅಧಿಕಾರಿಗಳು ಹಾಡಿದ ಈ ಹಾಡಿನ ಕುರಿತು, ಶಾರುಖ್ ಖಾನ್ ‘ಇದನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದ ಸರ್. ಎಷ್ಟು ಸುಂದರವಾಗಿದೆ ಈ ಹಾಡು. ಈ ಸಿನೆಮಾ ತಯಾರಿಕೆಯ ದಿನಗಳು ನೆನಪಾದವು. ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ ಧನ್ಯವಾದ’ ಎಂದಿದ್ದಾರೆ. ಸ್ವದೇಸ್ 2004 ರಲ್ಲಿ ಬಿಡುಗಡೆಯಾಗಿತ್ತು. ಇದರಲ್ಲಿ ಶಾರುಖ್ ನಾಸಾ ವಿಜ್ಞಾನಿಯಾಗಿ ನಟಿಸಿದ್ದಾರೆ. ಇದು ಗಲ್ಲಾಪೆಟ್ಟಿಗೆಯನ್ನು ತುಂಬಿಸದಿದ್ದರೂ ಅತ್ಯುತ್ತಮ ಚಿತ್ರ ಎಂದು ಸಾಬೀತಾಗಿತ್ತು.

ಶಾರುಖ್ ಖಾನ್ ಈಗ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅವರ ಸಿನೆಮಾ ‘ಪಠಾಣ್‌’ ತಯಾರಿಯಲ್ಲಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:26 pm, Thu, 25 August 22