ಅದೇನು ಅದೃಷ್ಟವೋ ಹರಾಜಿನಲ್ಲಿ ಭಾಗಿಯಾಗಿದ್ದ ಕುಟುಂಬವೊಂದು ಸೂಟ್‌ಕೇಸ್‌ಗಳನ್ನು(Suitcases) ತನ್ನದಾಗಿಸಿಕೊಂಡಿದೆ. ನಿಯಮಗಳಂತೆ ಅದನ್ನು ಸ್ಥಳದಲ್ಲೇ ತೆರೆದು ನೋಡುವಂತಿಲ್ಲ, ಅದರಂತೆ ಅದರಲ್ಲೇನಿದೆಯೋ ಎಂಬ ಕುತೂಹಲದಲ್ಲೇ ಖುಷಿ ಖುಷಿಯಾಗಿ ಮನೆಗೆ ತೆರಳಿದ ಕುಟುಂಬ ಸೂಟ್ಕೇಸ್ ತೆರೆದು ನೋಡಿದಾಗ ನಿಬ್ಬೆರಗಾಗಿದೆ. ಹಾಗಿದ್ದರೆ ಆ ಸೂಟ್ಕೇಸ್ನಲ್ಲಿ ಇದ್ದದ್ದಾದರೂ ಏನು? ಕುತೂಹಲಕಾರಿ ಸುದ್ದಿ ಇಲ್ಲಿದೆ ಓದಿ…
ನ್ಯೂಜಿಲೆಂಡ್‌ನ ದಕ್ಷಿಣ ಆಕ್ಲೆಂಡ್‌ನ ಕುಟುಂಬವೊಂದು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿತ್ತು. ಅದರಂತೆ ಹರಾಜಿನಲ್ಲಿ ನಡೆದ ಡ್ರಾದಲ್ಲಿ ಆ ಕುಟುಂಬವು 5 ಸೂಟ್‌ಕೇಸ್‌ಗಳನ್ನು ಗೆದ್ದುಕೊಂಡಿದೆ. ಹರಾಜು ನಡೆಯುತ್ತಿದ್ದಾಗ ಆ ಸೂಟ್‌ಕೇಸ್‌ಗಳನ್ನು ತೆರೆಯಬಾರದು ಎಂಬ ನಿಯಮವಿದ್ದುದರಿಂದ ಮನೆಗೆ ಹೋಗಿ ತೆರೆದಿದ್ದಾರೆ. ಹೀಗೆ ಸೂಟ್‌ಕೇಸ್‌ಗಳನ್ನು ತೆರೆದ ಕುಟುಂಬಕ್ಕೆ ಸಿಕ್ಕಿದ್ದು ಮಾನವನ ಅವಶೇಷಗಳು.
ಭೀತಿಗೊಂಡ ಕುಟುಂಬಸ್ಥರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಬಂದ ಪೊಲೀಸರು, ಅವಶೇಷಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪೊಲೀಸರ ಹೇಳಿಕೆ ಪ್ರಕಾರ, ಈ ಕುಟುಂಬಕ್ಕೂ ಕೊಲೆಗೂ ಯಾವುದೇ ಸಂಬಂಧವಿಲ್ಲ. ಆದರೆ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಈ ಸುದ್ದಿಯನ್ನು ತೆಲುಗಿನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:07 pm, Tue, 16 August 22