Shocking: ಇಡ್ಲಿ, ವಡಾ ಸಾಂಬರ್, ದೋಸೆಗಳ ಹೆಸರು ಬದಲಾವಣೆ; ಮೆನು ನೋಡಿ ದಕ್ಷಿಣ ಭಾರತೀಯರು ಶಾಕ್
ಯುಎಸ್ ರೆಸ್ಟೋರೆಂಟ್ವೊಂದರ ಮೆನು ನೋಡಿ ಭಾರತೀಯರು ಅದರಲ್ಲೂ ದಕ್ಷಿಣ ಭಾರತೀಯರು ಶಾಕ್ ಆಗಿದ್ದಾರೆ. ಕಾರಣ ಇಡ್ಲಿ ಸಾಂಬರ್, ವಡಾ ಸಾಂಬರ್, ದೋಸೆಗಳಿಗೆ ಮರುನಾಮಕರಣ ಮಾಡಿ ವ್ಯಾಪಾರ ನಡೆಸಲಾಗುತ್ತಿದೆ.
ಯುಎಸ್ ರೆಸ್ಟೋರೆಂಟ್ವೊಂದರ ಮೆನು ನೋಡಿ ಭಾರತೀಯರು ಅದರಲ್ಲೂ ದಕ್ಷಿಣ ಭಾರತೀಯರು ಶಾಕ್ ಆಗಿದ್ದಾರೆ. ಅರೆ, ಯುಎಸ್ನ ರೆಸ್ಟೋರೆಂಟ್‌ನ ಮೆನು ನೋಡಿ ಭಾರತೀಯರು ಯಾಕೆ ಶಾಕ್ ಆಗುತ್ತಾರೆ ಎಂದು ಭಾವಿಸಿದ್ದೀರಾ? ಅದಕ್ಕೂ ಒಂದು ಕಾರಣ ಇದೆ. ಹೌದು, ದಕ್ಷಿಣ ಭಾರತದ ಪ್ರಸಿದ್ಧ ಹಾಗೂ ನೆಚ್ಚಿನ ಭಕ್ಷ್ಯಗಳಿಗೆ ಮರುನಾಮಕರಣ ಮಾಡಿ ರೆಸ್ಟೋರೆಂಟ್ವೊಂದರಲ್ಲಿ ಗ್ರಾಹಕರಿಗೆ ನೀಡಲಾಗುತ್ತಿದೆ. ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇರನ್ನು ನೋಡಿದ ಭಾರತೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದು ಕಾನೂನು ಬಾಹಿರ ಅಂತಲೂ ಹೇಳಿದ್ದಾರೆ.
ಅಮೇರಿಕಾ ಮೂಲದ ಇಂಡಿಯನ್ ಕ್ರೆಪ್ ಕೋ ಎಂಬ ರೆಸ್ಟೋರೆಂಟ್‌ನ ಮೆನುವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ. ಬಳಕೆದಾರರು ಹಂಚಿಕೊಂಡ ಸ್ಕ್ರೀನ್‌ಶಾಟ್‌ಗಳಲ್ಲಿ, ಇಡ್ಲಿ ಮತ್ತು ದೋಸೆಯಂತಹ ದಕ್ಷಿಣ ಭಾರತೀಯ ಭಕ್ಷ್ಯಗಳನ್ನು ಕಾಣಬಹುದು. ಆದರೆ ಮೂಲ ಹೆಸರಿನಲ್ಲಿ ಅಲ್ಲ. ಬದಲಾಗಿ ಅದಕ್ಕೆ ವಿಶೇಷವಾದ ಹೆಸರುಗಳನ್ನು ಇಡಲಾಗಿದೆ. ದಕ್ಷಿಣ ಭಾರತದಲ್ಲಿ ಹೆಚ್ಚಿನ ಜನರ ನೆಚ್ಚಿನ ಇಡ್ಲಿ ಸಾಂಬರ್ಗೆ “ಡಂಕ್ಡ್ ರೈಸ್ ಕೇಕ್ ಡಿಲೈಟ್” ಎಂದು ಮರುನಾಮಕರಣ ಮಾಡಲಾಗಿದೆ. ಅಷ್ಟೇ ಅಲ್ಲ, ದಕ್ಷಿಣ ಭಾರತದ ಮತ್ತೊಂದು ಪ್ರಸಿದ್ಧ ಉಪಹಾರ ಭಕ್ಷ್ಯವಾದ ವಡಾ ಸಾಂಬಾರ್ ಅನ್ನು “ಡಂಕ್ಡ್ ಡೋನಟ್ ಡಿಲೈಟ್” ಎಂದು ಹೆಸರಿಸಲಾಗಿದೆ.
ಅದಲ್ಲದೆ ದೋಸೆ ಭಕ್ಷ್ಯಗಳಿಗೂ ಬೇರೆಬೇರೆ ಹೆಸರುಗಳನ್ನು ಇಡಲಾಗಿದ್ದು, ಇವುಗಳು ಕೂಡ ಗಮನಸೆಳೆದಿವೆ. ಸಾದಾ ದೋಸೆಯನ್ನು “ನೇಕೆಡ್ ಕ್ರೆಪ್” ಎಂದು ಹೆಸರಿಸಲಾಗಿದ್ದು, ಮಸಾಲೆ ದೋಸೆಗೆ “ಸ್ಮ್ಯಾಶ್ಡ್ ಪೊಟಾಟೊ ಕ್ರೆಪ್” ಎಂದು ಮರುನಾಮಕರಣ ಮಾಡಲಾಗಿದೆ. ಆಹಾರದ ಹೆಸರುಗಳನ್ನು ಮರುನಾಮಕರಣ ಮಾಡಿರುವ ಫೋಟೋವನ್ನು Omfg ಎಂಬ ಶೀರ್ಷಿಕೆಯೊಂದಿಗೆ ಟ್ವಿಟರ್ ಬಳಕೆದಾರ inika ಎಂಬವರು ಹಂಚಿಕೊಂಡಿದ್ದಾರೆ
omfg pic.twitter.com/EEIkpBJcoA
— inika⛓ (@inika__) July 16, 2022
ಈ ಟ್ವೀಟ್ ವೈರಲ್ ಪಡೆದು 18ಸಾವಿರಕ್ಕೂ ಹೆಚ್ಚು ಲೈಕ್ಗಳು ಬಂದಿದ್ದು, 2ಸಾವಿರಕ್ಕೂ ಅಧಿಕ ರೀಟ್ವೀಟ್ಗಳು ಆಗಿವೆ. ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿ, ನಾನು ನೋವಿನಲ್ಲಿದ್ದೇನೆ ಎಂದಿದ್ದಾರೆ. ಮಗದೊಬ್ಬರು ಪ್ರತಿಕ್ರಿಯಿಸಿ, ಇದು ಕಾನೂನು ಬಾಹಿರವಾಗಿದೆ ಎಂದಿದ್ದಾರೆ.
There’s more. pic.twitter.com/BinMJf01Ci
— Aniruddha (@rapidsnail) July 17, 2022
Published On - 4:32 pm, Mon, 18 July 22