Viral Video: 11 ವರ್ಷದ ಶ್ಫಾ ಯೂಟ್ಯೂಬ್​ ಮೂಲಕ ಮಿಲಿಯನ್​ಗಟ್ಟಲೆ ಗಳಿಗೆ

|

Updated on: Jul 03, 2023 | 5:21 PM

Arabian : ಶ್ಫಾ ಪ್ರತಿ 1000 ವೀಕ್ಷಣೆಗಳಿಗೆ ಸುಮಾರು ರೂ. 100 ಗಳಿಸುತ್ತಾಳೆ. 2023 ರ ಮೇನಲ್ಲಿ ರೂ. 1,63,88,594 ಗಳಿಸಿದ್ದಾಳೆ. ಈಕೆಯ ಮಾಸಿಕ ಗಳಿಕೆ ರೂ. 1,63,90,367 ಮೀರಿದೆ. ಕಳೆದ 8 ವರ್ಷಗಳಲ್ಲಿ ಶ್ಫಾ ಬಿಲಿಯನ್-ಡಾಲರ್ ಅನ್ನು ದಾಟಿದ್ದಾಳೆ.

Viral Video: 11 ವರ್ಷದ ಶ್ಫಾ ಯೂಟ್ಯೂಬ್​ ಮೂಲಕ ಮಿಲಿಯನ್​ಗಟ್ಟಲೆ ಗಳಿಗೆ
ಯೂಟ್ಯೂಬರ್ ಶ್ಫಾ (Sfha) ತನ್ನ
Follow us on

YouTuber: ಇದು ಡಿಜಿಟಲ್​ ಕಾಲ. ಸಾಮಾಜಿಕ ಜಾಲತಾಣಗಳು (Social Media) ಅನೇಕ ಪ್ರತಿಭಾವಂತರಿಗೆ ವೇದಿಕೆಯಾಗಿವೆ. ಮಕ್ಕಳಿಂದ ಹಿಡಿದು ಮುದುಕರವರೆಗೂ ಮನರಂಜನಾ ತಾಣಗಳೂ ಆಗಿವೆ. ಬಹುಮುಖ್ಯವಾಗಿ ಗಳಿಕೆಯ ಮಾರ್ಗೋಪಾಯವೂ ಆಗಿವೆ ಎನ್ನುವುದು ಗಮನಿಸಬೇಕಾದ ವಿಷಯ. ಹೀಗೆ ಯೂಟ್ಯೂಬ್​ ಮೂಲಕ ಮಿಲಿಯನ್​ಗಟ್ಟಲೆ ಹಣ ಗಳಿಸುವಂಥ ಕೆಲ ಮಕ್ಕಳ ಪೈಕಿ ಶ್ಫಾ (Shfa) ಎಂಬ 11 ವರ್ಷದ YouTuber ಇದೀಗ ಸುದ್ದಿಯಲ್ಲಿದ್ದಾಳೆ. ಕಾರಣ ಆಕೆ ತನ್ನ ವಿಡಿಯೋಗಳಿಂದ ಮಿಲಿಯನ್​ಗಟ್ಟಲೆ ಫಾಲೋವರ್ಸ್​ ಗಳಿಸಿದ್ದಾಳೆ ಜೊತೆಗೆ ಮಿಲಿಯನ್​ಗಟ್ಟಲೆ ಹಣವನ್ನೂ.

ಎಲ್ಸಾ, ಅನ್ನಾ ಮತ್ತು ಫ್ರೋಝನ್ ಆಕೆಯ ಪ್ರೀತಿಯ ಪಾತ್ರಗಳು. ಆ ಪಾತ್ರಗಳೊಂದಿಗೆ ಆಕೆ ತನ್ನ ಮಾತೃಭಾಷೆಯಾದ ಅರಬ್ಬೀ (Arabic) ಭಾಷೆಯಲ್ಲಿಯೇ ಸಂಭಾಷಿಸುತ್ತಾಳೆ. ಟೈಟಲ್​, ಸಬ್​ಟೈಟಲ್​ಗಳನ್ನೂ ಅದೇ ಭಾಷೆಯಲ್ಲಿಯೇ ಇರುತ್ತವೆ. ಶ್ಫಾ ಅಪ್ರಾಪ್ತಳಾಗಿರುವುದರಿಂದ ಈಕೆಯ ತಾಯಿ ಈ ಯೂಟ್ಯೂಬ್​ ಚಾನೆಲ್​ ಅನ್ನು ನಿರ್ವಹಿಸುತ್ತಾಳೆ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ವಿಶೇಷ ಮಕ್ಕಳ ಕ್ಷೌರದಂಗಡಿ; ಮನದುಂಬಿ ಪ್ರತಿಕ್ರಿಯಿಸುತ್ತಿರುವ ಬಿಲ್ಲಿಯ ಗ್ರಾಹಕರು

ಶ್ಫಾಳ ಈ ಚಾನೆಲ್​ 2015ರ ಮಾರ್ಚ್ 29 ಶುರುವಾಗಿದ್ದು ​ ಇದೀಗ ಸುಮಾರು 40 ಮಿಲಿಯನ್ ಫಾಲೋವರುಗಳನ್ನು ಹೊಂದಿದೆ. ಇದು ಈಕೆಯ ಕುಟುಂಬಕ್ಕೆ ಹೇರಳವಾದ ಆದಾಯವನ್ನು ತಂದುಕೊಡುತ್ತಿದೆ. ಈಕೆಯ ವಿಡಿಯೋಗಳು ಸುಮಾರು 22 ಶತಕೋಟಿ ಜನರಿಂದ ವೀಕ್ಷಿಸಲ್ಪಟ್ಟಿವೆ. ಅಂದರೆ ಪ್ರತೀ 1000 ವೀಕ್ಷಣೆಗಳಿಗೆ ಸುಮಾರು ನೂರು ರೂಪಾಯಿಗಳನ್ನು ಈ ವಿಡಿಯೋ ಮೂಲಕ ಈಕೆ ಗಳಿಸುತ್ತಾಳೆ.

YouTube ಡೇಟಾ ವಿಶ್ಲೇಷಣೆಯ ಮತ್ತು ABPlive ಸುದ್ದಿವಾಹಿನಿಯ ಪ್ರಕಾರ, ಶ್ಫಾ ಪ್ರತಿ 1000 ವೀಕ್ಷಣೆಗಳಿಗೆ ಸುಮಾರು ರೂ. 100 ಗಳಿಸುತ್ತಾಳೆ. 2023 ರ ಮೇ ತಿಂಗಳಲ್ಲಿ ರೂ. 1,63,88,594 ಹಣ ಗಳಿಸಿದ್ದಾಳೆ. ಈಕೆಯ ಮಾಸಿಕ ಗಳಿಕೆ ರೂ. 1,63,90,367 ಮೀರಿದೆ. ಕಳೆದ ಎಂಟು ವರ್ಷಗಳಲ್ಲಿ ಒಟ್ಟು 984 ವಿಡಿಯೋಗಳೊಂದಿಗೆ ಶ್ಫಾ ಬಿಲಿಯನ್-ಡಾಲರ್ ಅನ್ನು ದಾಟಿದ್ದಾಳೆ. ಅಂದಾಜು ಲಾಭ ಸುಮಾರು 4 ಸಾವಿರ ಮಿಲಿಯನ್​.

ಇದನ್ನೂ ಓದಿ : Viral Video: ಮಟಮಟ ಮಧ್ಯಾಹ್ನ ಮಟನ್​ ಮ್ಯಾಗೀ, ಬೆಲೆ ಕೇವಲ ರೂ. 600!

ಇಂದು ಪ್ರತಿಭೆಯ ಮೂಲಕ ಕುಳಿತಲ್ಲಿಯೇ ಹಣ ಗಳಿಸಲು ಸಾಕಷ್ಟು ಉಪಾಯಗಳಿವೆ. ಮಕ್ಕಳನ್ನು ಮುನ್ನೆಲೆಯಲ್ಲಿಟ್ಟುಕೊಂಡು ಅನೇಕ ತಂದೆತಾಯಂದಿರು ಇದರಲ್ಲಿ ತೊಡಗಿಕೊಂಡಿದ್ಧಾರೆ. ಆದರೆ ಯಾವ ವಯಸ್ಸಿನಲ್ಲಿ ಯಾವುದು ಮುಖ್ಯ, ಇದರ ಪರಿಣಾಮವೇನಾಗುತ್ತದೆ ಮತ್ತು ಮಕ್ಕಳ ಮನೋವಿಕಾಸಕ್ಕೆ ಇದು ಎಷ್ಟು ಪೂರಕ ಮಾರಕ ಎನ್ನುವುದನ್ನು ಪೋಷಕರು ಅರಿತುಕೊಳ್ಳುವುದು ಬಹಳೇ ಮುಖ್ಯ. ಏಕೆಂದರೆ ಎಲ್ಲರ ಹಿನ್ನಲೆಯೂ ಒಂದೇ ತೆರೆನಾಗಿರುವುದಿಲ್ಲ. ಹಾಗೆಯೇ ಪ್ರತೀ ಮಕ್ಕಳು ವಿಶಿಷ್ಟ. ಅವರೊಳಗಿನ ಪ್ರತಿಭೆಯನ್ನು ಬಹಳ ಜೋಪಾನವಾಗಿ ಪೋಷಿಸುವುದು ಅಗತ್ಯ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ