Video: ಪ್ರಧಾನಿ ಮೋದಿ, ರಾಷ್ಟ್ರಪತಿಯೆದುರು ಮೊಣಕಾಲೂರಿ ನಮಸ್ಕರಿಸಿದ 126 ವರ್ಷದ, ಪದ್ಮಶ್ರೀ ಪುರಸ್ಕೃತ ಯೋಗಗುರು

ಶಿವಾನಂದ ಬಾಬಾ ಹುಟ್ಟಿದ್ದು 1896ರ ಆಗಸ್ಟ್​ 8ರಂದು. ಅವಿಭಜಿತ ಭಾರತದ ಸೈಲ್ಹೆಟ್​ ಎಂಬುದು ಹುಟ್ಟೂರು. (ಇದೀಗ ಬಾಂಗ್ಲಾದೇಶದಲ್ಲಿದೆ). ಆರನೇ ವರ್ಷದಲ್ಲಿದ್ದಾಗಲೇ ತಂದೆ-ತಾಯಿಯನ್ನು ಕಳೆದುಕೊಂಡವರು. 

Video: ಪ್ರಧಾನಿ ಮೋದಿ, ರಾಷ್ಟ್ರಪತಿಯೆದುರು ಮೊಣಕಾಲೂರಿ ನಮಸ್ಕರಿಸಿದ 126 ವರ್ಷದ, ಪದ್ಮಶ್ರೀ ಪುರಸ್ಕೃತ ಯೋಗಗುರು
ಪ್ರಧಾನಿ ಮೋದಿಯವರಿಗೆ ನಮಸ್ಕರಿಸಿದ ಯೋಗಗುರು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Mar 22, 2022 | 1:08 PM

ನಿನ್ನೆ ರಾಷ್ಟ್ರಪತಿ ಭವನದಲ್ಲಿ ಅನೇಕ ಮಹಾನ್ ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ram Nath Kovind)​ ಅವರು ಪ್ರದಾನ ಮಾಡಿದರು. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi), ಗೃಹ ಸಚಿವ ಅಮಿತ್​ ಶಾ, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಸೇರಿ ಇನ್ನೂ ಅನೇಕ ಗಣ್ಯರು ಭಾಗವಹಿಸಿದ್ದರು. ಈ ಸಮಾರಂಭದಲ್ಲಿ ತುಂಬ ಗಮನಸೆಳೆದವರು ವಾರಾಣಸಿಯ ಯೋಗ ಗುರು ಸ್ವಾಮಿ ಶಿವಾನಂದ ಬಾಬಾ. 126 ವರ್ಷದ ಇವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಿನ್ನೆ ಪ್ರಶಸ್ತಿ ಸ್ವೀಕಾರ ಮಾಡುವ ವೇಳೆ ಇವರು ನಡೆದುಕೊಂಡ ರೀತಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಶಸ್ತಿ ಸ್ವೀಕಾರ ಮಾಡಲು ಬರುವ ದಾರಿಯಲ್ಲಿ ಮೊದಲು ಪ್ರಧಾನಿ ನರೇಂದ್ರ ಮೋದಿಯವರ ಎದುರು ಮೊಣಕಾಲೂರಿ, ನೆಲಕ್ಕೆ ಹಣೆ ಹಚ್ಚಿ ನಮಸ್ಕರ ಮಾಡಿದ್ದಾರೆ. ತಮ್ಮ ವಯಸ್ಸನ್ನು ಮರೆತು ಪ್ರಧಾನಿ ಮೋದಿಯವರಿಗೆ ನಮಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ ತಮ್ಮ ಕುರ್ಚಿಯಿಂದ ಲಗುಬಗೆಯಿಂದ ಎದ್ದು, ಅವರೆದುರು ಬಾಗಿ ನಿಂತು ತಮ್ಮ ಕೈಯಿಂದ ನೆಲವನ್ನು ಸ್ಪರ್ಶಿಸಿ ನಮಿಸಿದ್ದಾರೆ. ಈ ವಿಡಿಯೋ ಸಿಕ್ಕಾಪಟೆ ವೈರಲ್ ಆಗುತ್ತಿದೆ.  ಇವರಿಬ್ಬರ ಸಂಸ್ಕಾರ ಮೇರು ಮಟ್ಟದ್ದು ಎಂಬ ಮಾತುಗಳು ಕೇಳಿಬರುತ್ತಿವೆ.

ಸ್ವಾಮಿ ಶಿವಾನಂದ ಬಾಬಾ ಒಂದು ಧೋತಿ ಉಟ್ಟು, ಬಿಳಿಬಣ್ಣದ ಅಂಗಿ ತೊಟ್ಟು, ಬರಿಗಾಲಿನಲ್ಲಿಯೇ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅವರು ಪ್ರಧಾನಿ ನರೇಂದ್ರ ಮೋದಿಗೆ ನಮಸ್ಕರಿಸಿಯಾದ ಬಳಿಕ ಎದ್ದು ಪ್ರಶಸ್ತಿ ಸ್ವೀಕಾರ ಮಾಡುವ ವೇದಿಕೆಗೆ ಮತ್ತೊಮ್ಮೆ ಇದೇ ರೀತಿ ನಮಸ್ಕಾರ ಮಾಡಿದ್ದಾರೆ. ಹಾಗೇ, ರಾಷ್ಟ್ರಪತಿಯವರಿಗೂ ಅದೇ ರೀತಿ ನಮಿಸಿದ್ದಾರೆ. ಆಗ ರಾಷ್ಟ್ರಪತಿ ರಾಮನಾಥ ಕೋವಿಂದ್​ ತಮ್ಮ ಆಸನದಿಂದ ಎದ್ದು, ಯೋಗಗುರುವನ್ನೂ ಎಬ್ಬಿಸಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ನಂತರ ಶಿವಾನಂದ ಬಾಬಾ ಅವರು ತುಂಬ ಮುಗ್ಧತೆಯಿಂದ ಫೋಟೋಕ್ಕೆ ಪೋಸ್​ ಕೊಟ್ಟಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಹಾಗೇ, ಅಷ್ಟು ವಯಸ್ಸಾದರೂ ಅವರು ತುಂಬ ವೇಗವಾಗಿ ನಡೆಯುತ್ತಾರೆ. ಚುರುಕಾಗಿ, ಚಟುವಟಿಕೆಯಿಂದ ಇದ್ದಾರೆ.

ಶಿವಾನಂದ ಬಾಬಾ ಹುಟ್ಟಿದ್ದು 1896ರ ಆಗಸ್ಟ್​ 8ರಂದು. ಅವಿಭಜಿತ ಭಾರತದ ಸೈಲ್ಹೆಟ್​ ಎಂಬುದು ಹುಟ್ಟೂರು. (ಇದೀಗ ಬಾಂಗ್ಲಾದೇಶದಲ್ಲಿದೆ). ಆರನೇ ವರ್ಷದಲ್ಲಿದ್ದಾಗಲೇ ತಂದೆ-ತಾಯಿಯನ್ನು ಕಳೆದುಕೊಂಡವರು.  ಸದ್ಯ ಅವರು ವಾರಾಣಸಿಯ ದುರ್ಗಾಕುಂಡ್​ ಎಂಬಲ್ಲಿ, ಮನೆಯೊಂದರ ಮೂರನೇ ಮಹಡಿಯಲ್ಲಿ ವಾಸವಾಗಿದ್ದು, ಪ್ರತಿದಿನ ಎರಡು ಬಾರಿ ಮೆಟ್ಟಿಲು ಹತ್ತಿ -ಇಳಿಯುತ್ತಾರೆ. ಅವರು ಯಾರದ್ದೂ ಸಹಾಯವಿಲ್ಲದೆ ಮೆಟ್ಟಿಲು ಹತ್ತುತ್ತಾರೆ ಎಂದು ಅವರ ಶಿಷ್ಯಂದಿರು ತಿಳಿಸಿದ್ದಾರೆ.  ಶಿವಾನಂದ ಬಾಬಾರ ತಂದೆ-ತಾಯಿ ಸಾಯಲು ಕಾರಣ ಹಸಿವು. ಇವರೂ ಕೂಡ ಬಾಲ್ಯವನ್ನೆಲ್ಲ ಬಹುತೇಕ ಅರ್ಧಹೊಟ್ಟೆಯಲ್ಲೇ ಕಳೆದಿದ್ದಾರೆ. ಪಾಲಕರನ್ನು ಕಳೆದುಕೊಂಡ ನಂತರ ಕಾಶಿಗೆ ಬಂದು ನೆಲೆಸಿದ ಇವರು, ಗುರು ಓಂಕಾರಾನಂದ ಎಂಬುವರ ಶಿಷ್ಯರಾದರು. 1925ರ ಹೊತ್ತಿಗೆ ಗುರುವಿನ ಆಣತಿ ಮೇರೆಗೆ ಪ್ರಪಂಚ ಪರ್ಯಟನೆ ಮಾಡಲು ತೆರಳಿದ್ದರು. ಸುಮಾರು 34 ವರ್ಷಗಳ ಕಾಲ ಇವರು ದೇಶ-ವಿದೇಶಗಳನ್ನು ಸುತ್ತಿದ್ದಾರೆ.  ಯೋಗದಲ್ಲಿ ಮಹಾನ್ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: Padma Awards 2022: ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್​​ರಿಂದ ಪ್ರಶಸ್ತಿ ಪ್ರದಾನ

Published On - 11:05 am, Tue, 22 March 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ