ಪುಣೆ: ಇದು ನೀವು ಊಹಿಸಲೂ ಸಾಧ್ಯವಾಗದ ಘಟನೆ. ಪುಣೆಯ ವಿಸ್ತಾರವಾದ ಮರ್ಸಿಡಿಸ್ ಬೆಂಜ್ ಕಾರ್ಖಾನೆಯೊಳಗೆ (Mercedes Benz factory) ಚಿರತೆಯೊಂದು ನುಗ್ಗಿ, ಆ ಫ್ಯಾಕ್ಟರಿ ತುಂಬ ಅಡ್ಡಾಡಿರುವ ವಿಡಿಯೋ ವೈರಲ್ (Video Viral) ಆಗಿದೆ. ಚಿರತೆ ಬಂದ ಪರಿಣಾಮದಿಂದ ಬೆಂಜ್ ಕಾರ್ಖಾನೆಯಲ್ಲಿ ಸುಮಾರು 6 ಗಂಟೆಗಳ ಕಾಲ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ವೈಲ್ಡ್ಲೈಫ್ SOS ತಂಡದ ಸತತ ಪ್ರಯತ್ನದಿಂದ ಸುಮಾರು 2ರಿಂದ 3 ವರ್ಷದ ಗಂಡು ಚಿರತೆಯನ್ನು ಸೆರೆಹಿಡಿದು, ತೆಗೆದುಕೊಂಡು ಹೋಗಲಾಗಿದೆ. ಮರ್ಸಿಡಿಸ್ ಬೆಂಜ್ ಕಾರ್ಖಾನೆಯ ತುಂಬ ಓಡಾಡಿದ ಚಿರತೆಯನ್ನು ನೋಡಿ ಸಿಬ್ಬಂದಿ ದಿಕ್ಕಾಪಾಲಾಗಿ ಓಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಕೂಡ ಆಘಾತಗೊಂಡಿದ್ದಾರೆ.
ಬೆಳಗಿನ ಜಾವ ಐಷಾರಾಮಿ ಕಾರು ಬೆಂಜ್ ತಯಾರಿಕಾ ಕಾರ್ಖಾನೆ ಆವರಣದಲ್ಲಿ ಸಣ್ಣ ಚಿರತೆ ಮರಿಯೊಂದು ಓಡಾಡುತ್ತಿರುವುದನ್ನು ಗಮನಿಸಿದ ಚಕನ್ ಸ್ಥಾವರದ ಕಾರ್ಮಿಕರು ಗಾಬರಿಗೊಂಡು ಎಲ್ಲರನ್ನೂ ಅಲರ್ಟ್ ಮಾಡಿದರು. ಚಿರತೆ ಒಳಗೆ ಬಂದಿರುವುದನ್ನು ನೋಡಿ ಗಾಬರಿಯಾದ ಅಲ್ಲಿದ್ದ ಸಿಬ್ಬಂದಿ ಓಡಿಹೋಗಿದ್ದಾರೆ. ನಂತರ ಮಹಾರಾಷ್ಟ್ರ ಅರಣ್ಯ ಇಲಾಖೆಯ ತಂಡವು ಸ್ಥಳಕ್ಕೆ ಆಗಮಿಸಿ 100 ಎಕರೆ ವಿಸ್ತೀರ್ಣದಲ್ಲಿರುವ ಬೆಂಜ್ ಉತ್ಪಾದನಾ ಘಟಕದ ಪರಿಸ್ಥಿತಿಯ ಉಸ್ತುವಾರಿ ವಹಿಸಿತು.
Surprise visitor at @MercedesBenzInd car plant today
Forest dept officials are trying to rescue the Leopard. All employees told to go home, no production or dispatches today pic.twitter.com/PelLyiXSKA— Sirish Chandran (@SirishChandran) March 21, 2022
ಚಿರತೆಯನ್ನು ಬಲೆಗೆ ಬೀಳಿಸಲು ಮತ್ತು ರಕ್ಷಿಸಲು ಸಹಾಯ ಮಾಡಲು ಎಸ್ಒಎಸ್ ತಂಡವನ್ನು ಪಶುವೈದ್ಯರೊಂದಿಗೆ ಕರೆಸಲಾಯಿತು. ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಪೊಲೀಸರ ಸಲಹೆಯ ಮೇರೆಗೆ ಸುತ್ತಮುತ್ತಲಿನ ಕಾರ್ಮಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಸುಮಾರು ಆರು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಡಾ. ಶುಭಂ ಪಾಟೀಲ್ ಮತ್ತು ಡಾ. ನಿಖಿಲ್ ಬಂಗಾರ್ ಅವರನ್ನೊಳಗೊಂಡ ತಂಡಗಳು ಬೆಂಜ್ ಕಾರ್ಖಾನೆಯ ಶೆಡ್ ಒಂದರ ಮಹಡಿಯಲ್ಲಿ ಅಡಗಿದ್ದ ಚಿರತೆಯನ್ನು ಪತ್ತೆ ಹಚ್ಚಿ ನಂತರ ಆ ಪ್ರದೇಶವನ್ನು ಭದ್ರಪಡಿಸಿದರು.
ನಂತರ ಎರಡು ರಕ್ಷಣಾ ತಂಡಗಳು ಕಾರ್ಖಾನೆಯೊಳಗೆ ಅಚಾನಕ್ಕಾಗಿ ಹೋಗಿ, ಹೆದರಿ ಕುಳಿತಿದ್ದ ಚಿರತೆಯನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾದವು. 6 ಗಂಟೆಗಳ ಕಾರ್ಯಾಚರಣೆಯ ಬಳಿಕ ಚಿರತೆಯನ್ನು ಸೆರೆಹಿಡಿಯಲಾಯಿತು. ನಂತರ ಚಿರತೆಯನ್ನು ಪಂಜರಕ್ಕೆ ಸ್ಥಳಾಂತರಿಸಲಾಯಿತು. ಆಮೇಲೆ ಅದನ್ನು ಕಾಡಿಗೆ ಬಿಡುವ ಮೊದಲು ವೈದ್ಯಕೀಯ ಪರೀಕ್ಷೆ ನಡೆಸಲಾಯಿತು ಎಂದು ಎಂಎಫ್‌ಡಿ ರೇಂಜ್ ಫಾರೆಸ್ಟ್ ಆಫೀಸರ್ ಯೋಗೇಶ್ ಮಹಾಜನ್ ಹೇಳಿದ್ದಾರೆ.
ಇದನ್ನೂ ಓದಿ: Shocking News: ನಾಯಿಯನ್ನು ಕಟ್ಟಿಹಾಕಿ ಬಣ್ಣ ಎರಚಿ ಹೋಳಿ ಆಡಿದ ಯುವಕರು; ವಿಡಿಯೋ ವೈರಲ್
Shocking News: 5 ವರ್ಷಗಳಿಂದ ಅಪ್ಪ, ಅಣ್ಣ, ಅಜ್ಜನಿಂದಲೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ!