Shocking News: ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ ಗೋಬಿ ಮಂಚೂರಿಯಲ್ಲಿತ್ತು ಚಿಕನ್ ಪೀಸ್; ಶಾಕ್ ಆದ ಸಸ್ಯಾಹಾರಿ!

ತಮಿಳಿನ ಗೀತರಚನೆಕಾರ ಕೋ ಶೇಷ ಎಂಬುವವರು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಲಾದ ತಮ್ಮ ಸಸ್ಯಾಹಾರಿ ಊಟದಲ್ಲಿ ಕೋಳಿಯ ತುಂಡುಗಳು ಸಿಕ್ಕಿವೆ ಎಂದು ಆರೋಪಿಸಿದ್ದಾರೆ.

Shocking News: ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ ಗೋಬಿ ಮಂಚೂರಿಯಲ್ಲಿತ್ತು ಚಿಕನ್ ಪೀಸ್; ಶಾಕ್ ಆದ ಸಸ್ಯಾಹಾರಿ!
ಗೋಬಿ ಮಂಚೂರಿಯಲ್ಲಿ ಚಿಕನ್ ಪೀಸ್
Edited By:

Updated on: Aug 18, 2022 | 7:38 PM

ಚೆನ್ನೈ: ಸ್ವಿಗ್ಗಿ (Swiggy) ಮತ್ತು ಜೊಮ್ಯಾಟೋ (Zomato) ಬಹಳ ಪ್ರಸಿದ್ಧ ಆನ್​ಲೈನ್ ಫುಡ್ ಸರ್ವಿಸ್ ಆ್ಯಪ್​ಗಳಾಗಿವೆ. ಆದರೆ, ಇವುಗಳಲ್ಲಿ ಏನೋ ಆರ್ಡರ್ ಮಾಡಲು ಹೋಗಿ ಇನ್ನೇನೋ ಡೆಲಿವರಿ ಬಂದ ಉದಾಹರಣೆಗಳು ಸಾಕಷ್ಟಿವೆ. ತಮಿಳುನಾಡಿನ (Tamil Nadu) ಸಸ್ಯಾಹಾರಿಯೊಬ್ಬರು ಸ್ವಿಗ್ಗಿಯಲ್ಲಿ ಗೋಬಿ ಮಂಚೂರಿ ಆರ್ಡರ್ ಮಾಡಿದ್ದರು. ಆದರೆ, ಅವರಿಗೆ ಬಂದ ಗೋಬಿ ಮಂಚೂರಿಯಲ್ಲಿ ಚಿಕನ್ ಪೀಸ್ ಸಿಕ್ಕಿತ್ತು. ಇದರಿಂದ ಕೋಪಗೊಂಡ ಅವರು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ತಮಿಳಿನ ಗೀತರಚನೆಕಾರ ಕೋ ಶೇಷ ಎಂಬುವವರು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಲಾದ ತಮ್ಮ ಸಸ್ಯಾಹಾರಿ ಊಟದಲ್ಲಿ ಕೋಳಿಯ ತುಂಡುಗಳು ಸಿಕ್ಕಿವೆ ಎಂದು ಆರೋಪಿಸಿ ಪೋಸ್ಟ್ ಮಾಡಿದ್ದಾರೆ. ಕಟ್ಟುನಿಟ್ಟಾದ ಸಸ್ಯಾಹಾರಿಯಾಗಿರುವ ಕೋ ಶೇಷಾ ಸ್ವಿಗ್ಗಿಯಲ್ಲಿ ಪಟ್ಟಿ ಮಾಡಲಾದ ದಿ ಬೌಲ್ ಕಂಪನಿ ಎಂಬ ರೆಸ್ಟೋರೆಂಟ್‌ನಿಂದ ಕಾರ್ನ್ ಫ್ರೈಡ್ ರೈಸ್‌ನೊಂದಿಗೆ ಗೋಬಿ ಮಂಚೂರಿಯನ್‌ಗೆ ಆರ್ಡರ್ ಮಾಡಿದ್ದರು. ಅವರು ಆರ್ಡರ್ ಸ್ವೀಕರಿಸಿದಾಗ, ಅವರು ತಮ್ಮ ಊಟದಲ್ಲಿ ಕೋಳಿ ತುಂಡುಗಳನ್ನು ಕಂಡು ಗಾಬರಿಗೊಂಡರು.

ಇದನ್ನೂ ಓದಿ: Viral Video: ಸ್ವಾತಂತ್ರ್ಯೋತ್ಸವದ ವೇಳೆ ನಾಗಿಣಿ ಡ್ಯಾನ್ಸ್​ ಮಾಡಿದ ಪೊಲೀಸರ ವಿಡಿಯೋ ವೈರಲ್; ಆಮೇಲೇನಾಯ್ತು?

ಈ ಫೋಟೊವನ್ನು ಹಂಚಿಕೊಂಡಿರುವ ಕೋ ಶೇಷಾ, ನಾನು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ “ಗೋಬಿ ಮಂಚೂರಿಯನ್ ವಿತ್ ಕಾರ್ನ್ ಫ್ರೈಡ್ ರೈಸ್”ನಲ್ಲಿ ಕೋಳಿ ಮಾಂಸದ ತುಂಡುಗಳು ಕಂಡುಬಂದಿವೆ. ಇನ್ನೂ ಬೇಸರದ ವಿಷಯವೆಂದರೆ ಈ ಬಗ್ಗೆ ಮಾಹಿತಿ ನೀಡಿದ ನಂತರ ನನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕೆ ಸ್ವಿಗ್ಗಿ ಕಸ್ಟಮರ್ ಕೇರ್ ನನಗೆ ರೂ. 70 ರೂ. ಕೊಡುವುದಾಗಿ ಹೇಳಿದೆ ಎಂದು ಟ್ವೀಟ್ ಮಾಡಿದ್ದಾರೆ.

ನಾನು ನನ್ನ ಜೀವನದುದ್ದಕ್ಕೂ ಕಟ್ಟುನಿಟ್ಟಾದ ಸಸ್ಯಾಹಾರಿಯಾಗಿದ್ದೇನೆ. ಸ್ವಿಗ್ಗಿಯವರು ಕೇವಲ 70 ರೂ. ಕೊಟ್ಟು ನನ್ನ ಧಾರ್ಮಿಕ ಭಾವನೆಯನ್ನು ಖರೀದಿಸಲು ಯೋಚಿಸುವುದು ಬಹಳ ಅಸಹ್ಯಕರವಾಗಿದೆ. ಸ್ವಿಗ್ಗಿಯ ಪ್ರತಿನಿಧಿಯು ನನ್ನನ್ನು ವೈಯಕ್ತಿಕವಾಗಿ ಕ್ಷಮೆ ಯಾಚಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ನಾನು ಕಾನೂನು ಪರಿಹಾರ ಕೋರಲಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ