Shocking News: ಬಡ ರಿಕ್ಷಾ ಚಾಲಕನಿಗೆ 3.47 ಕೋಟಿ ರೂ. ಆದಾಯ ತೆರಿಗೆ ವಿಧಿಸಿದ ಐಟಿ ಅಧಿಕಾರಿಗಳು!

| Updated By: ಸುಷ್ಮಾ ಚಕ್ರೆ

Updated on: Oct 25, 2021 | 4:53 PM

ಮಥುರಾದ ಬಕಲ್ಪುರ್ ಪ್ರದೇಶದ ಅಮರ್ ಕಾಲೋನಿಯ ನಿವಾಸಿ ಪ್ರತಾಪ ಸಿಂಗ್ ಹಲವು ವರ್ಷಗಳಿಂದ ಟಾಂಗಾ (ಎಳೆದುಕೊಂಡು ಹೋಗುವ ರಿಕ್ಷಾ) ನಡೆಸುತ್ತಿದ್ದಾರೆ. ಅವರಿಗೆ 3,47,54,896 ರೂ. ಆದಾಯ ತೆರಿಗೆ ಪಾವತಿಸುವಂತೆ ಐಟಿ ಇಲಾಖೆ ನೋಟಿಸ್ ನೀಡಿದೆ.

Shocking News: ಬಡ ರಿಕ್ಷಾ ಚಾಲಕನಿಗೆ 3.47 ಕೋಟಿ ರೂ. ಆದಾಯ ತೆರಿಗೆ ವಿಧಿಸಿದ ಐಟಿ ಅಧಿಕಾರಿಗಳು!
ಸಾಂದರ್ಭಿಕ ಚಿತ್ರ
Follow us on

ಮಥುರಾ: ಉತ್ತರ ಪ್ರದೇಶ ಜಿಲ್ಲೆಯ ಮಥುರಾದಲ್ಲಿ ಬಡ ರಿಕ್ಷಾ (ಟಾಂಗಾ) ಚಾಲಕನೊಬ್ಬನಿಗೆ 3 ಕೋಟಿ ರೂ.ಗೂ ಹೆಚ್ಚು ಆದಾಯ ತೆರಿಗೆ ಪಾವತಿ ಮಾಡುವಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ಕಳುಹಿಸಿದ್ದಾರೆ. ಈ ನೋಟಿಸ್ ನೋಡಿ ಕಂಗಾಲಾದ ಟಾಂಗಾ ಚಾಲಕ ಪೊಲೀಸರಿಗೆ ದೂರು ನೀಡಿದ್ದಾರೆ.

ಮಥುರಾದ ಬಕಲ್ಪುರ್ ಪ್ರದೇಶದ ಅಮರ್ ಕಾಲೋನಿಯ ನಿವಾಸಿ ಪ್ರತಾಪ ಸಿಂಗ್ ಹಲವು ವರ್ಷಗಳಿಂದ ಟಾಂಗಾ (ಎಳೆದುಕೊಂಡು ಹೋಗುವ ರಿಕ್ಷಾ) ನಡೆಸುತ್ತಿದ್ದಾರೆ. ಅವರಿಗೆ ಐಟಿ ಇಲಾಖೆಯಿಂದ ನೋಟಿಸ್ ಬಂದ ಹಿನ್ನೆಲೆಯಲ್ಲಿ ವಂಚನೆಯ ಆರೋಪದಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಪ್ರತಾಪ್ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿದ್ದು, ನನಗೆ ಅಕ್ಟೋಬರ್ 19ರಂದು ಐಟಿ ಅಧಿಕಾರಿಗಳಿಂದ ಫೋನ್ ಬಂದಿತ್ತು. ನನಗೆ 3,47,54,896 ರೂ. ತೆರಿಗೆ ನೀಡುವಂತೆ ನೋಟಿಸ್ ನೀಡಲಾಗಿದೆ. ತಳ್ಳುವ ರಿಕ್ಷಾದಿಂದ ಬರುವ ಆದಾಯದಿಂದಲೇ ಬದುಕುತ್ತಿರುವ ನಮ್ಮ ಬಳಿ ಅಷ್ಟೊಂದು ಹಣ ಎಲ್ಲಿರುತ್ತದೆ? ಎಂದು ಅವರು ಪ್ರಶ್ನಿಸಿದ್ದಾರೆ.

ಬ್ಯಾಂಕ್​ಗೆ ನೀಡಲು ಮಾರ್ಚ್ 15ರಂದು ತೇಜ್ ಪ್ರಕಾಶ್ ಉಪಾಧ್ಯಾಯ ಒಡೆತನದ ಬಕಲ್‌ಪುರದ ಜನ್ ಸುವಿಧಾ ಕೇಂದ್ರದಲ್ಲಿ ಪ್ಯಾನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದೆ. ಸಂಜಯ್ ಸಿಂಗ್ ಎಂಬುವವರಿಂದ ಪಾನ್ ಕಾರ್ಡ್​ ಜೆರಾಕ್ಸ್​ ಪ್ರತಿಯನ್ನು ತೆಗೆದುಕೊಂಡಿದ್ದೆ. ಆ ವೇಳೆ ಯಾರೋ ನನಗೆ ಮೋಸ ಮಾಡಿದ್ದಾರೆ ಎನಿಸುತ್ತಿದೆ. ನಾನು ಅನಕ್ಷರಸ್ಥನಾಗಿರುವುದರಿಂದ ನನಗೆ ಒರಿಜಿನಲ್ ಪಾನ್ ಕಾರ್ಡ್ ಮತ್ತು ಕಲರ್ ಜೆರಾಕ್ಸ್​ನ ಪಾನ್ ಕಾರ್ಡ್​ ನಡುವಿನ ವ್ಯತ್ಯಾಸ ಗೊತ್ತಾಗಿಲ್ಲ. ನನ್ನ ಒರಿಜಿನಲ್ ಪಾನ್ ಕಾರ್ಡನ್ನು ಆತನೇ ಇಟ್ಟುಕೊಂಡು ಯಾಮಾರಿಸಿದ್ದಾನೆ ಎಂದು ಪ್ರತಾಪ್ ಸಿಂಗ್ ಆರೋಪಿಸಿದ್ದಾರೆ.

ಅಕ್ಟೋಬರ್ 19 ರಂದು ತನಗೆ ಐಟಿ ಅಧಿಕಾರಿಗಳಿಂದ ಕರೆ ಬಂದಿತ್ತು. ನಾನು 3,47,54,896 ರೂ. ತೆರಿಗೆ ಪಾವತಿಸಬೇಕೆಂದು ನೋಟಿಸ್ ನೀಡಲಾಗಿದೆ. 2018-19ನೇ ಸಾಲಿಗೆ ವ್ಯಾಪಾರಿಯ ವಹಿವಾಟು 43,44,36,201 ರೂ. ಆಗಿದ್ದು, ಯಾರೋ ಆತನನ್ನು ಯಾಮಾರಿಸಿ ಆತನ ಹೆಸರಿನ ಮೇಲೆ ಜಿಎಸ್‌ಟಿ ಸಂಖ್ಯೆ ಪಡೆದಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Shocking News: ಇಟ್ಟಿಗೆ ಎಸೆದು ಮನುಷ್ಯನ ಪ್ರಾಣ ತೆಗೆದ ಕೋತಿ!; ದೆಹಲಿಯಲ್ಲೊಂದು ಶಾಕಿಂಗ್ ಘಟನೆ

Viral News: ಆಟೋರಿಕ್ಷಾದಲ್ಲಿದ್ದ ಪ್ರಯಾಣಿಕನ ಕೈಯಿಂದ 1 ಲಕ್ಷ ರೂ. ಕಿತ್ತೆಸೆದ ಮಂಗ! ನೋಟುಗಳೆಲ್ಲಾ ರಸ್ತೆ ಪಾಲು