Viral: ಅಂಗಡಿಗೆ ನುಗ್ಗಿ ದಾಂಧಲೆ ಮಾಡಿದ ಗೂಳಿ
Bull Attack : ಹಾಡುಹಗಲೇ ಗೂಳಿಯೊಂದು ಅಂಗಡಿ ಹೊಕ್ಕು ಧ್ವಂಸ ಮಾಡಿದ ಘಟನೆ ಪೆರುವಿನಲ್ಲಿ ನಡೆದಿದೆ.
Bull in Peru : ನಮಗಾದರೆ ಬಾಯಿ ಇದೆ. ಬೇಕುಬೇಡಗಳನ್ನು ಹೇಳಿಕೊಂಡು ನಮಗೆ ಬೇಕಾದಂತೆ ಇರಬಹುದು. ಆದರೆ ಪ್ರಾಣಿಗಳಿಗೆ? ಅವೇನಿದ್ದರೂ ಮನುಷ್ಯನ ನಿಯಂತ್ರಣದಲ್ಲಿಯೇ ಇರಬೇಕಲ್ಲವೆ? ಅವುಗಳ ಇಷ್ಟ ಕಷ್ಟಗಳನ್ನು ಮನುಷ್ಯ ಪೂರ್ತಿ ಅರ್ಥ ಮಾಡಿಕೊಳ್ಳುತ್ತಾನಾ? ತನ್ನ ಉಪಯೋಗಕ್ಕೆ ಬೇಕಾದಂತೆಯೇ ಬಳಸಿಕೊಳ್ಳುವುದಲ್ಲವೆ? ಯಾವಾಗ ಎಲ್ಲಿ ಹೇಗೆ ಅದರ ಉಪಯೋಗ ತೆಗೆದುಕೊಳ್ಳಬೇಕು ಮತ್ತು ಯಾವಾಗ ಅದನ್ನು ಕಸಾಯಿ ಖಾನೆಗೆ ಸಾಗಿಸಬೇಕು ಇತ್ಯಾದಿ ನಿರ್ಣಯಗಳೆಲ್ಲ ಅವನವೇ ಅಲ್ಲವಾ? ಇಲ್ಲಿರುವ ಈ ಗೂಳಿಯನ್ನು ನೋಡಿ.
ಪೆರುವಿನ ರಾಜಧಾನಿ ಲಿಮಾದಲ್ಲಿ ಮೊನ್ನೆ ಈ ಗೂಳಿ ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿದೆ. ಪರಿಣಾಮವಾಗಿ ಒಬ್ಬರು ಗಾಯಗೊಂಡಿದ್ದಾರೆ. ಕಸಾಯಿಖಾನೆಗೆ ಸಾಗಿಸುತ್ತಿದ್ದ ಟ್ರಕ್ನಿಂದ ಈ ಗೂಳಿ ತಪ್ಪಿಸಿಕೊಂಡು ಬಂದಿದೆ. ಅಂಗಡಿಯ ಆವರಣದಲ್ಲಿರುವ ಎಲ್ಲ ಸಾಮಾನುಗಳನ್ನು ಕೆಡವಿ ನಂತರ ಅಂಗಡಿಯ ಒಳಗೂ ಹೊಕ್ಕಿದೆ. ಭಯಭೀತರಾದ ಸ್ಥಳೀಯರು ದಿಕ್ಕಾಪಾಲಾಗಿ ಓಡಿದ್ದಾರೆ. ಗಾಯಗೊಂಡ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸುಮಾರು 40 ನಿಮಿಷಗಳ ನಂತರ ಸ್ಥಳೀಯರು ಪ್ರಯಾಸದಿಂದ ಅದರ ಕಾಲುಗಳನ್ನು ಕಟ್ಟಿಹಾಕಿ ಅಂತೂ ಸೆರೆ ಹಿಡಿದು ಸಾಗಿಸಿದ್ದಾರೆ. ಗೂಳಿಗೆ ಏನಾಗಿತ್ತೋ ಯಾಕೆ ಹೀಗೆ ಮಾಡುತ್ತಿತ್ತೋ ಎನ್ನುವುದು ತಿಳಿದು ಬಂದಿಲ್ಲ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ