Viral Video: ಮೊಸಳೆ ಮತ್ತು ಹಸಿರು ಅನಕೊಂಡ ನಡುವೆ ಫೈಟ್; ಕೊನೆಯಲ್ಲಿ ಏನಾಯ್ತು ಗೊತ್ತಾ?
ಬೃಹತ್ ಗಾತ್ರದ ಮೊಸಳೆ ಮೇಲೆ ಹಸಿರು ಅನಕೊಂಡ ದಾಳಿ ನಡೆಸಿದ್ದು, ಇದರ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು, ಕೊನೆಯಲ್ಲಿ ಯಾವುದು ಬಿಟ್ಟುಕೊಟ್ಟಿತು ಎಂದು ಪ್ರಶ್ನಿಸತೊಡಗಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ.
ವೈರಲ್ ವಿಡಿಯೋ: ಪ್ರಾಣಿಗಳ ನಡುವೆ, ಸರಿಸೃಪಗಳ ನಡುವೆ ಜಗಳಗಳು ನಡೆಯತ್ತಲೇ ಇರುತ್ತವೆ. ಇಂತಹ ಜಗಳ ರಕ್ಷಣೆಗಾಗಿ ನಡೆಯುತ್ತದೆ, ಕೆಲವೊಮ್ಮೆ ಆಹಾರಕ್ಕಾಗಿಯೂ ನಡೆಯುತ್ತದೆ. ಇದೀಗ ಬ್ರೆಜಿಲ್‌ನಲ್ಲಿ ಮೊಸಳೆ ಮೇಲೆ ಹಸಿರು ಅನಕೊಂಡ ದಾಳಿ ನಡೆಸಿದ ಘಟನೆಯೊಂದು ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದ್ದು, ಜಗಳದ ಕೊನೆಯಲ್ಲಿ ಗೆದ್ದದ್ದು ಯಾವುದು ಎಂದು ವಿಡಿಯೋದಲ್ಲಿ ಇಲ್ಲದ ಕಾರಣ ಯಾರು ಬಿಟ್ಟುಕೊಟ್ಟರು ಎಂಬುದೇ ಯಕ್ಷಪ್ರಶ್ನೆಯಾಗಿದೆ. ಹಸಿರು ಅನಕೊಂಡ ಮೊಸಳೆಯನ್ನು ಸುತ್ತುಹಾಕಿಕೊಂಡಿರುವುದನ್ನು ವೈರಲ್ ವಿಡಿಯೋ ತೋರಿಸುತ್ತದೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಯುನೈಟೆಡ್ ಸ್ಟೇಟ್ಸ್‌ನ ಇಂಡಿಯಾನಾದಲ್ಲಿ ಕ್ಯಾಮೆರಾ ಮೂಲಕ ದೃಶ್ಯಾವಳಿಯನ್ನು ಸೆರೆಹಿಡಿಯಲಾಗಿದೆ. ಆದಾಗ್ಯೂ ಈ ವೀಡಿಯೊವನ್ನು ‘africanwildlife1’ ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡ ನಂತರ ಇದೀಗ ಮತ್ತೆ ವೈರಲ್ ಪಡೆದುಕೊಂಡಿದೆ. ವಿಡಿಯೋವನ್ನು ಹಂಚಿಕೊಳ್ಳುವಾಗ, “ಇದು ಹೆಬ್ಬಾವು ಅಲ್ಲ, ಇದು ಬೋವಾ ಕನ್‌ಸ್ಟ್ರಿಕ್ಟರ್ ಅಲ್ಲ… ಇದು ಎಲ್ಲಕ್ಕಿಂತ ದೊಡ್ಡದು: ಅನಕೊಂಡ” ಎಂದು ಶೀರ್ಷಿಕೆಯನ್ನು ನೀಡಲಾಗಿದೆ.
ಬೃಹತ್ ಗಾತ್ರದ ಮೊಸಳೆ ಮತ್ತು 550-ಪೌಂಡ್ ಇರುವ ಹಸಿರು ಅನಕೊಂಡ ಹಾವಿನ ನಡುವಿನ ಭಯಾನಕ ಕದನದದಲ್ಲಿ ಯಾವುದು ಅಂತಿಮವಾಗಿ ಬಿಟ್ಟುಕೊಟ್ಟಿತು ಎಂಬ ಪ್ರಶ್ನೆಯನ್ನು ಜಾಲತಾಣದಲ್ಲಿ ನೆಟ್ಟಿಗರು ಕೇಳುತ್ತಿದ್ದಾರೆ. ಒಬ್ಬು ಬಳಕೆದಾರರು ಕಾಮೆಂಟ್ ಮಾಡಿ, “ಕೊನೆಯಲ್ಲಿ ಎರಡೂ ದಣಿದಿದೆ. ಕತ್ತು ಹಿಸುಕಿದ ಕಾರಣ ಮೊಸಳೆ ಅನಕೊಂಡಕ್ಕೆ ಏನನ್ನೂ ಮಾಡಲು ಆಗದೆ ದಣಿದಾಗ ಅನಕೊಂಡವು ಸ್ಥಳದಿಂದ ಹೊರಹೋಗಿದೆ” ಎಂದು ಹೇಳಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡಿ, “ಯಾರು ಗೆದ್ದರು? ಅನಕೊಂಡ ಅಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
View this post on Instagram
ಈ ವಿಡಿಯೋವನ್ನು ಶನಿವಾರ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಇದುವರೆಗೆ 2 ಲಕ್ಷ 50 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 7 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.