Shocking News: ಮೊಬೈಲ್ ನುಂಗಿದ ಮಹರಾಯ; 6 ತಿಂಗಳ ಬಳಿಕ ಆಪರೇಷನ್ ಮೂಲಕ ಹೊರತೆಗೆದ ವೈದ್ಯರು

| Updated By: ಸುಷ್ಮಾ ಚಕ್ರೆ

Updated on: Oct 22, 2021 | 8:25 PM

ಈಜಿಪ್ಟ್​ನಲ್ಲಿ ತಮ್ಮ ಆಸ್ಪತ್ರೆಗೆ ಬಂದ ರೋಗಿಯ ಹೊಟ್ಟೆನೋವಿನ ಕಾರಣ ತಿಳಿಯದೆ ಆ ವ್ಯಕ್ತಿಯ ಹೊಟ್ಟೆಯ ಎಕ್ಸ್ ರೇ ತೆಗೆದ ನಂತರ ಮೊಬೈಲ್ ಫೋನ್ ಪತ್ತೆಯಾಗಿದೆ.

Shocking News: ಮೊಬೈಲ್ ನುಂಗಿದ ಮಹರಾಯ; 6 ತಿಂಗಳ ಬಳಿಕ ಆಪರೇಷನ್ ಮೂಲಕ ಹೊರತೆಗೆದ ವೈದ್ಯರು
ಮೊಬೈಲ್ ಹೊರತೆಗೆದ ವೈದ್ಯರು
Follow us on

ಮಕ್ಕಳು ತಮಗೆ ಗೊತ್ತಾಗದೆ ಕೈಗೆ ಸಿಕ್ಕಿದ್ದನ್ನೆಲ್ಲ ಬಾಯಿಗೆ ಹಾಕಿಕೊಳ್ಳುತ್ತಿರುತ್ತವೆ. ಆದರೆ, ಕೆಲವೊಮ್ಮೆ ದೊಡ್ಡವರೂ ಕೂಡ ಇದೇ ರೀತಯ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಮಹಾಶಯ ವಿಪರೀತ ಹೊಟ್ಟೆನೋವೆಂದು ಡಾಕ್ಟರ್ ಬಳಿ ಬಂದಿದ್ದ. ಎಕ್ಸ್​ರೇ ತೆಗೆದು ನೋಡಿದ ವೈದ್ಯರೇ ಶಾಕ್ ಆಗಿದ್ದರು. ಏಕೆಂದರೆ ಆತನ ಹೊಟ್ಟೆಯಲ್ಲಿ ಒಂದು ಮೊಬೈಲ್ ಫೋನ್ ಇತ್ತು! ಆತ ಮೊಬೈಲನ್ನು ನುಂಗಿದ 6 ತಿಂಗಳ ಬಳಿಕ ಆತನ ಹೊಟ್ಟೆಯಿಂದ ಆಪರೇಷನ್ ಮೂಲಕ ಮೊಬೈಲನ್ನು ಹೊರಗೆ ತೆಗೆಯಲಾಗಿದೆ.

ಈಜಿಪ್ಟ್​ನಲ್ಲಿ ಈ ಘಟನೆ ನಡೆದಿದೆ. ತಮ್ಮ ಆಸ್ಪತ್ರೆಗೆ ಬಂದ ರೋಗಿಯ ಹೊಟ್ಟೆನೋವಿನ ಕಾರಣ ತಿಳಿಯದೆ ಆ ವ್ಯಕ್ತಿಯ ಹೊಟ್ಟೆಯ ಎಕ್ಸ್ ರೇ ತೆಗೆದ ನಂತರ ಮೊಬೈಲ್ ಫೋನ್ ಪತ್ತೆಯಾಗಿದೆ. ಎಕ್ಸ್-ರೇ ವರದಿಯಲ್ಲಿ ಆತನ ಹೊಟ್ಟೆಯಲ್ಲಿ ಮೊಬೈಲ್ ಇರುವುದನ್ನು ಖಚಿತಪಡಿಸಿದ ನಂತರ ಆತ 6 ತಿಂಗಳ ಹಿಂದೆಯೇ ಆ ಮೊಬೈಲನ್ನು ನುಂಗಿರುವುದು ಬಯಲಾಯಿತು. ಮೊಬೈಲನ್ನು ನುಂಗಿದ ನಂತರ ವೈದ್ಯರ ಬಳಿ ಹೋಗಲು ಮುಜುಗರವಾಗಿ ಆತನ ಸುಮ್ಮನಿದ್ದ. ಆ ಮೊಬೈಲ್ ತನ್ನಷ್ಟಕ್ಕೆ ತಾನೇ ದೇಹದಿಂದ ಹೊರಗೆ ಹೋಗುತ್ತದೆ ಎಂದು ಆತ ಭಾವಿಸಿದ್ದ. ಆದರೆ, ಆ ಮೊಬೈಲ್​ನಿಂದಾಗಿ ಆತನಿಗೆ ವಿಪರೀತ ಕಿಬ್ಬೊಟ್ಟೆ ನೋವು ಶುರುವಾಗಿತ್ತು.

ದೇಹದೊಳಗಿನ ಮೊಬೈಲ್ ಫೋನಿನ ಕಾರಣದಿಂದ ಆ ವ್ಯಕ್ತಿ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದನು. ಆ ಮೊಬೈಲ್ ನುಂಗಿ ಆರು ತಿಂಗಳ ನಂತರ ಅಸ್ವಾನ್ ವಿಶ್ವವಿದ್ಯಾಲಯದ ಆಸ್ಪತ್ರೆಯ ವೈದ್ಯರ ಬಳಿ ತಪಾಸಣೆಗೆ ಹೋದ. ಆತನ ಎಕ್ಸ್ ರೇ ವರದಿಯಲ್ಲಿ ಮೊಬೈಲ್ ಇರುವುದು ಗೊತ್ತಾಯಿತು. ಈ ಮೊಬೈಲ್ ಆತನ ಹೊಟ್ಟೆ ಮತ್ತು ಕರುಳಿನಲ್ಲಿ ತೀವ್ರ ಸೋಂಕು ಉಂಟು ಮಾಡಿತ್ತು. ಆಸ್ಪತ್ರೆಯ ವೈದ್ಯರ ಪ್ರಕಾರ, ಆರು ತಿಂಗಳ ಕಾಲ ರೋಗಿಯ ಹೊಟ್ಟೆಯೊಳಗಿನ ಫೋನ್ ಆಹಾರವನ್ನು ತಡೆಹಿಡಿದು ತೀವ್ರ ಸೋಂಕಿಗೆ ಕಾರಣವಾಗಿತ್ತು.

ಇದನ್ನೂ ಓದಿ: Shocking News: ವಾಲಿಬಾಲ್ ಆಟಗಾರ್ತಿಯ ತಲೆ ಕತ್ತರಿಸಿ ಕೊಂದ ತಾಲಿಬಾನ್; ಅಫ್ಘಾನ್​ ಮಹಿಳೆಯರಿಗೆ ನರಕ ದರ್ಶನ

Shocking News: 10 ವರ್ಷದಿಂದ ದಿನವೂ ಗಂಡನ ಚಿತಾಭಸ್ಮ ತಿನ್ನುತ್ತಾಳೆ ಈ ಮಹಿಳೆ!