ಜೈಪುರ: ಕೆಲವು ಹಳ್ಳಿಗಳಲ್ಲಿ, ಕೆಲವು ಜನರು ಈಗಲೂ ಮರುಜನ್ಮ ಅಥವಾ ಪುನರ್ಜನ್ಮದಲ್ಲಿ ನಂಬಿಕೆ ಇಟ್ಟುಕೊಂಡಿದ್ದಾರೆ. ಸತ್ತವರು ಮರುಜನ್ಮ ಪಡೆಯುತ್ತಾರೆ ಎಂಬ ನಂಬಿಕೆ ಅವರಲ್ಲಿದೆ. ಆದರೆ, ರಾಜಸ್ಥಾನದ ಕೋಟಾ ಜಿಲ್ಲೆಯ ಸಂಗೋಡ್ ಪ್ರದೇಶದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ವಯಸ್ಸಾದ ಮಹಿಳೆಯ ಮನೆಗೆ ಹಾವೊಂದು ನುಗ್ಗಿತ್ತು. ಈ ವಿಷಯ ತಿಳಿದ ಅಕ್ಕಪಕ್ಕದ ಜನರು ಹಾವನ್ನು ಕೊಲ್ಲಲು ಓಡಿಬಂದರು. ಆದರೆ, ಆ ಹಾವನ್ನು ಕೊಲ್ಲಲು ಮನೆಯೊಳಗಿದ್ದ ಆ ವಯಸ್ಸಾದ ಮಹಿಳೆ ಒಪ್ಪಲೇ ಇಲ್ಲ. ಈ ಹಾವೇ ನನ್ನ ಮಗ. ನನ್ನ ಮಗ ಹಾವಿನ ರೂಪದಲ್ಲಿ ಪುನರ್ಜನ್ಮ ತಳೆದಿದ್ದಾನೆ. ಆತ ನನ್ನನ್ನು ನೋಡಲು ಬಂದಿದ್ದಾನೆ. ನೀವ್ಯಾರೂ ಅವನಿಗೆ ತೊಂದರೆ ಕೊಡಬೇಡಿ ಎಂದು ಅಕ್ಕಪಕ್ಕದ ಮನೆಯವರನ್ನು ಮನೆಯೊಳಗೂ ಬರಲು ಬಿಡಲಿಲ್ಲ!
ನನ್ನ ಮಗ ಬಹಳ ದಿನಗಳ ನಂತರ ಮನೆಗೆ ಮರಳಿದ್ದಾನೆ. ಅವನಿಗೆ ನೀವು ತೊಂದರೆ ಕೊಡಬೇಡಿ ಎಂದು ಹೇಳಿದ ಆ ಮಹಿಳೆ ಹಾವನ್ನು ತಬ್ಬಿ ಮುದ್ದಾಡಿದ್ದಾಳೆ. ಮಹಿಳೆಯ ಈ ವರ್ತನೆಯನ್ನು ಕಂಡು ಜನರು ಆಶ್ಚರ್ಯಚಕಿತರಾಗಿದ್ದಾರೆ. ವಿಚಿತ್ರವೆಂದರೆ, ಆ ಹಾವು ಕೂಡ ಮಹಿಳೆಗೆ ಯಾವುದೇ ಹಾನಿ ಮಾಡಿಲ್ಲ.
ಇದನ್ನೂ ಓದಿ: Viral Video: ನಾಗರಹಾವಿನ ತಲೆಗೆ ಚುಂಬಿಸಿದ ಯುವತಿ; ಧೈರ್ಯಶಾಲಿಗಳು ಮಾತ್ರ ನೋಡಿ
ಮಾಹಿತಿಯ ಪ್ರಕಾರ, ಸಂಗೋಡು ಪಟ್ಟಣದ ಸಮೀಪವಿರುವ ರಸ್ಕಪುರಿಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ವೃದ್ಧೆ ಬಡಾಯಿ ಬಾಯಿ ಅವರ ಮನೆಗೆ ಮಂಗಳವಾರ ನಾಗರಹಾವು ನುಗ್ಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಗ್ರಾಮಸ್ಥರು ಅಲ್ಲಿಗೆ ಆಗಮಿಸಿ ಹಾವನ್ನು ಕೊಲ್ಲಲು ಸಿದ್ಧತೆ ನಡೆಸಿದ್ದಾರೆ. ಆದರೆ ಆ ವೃದ್ಧೆ ಅವರನ್ನು ತಡೆದಿದ್ದಾರೆ. ನಮ್ಮ ಮನೆಗೆ ಹಾವಿನ ರೂಪದಲ್ಲಿ ಮಗನೇ ಬಂದಿದ್ದಾನೆ ಎಂದು ಪಟ್ಟು ಹಿಡಿದಿದ್ದಾರೆ.
ಗ್ರಾಮಸ್ಥರ ಪ್ರಕಾರ, ಇದಾದ ನಂತರ ವೃದ್ಧೆ ಹಾವಿನ ಮುಂದೆ ನಿಂತು ನೀನು ದೇವರಾಗಿದ್ದರೆ ಅಥವಾ ನನ್ನ ಮಗನಾಗಿದ್ದರೆ ಮನೆಯಲ್ಲೇ ಇರು, ಇಲ್ಲವಾದರೆ ಹೊರಗೆ ಹೋಗು ಎಂದು ಹೇಳಿದ್ದಾರೆ. ಆದರೆ ಹಾವು ಅಲ್ಲಿಂದ ಕದಲಲಿಲ್ಲ. ಆ ನಂತರ ಮಹಿಳೆ ಮತ್ತೆ ಈ ಹಾವು ನನ್ನ ಮಗನಾಗಿದ್ದರೆ ನನ್ನ ಮಡಿಲ ಮೇಲೆ ಬರಬೇಕು ಎಂದಿದ್ದಾರೆ. ಅಚ್ಚರಿಯ ಸಂಗತಿಯೆಂದರೆ ಆ ಬಳಿಕ ಆ ಹಾವು ವೃದ್ಧೆಯ ಮಡಿಲಲ್ಲಿ ಹೋಗಿ ಕುಳಿತಿತ್ತು. ಈ ದೃಶ್ಯವನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.
ಇದನ್ನೂ ಓದಿ: ಮುತ್ತು ಕೊಡಲು ಬಂದ ಯುವಕನ ತುಟಿ ಕಚ್ಚಿದ ನಾಗರಹಾವು!
ಬಳಿಕ, ಖುಷಿಯಿಂದ ಹಾವನ್ನು ಹಿಡಿದುಕೊಂಡ ವೃದ್ಧೆ ಆ ಹಾವನ್ನು ಕುತ್ತಿಗೆಗೆ ಹಾಕಿಕೊಂಡು, ತಬ್ಬಿಕೊಂಡು ಸಂಭ್ರಮಿಸಿದ್ದಾರೆ. ಆದರೆ, ಆಗಲೂ ಹಾವು ಆಕೆಗೆ ಏನೂ ಮಾಡಿಲ್ಲ. ಆ ಮಹಿಳೆಯೊಂದಿಗೆ ಹಾವು ಕೂಡ ಚೇಷ್ಟೆ ಮಾಡಲು ಪ್ರಾರಂಭಿಸಿತು. ಈ ವಿಷಯ ಗ್ರಾಮ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಆ ವೃದ್ಧೆಯ ಚಿಕ್ಕ ಮಗ ಹಂಸರಾಜ್ ಸುಮಾರು 18 ವರ್ಷಗಳ ಹಿಂದೆ ಪಾರ್ವತಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದ. ಆ ನಂತರ ಹಂಸರಾಜ್‌ನ ತಾಯಿ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಮಂಗಳವಾರ ಹಾವು ಮನೆಗೆ ಬಂದಾಗ ಅದನ್ನು ತನ್ನ ಮಗ ಎಂದು ಆಕೆ ಸಂಭ್ರಮಿಸಿದ್ದಾರೆ. ಆ ಹಾವನ್ನು ಆ ವೃದ್ಧೆ ತನ್ನ ಮನೆಯಲ್ಲೇ ಇಟ್ಟುಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ