Shocking News: ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯ ಕಣ್ಣಿಗೆ ಕಚ್ಚಿದ ಇಲಿ; ಆಮೇಲೇನಾಯ್ತು?

| Updated By: ಸುಷ್ಮಾ ಚಕ್ರೆ

Updated on: May 18, 2022 | 4:43 PM

Viral News: 30 ವರ್ಷದ ರೂಪವತಿ ಎಂಬ ಮಹಿಳೆ ಕಳೆದ 45 ದಿನಗಳಿಂದ ಕೋಟಾದ ಎಂಬಿ ಆಸ್ಪತ್ರೆಯ ಸ್ಟ್ರೋಕ್ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಐಸಿಯುನಲ್ಲಿ ದಾಖಲಾಗಿದ್ದ ಅವರ ಕಣ್ಣಿಗೆ ಇಲಿ ಕಚ್ಚಿತ್ತು.

Shocking News: ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯ ಕಣ್ಣಿಗೆ ಕಚ್ಚಿದ ಇಲಿ; ಆಮೇಲೇನಾಯ್ತು?
ಐಸಿಯುದಲ್ಲಿರುವ ರೋಗಿ (ಸಾಂದರ್ಭಿಕ ಚಿತ್ರ)
Image Credit source: Google
Follow us on

ಕೋಟ: ರಾಜಸ್ಥಾನದ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ (ICU) ಚಿಕಿತ್ಸೆ ಪಡೆಯುತ್ತಿರುವ ಪಾರ್ಶ್ವವಾಯು ಪೀಡಿತ ಮಹಿಳೆಯೊಬ್ಬರ ಕಣ್ಣು ರೆಪ್ಪೆಯನ್ನು ಇಲಿ ಕಚ್ಚಿರುವ ಘಟನೆ ನಡೆದಿದೆ. ಪ್ಯಾರಾಲೈಸ್ ಆಗಿರುವ ಮಹಿಳೆಯ ಪತಿ ಈ ಬಗ್ಗೆ ಆರೋಪಿಸಿದ್ದಾರೆ. ಕೋಟಾ ರೈಲ್ವೇ ಕಾಲೋನಿ ನಿವಾಸಿ ದೇವೆಂದರ್ ಸಿಂಗ್ ಭಾಟಿ ಅವರ ಪತ್ನಿಯ ಕಣ್ಣಿನ ರೆಪ್ಪೆಯ ಗಾಯಕ್ಕೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಇಲಿ ಕಡಿತದಿಂದ ಈ ಗಾಯವಾಗಿದೆ ಎಂದು ಒಪ್ಪಿಕೊಂಡಿದ್ದಾರೆ.

30 ವರ್ಷದ ರೂಪವತಿ ಎಂಬ ಮಹಿಳೆ ಕಳೆದ 45 ದಿನಗಳಿಂದ ಕೋಟಾದ ಎಂಬಿ ಆಸ್ಪತ್ರೆಯ ಸ್ಟ್ರೋಕ್ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಐಸಿಯುನಲ್ಲಿ ದಾಖಲಾಗಿದ್ದ ಅವರ ಕಣ್ಣಿಗೆ ಇಲಿ ಕಚ್ಚಿತ್ತು. ಈ ಘಟನೆಯ ಕುರಿತು ತನಿಖೆ ನಡೆಸಲು ಆಸ್ಪತ್ರೆ ಪ್ರಾಧಿಕಾರವು ಮೂರು ಸದಸ್ಯರ ವೈದ್ಯರ ಸಮಿತಿಯನ್ನು ರಚಿಸಿದೆ. ಈ ಘಟನೆಯ ನಂತರ MBS ಆಸ್ಪತ್ರೆಯ ಅಧೀಕ್ಷಕ ನವೀನ್ ಸಕ್ಸೇನಾ ಕೋಟಾದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ನೀಡಿರುವ ಪ್ರಾಥಮಿಕ ವರದಿಯಲ್ಲಿ ರೂಪವತಿ ಅವರ ಕಣ್ಣು ರೆಪ್ಪೆಗೆ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಇಲಿಗಳು ಕಚ್ಚಿವೆ ಎಂದು ತಿಳಿಸಲಾಗಿದೆ. (Source)

“ಆದರೆ, ರೋಗಿಯ ಕಣ್ಣಿಗೆ ಯಾವುದೇ ಗಾಯವಾಗಿಲ್ಲ” ಎಂದು ಡಾ. ಸಕ್ಸೇನಾ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ರೂಪವತಿ ಅವರ ಪತಿ ಭಾಟಿ ಅವರು ತಮ್ಮ ಪತ್ನಿ ಆಸ್ಪತ್ರೆಯ ಪಾರ್ಶ್ವವಾಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಎರಡು ದಿನಗಳ ಹಿಂದಷ್ಟೇ ವೆಂಟಿಲೇಟರ್‌ ತೆಗೆಯಲಾಗಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ
Viral Video: ಶಾಲಾ ಸಮವಸ್ತ್ರದಲ್ಲಿಯೇ ಜಡೆ ಹಿಡಿದು ಹೊಡೆದಾಡಿದ ಬಾಲಕಿಯರು, ವಿಡಿಯೊ ವೈರಲ್
Viral News: ಮೆರವಣಿಗೆಗೆ ಬರದೆ ಕುಡಿದು ಗೆಳೆಯರೊಂದಿಗೆ ಡ್ಯಾನ್ಸ್​ ಮಾಡಿದ ವರ; ಬೇರೆಯವನನ್ನು ಮದುವೆಯಾದ ವಧು!
Viral News: ಕೆಟ್ಟ ಕನಸಿಗೆ ಹೆದರಿ ಕದ್ದ ದೇವರ ವಿಗ್ರಹಗಳನ್ನು ವಾಪಾಸ್ ತಂದಿಟ್ಟ ಕಳ್ಳರು; ಅಂಥದ್ದೇನಾಯ್ತು?
Viral Video: ಮೂರು ಅನಾಥ ಹುಲಿ ಮರಿಗಳನ್ನು ಸಾಕುತ್ತಿದೆ ಈ ನಾಯಿ!; ವಿಡಿಯೋ ನೋಡಿ ನೆಟ್ಟಿಗರು ಶಾಕ್

ಇದನ್ನೂ ಓದಿ: Shocking News: ಮದುವೆ ಮಂಟಪದಲ್ಲೇ ವಧುವಿಗೆ ಶೂಟ್ ಮಾಡಿ ಕೊಂದ ಮಾಜಿ ಪ್ರಿಯಕರ!

ಪಾರ್ಶ್ವವಾಯು ದಾಳಿಯ ನಂತರ ಅವಳು ತನ್ನ ಕೈಕಾಲುಗಳನ್ನು ಚಲಿಸಲು ಅಥವಾ ಮಾತನಾಡಲು ಸಾಧ್ಯವಾಗಿರಲಿಲ್ಲ ಎಂದು ರೂಪವತಿ ಅವರ ಗಂಡ ಹೇಳಿದ್ದಾರೆ. ರಾತ್ರಿ ಮಲಗುವಾಗ ಮುಖಕ್ಕೆ ಬೆಳಕು ಬೀಳಬಾರದೆಂದು ಆಕೆಯ ಮುಖಕ್ಕೆ ಬಟ್ಟೆ ಹಾಕಿದ್ದೆ. ಆದರೆ, ಮಂಗಳವಾರ ಮುಂಜಾನೆ 3 ಗಂಟೆಗೆ ನನ್ನ ಪತ್ನಿಯ ಅಳುವಿಗೆ ಎಚ್ಚರಗೊಂಡು ಬಟ್ಟೆಯನ್ನು ತೆಗೆದಾಗ ಆಕೆಯ ಮುಖವು ರಕ್ತದಿಂದ ಆವೃತವಾಗಿದ್ದು, ಕಣ್ಣಿನ ರೆಪ್ಪೆಯ ಗಾಯದಿಂದ ರಕ್ತ ಹೊರಬರುವುದನ್ನು ನೋಡಿ ಗಾಬರಿಯಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ

ಭಾಟಿ ಅವರು ತಕ್ಷಣ ಕರ್ತವ್ಯ ವೈದ್ಯರಿಗೆ ಮಾಹಿತಿ ನೀಡಿದರು. ಅವರು ಕೆಲವು ಕೀಟಗಳು ಕಣ್ಣಿನ ರೆಪ್ಪೆಯನ್ನು ಕಚ್ಚಿವೆ ಮತ್ತು ಪ್ರಾಥಮಿಕ ಚಿಕಿತ್ಸೆ ನೀಡಿದರೆ ಮಂಗಳವಾರ ಬೆಳಿಗ್ಗೆ ಮತ್ತೊಂದು ವೈದ್ಯರ ತಂಡವು ಗಾಯವನ್ನು ಡ್ರೆಸ್ ಮಾಡಲಿದೆ ಎಂದು ಹೇಳಿದರು. ಆದರೆ, ಆಕೆಯ ಬಲ ಕಣ್ಣಿನ ರೆಪ್ಪೆಯ ಮೇಲೆ ಆಳವಾದ ಗಾಯವಿದ್ದು, ಕೀಟಗಳು ಕಚ್ಚಿರುವ ಸಾಧ್ಯತೆ ಇರಲಿಲ್ಲ. ಇಲಿಗಳು ಕಣ್ಣಿನ ರೆಪ್ಪೆಯನ್ನು ಕಚ್ಚಿದ್ದವು ಮತ್ತು ವೈದ್ಯರು ಇಲಿಗಳು ಕಚ್ಚಿದ್ದರಿಂದಲೇ ಈ ಗಾಯವಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ: Shocking News: ಬೆಳ್ಳಿ ಗೆಜ್ಜೆ ಆಸೆಗೆ 4 ವರ್ಷದ ಬಾಲಕಿಯನ್ನು ಕೊಂದು, ಮನೆ ಹಿಂದೆ ಹೂತಿಟ್ಟ ಮಹಿಳೆ!

ಕೋಟಾದ ಹೆಚ್ಚುವರಿ ಡಿಎಂಗೆ ನೀಡಿದ ವರದಿಯಲ್ಲಿ, ವೈದ್ಯಕೀಯ ಅಧೀಕ್ಷಕರು ಆಸ್ಪತ್ರೆಯು ಸೌಲಭ್ಯವನ್ನು ಇಲಿಗಳು, ಜಿರಳೆಗಳು, ತಿಗಣೆಗಳು, ಸೊಳ್ಳೆಗಳು ಮತ್ತು ಇತರ ಕೀಟಗಳಿಂದ ಮುಕ್ತವಾಗಿಡಲು ಸೂಕ್ತ ಕಾಳಜಿ ವಹಿಸುತ್ತಿದೆ ಎಂದು ವಿವರಿಸಿದರು. ಕೆಲಸದ ಗುತ್ತಿಗೆ ಪಡೆದಿರುವ ಕೀಟ ನಿಯಂತ್ರಣ ಸಂಸ್ಥೆಯು ಪ್ರತಿ ತಿಂಗಳು ಇಡೀ ಆಸ್ಪತ್ರೆ ಆವರಣವನ್ನು ಕೀಟನಾಶಕ ಚಿಕಿತ್ಸೆಗೆ ಒಳಪಡಿಸುತ್ತಿದೆ ಎಂದು ಡಾ. ಸಕ್ಸೇನಾ ಎಡಿಎಂಗೆ ನೀಡಿದ ವರದಿಯಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ