Viral Video: ಚಲಿಸುತ್ತಿರುವ ಬೈಕ್​ ಹತ್ತಿ ಸವಾರನ ಅಪಾಯಕಾರಿ ಸ್ಟಂಟ್; ಮುಂದೇನಾಯ್ತು? ವಿಡಿಯೋ ನೋಡಿ

Shocking Video: ಅಪಾಯಕಾರಿ ಸ್ಟಂಟ್​ಗಳು ಏನೆಲ್ಲಾ ಅಪಾಯವನ್ನು ತಂದೊಡ್ಡಬಹುದು ಎಂಬುದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಂದು ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿ ಆದರೆ ನೀವೂ ಹೀಗೆಲ್ಲಾ ಮಾಡದಿರಿ. ಎಚ್ಚರ!

Viral Video: ಚಲಿಸುತ್ತಿರುವ ಬೈಕ್​ ಹತ್ತಿ ಸವಾರನ ಅಪಾಯಕಾರಿ ಸ್ಟಂಟ್; ಮುಂದೇನಾಯ್ತು? ವಿಡಿಯೋ ನೋಡಿ
ಬೈಕ್​ ವೇಗವಾಗಿ ಚಲಿಸುತ್ತಿರುವಾಗಲೇ ಸವಾರನ ಸ್ಟಂಟ್!
Updated By: shruti hegde

Updated on: Oct 10, 2021 | 9:31 AM

ಸಾಮಾನ್ಯವಾಗಿ ಹುಡುಗರಿಗೆ ಬೈಕ್ ಮೇಲೆ ಕೊಂಚ ಮೋಹ ಜಾಸ್ತಿಯೇ ಎಂದರೆ ತಪ್ಪಾಗಲಾರದು. ನಮ್ಮಲ್ಲಿಯೂ ಒಳ್ಳೊಳ್ಳೆ ಬೈಕ್ ಇರಬೇಕು ಎಂಬ ಆಸೆಯಲ್ಲಿ ದುಬಾರಿ ಬೈಕ್​ಗಳನ್ನು ಖರೀದಿಸುತ್ತಾರೆ. ಆದರೆ ಬೈಕ್ ಮೇಲೆ ನಿಂತು ಸಾಹಸಗಳನ್ನು ಮಾಡುವುದು ಜೀವಕ್ಕೇ ಅಪಾಯ ಎಂಬುದನ್ನು ಮರೆಯುತ್ತಿದ್ದಾರೆ. ಅಂತಹ ಸ್ಟಂಟ್​ಗಳು ಏನೆಲ್ಲಾ ಅಪಾಯವನ್ನು ತಂದೊಡ್ಡಬಹುದು ಎಂಬುದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಂದು ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿ ಆದರೆ ನೀವೂ ಹೀಗೆಲ್ಲಾ ಮಾಡದಿರಿ. ಎಚ್ಚರ!

ಸಾಮಾನ್ಯವಾಗಿ ಈಗಿನ ಯುವಕರಿಗೆ ಹೊಸ ಹೊಸ ಸ್ಟಂಟ್​ಗಳನ್ನು ಮಾಡುವುದು ಕ್ರೇಜ್. ಅದೇ ರೀತಿ ಇಲ್ಲೋರ್ವ ಯುವಕ ಬೈಕ್ ಓಡುತ್ತಿರುವಾಗಲೇ ಬೈಕ್ ಮೇಲೆ ಹತ್ತಿ ನಿಂತಿದ್ದಾನೆ. ಬೈಕ್ ವೇಗವಾಗಿ ಚಲಿಸುತ್ತಿದೆ. ಮತ್ತೊಂದು ವಾಹನದಲ್ಲಿ ಪ್ರಯಾಣಿಸುತ್ತಿರುವವರು ಕ್ಯಾಮರಾದಲ್ಲಿ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ವೇಗವಾಗಿ ಬೈಕ್ ಚಲಿಸುತ್ತಿರುವಾಗ ಸವಾರ ಬೈಕ್ ಮೇಲೆ ಹತ್ತಿ ನಿಂತಿದ್ದಾಗಲೇ ಬ್ಯಾಲೆಂನ್ಸ್ ತಪ್ಪಿದೆ. ಮುಂದೇನಾಯ್ತು ಎಂಬುದನ್ನು ವಿಡಿಯೋದಲ್ಲೇ ನೋಡಿ.

ವೈರಲ್ ಆದ ವಿಡಿಯೋದಲ್ಲಿ ಗಮನಿಸುವಂತೆ ರಸ್ತೆಯಲ್ಲಿ ಬೈಕ್ ವೇಗವಾಗಿ ಚಲಿಸುತ್ತಿರುವಾಗಲೇ ಸವಾರ ಸ್ಟಂಟ್ ಮಾಡಲು ಮುಂದಾಗಿದ್ದಾನೆ. ಸಮತೋಲನ ತಪ್ಪಿ ಕೆಳಕ್ಕೆ ಬಿದ್ದಿದ್ದಾನೆ. ಬೈಕ್ ಮಾತ್ರ ವೇಗವಾಗಿ ಮುಂದೇ ಹೋಗಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ನೆಟ್ಟಿಗರು ನಾನಾ ಪ್ರತಿಕ್ರಿಯೆಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋವನ್ನು ಅಕ್ಟೋಬರ್ 9ನೇ ತಾರೀಕಿನಂದು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ವಾಹನ ಸವಾರರು ಸ್ಟಂಟ್ ಮಾಡಲು ಹೋಗಿ ತಮ್ಮ ಜೀವದ ಬಗ್ಗೆ ಕಿಂಚಿತ್ತೂ ಯೋಚಿಸುತ್ತಿಲ್ಲ ಎಂದು ಓರ್ವರು ಹೇಳಿದ್ದಾರೆ. ಇಂತಹ ಅಪಾಯಕಾರಿ ಸಾಹಸ ಮಾಡುವುದನ್ನು ತಪ್ಪಿಸಬೇಕು ಎಂದು ಮತ್ತೋರ್ವರು ಹೇಳಿದ್ದಾರೆ. ಯಾವುದೇ ಸಾಹಸ ಮಾಡುವ ಮೊದಲು ನೂರು ಬಾರಿ ಯೋಚಿಸಿ. ನಿಮ್ಮ ಜೀವಕ್ಕೇ ಅಪಾಯ ತರುವ ಇಂತಹ ಸ್ಟಂಟ್​ಗಳನ್ನ ಎಂದಿಗೂ ಮಾಡಬೇಡಿ ಎಂಬ ಮಾತುಗಳು ನೆಟ್ಟಿಗರಿಂದ ಕೇಳಿ ಬಂದಿದೆ.

ಇದನ್ನೂ ಓದಿ:

Viral Video: ಚಿನ್ನದ ಅಂಗಡಿಯಲ್ಲಿ ಸರ ಕದ್ದು ಪರಾರಿಯಾಗಲು ಸಿದ್ಧರಾಗಿದ್ದ ದಂಪತಿ; ಅಟ್ಟಾಡಿಸಿಕೊಂಡು ಹೋದ ಶ್ವಾನದ ವಿಡಿಯೋ ವೈರಲ್

Viral Video: ತನ್ನ ತಾಯಿಗಾಗಿ ಹುಡುಕಾಡುತ್ತಿರುವ ಆನೆ ಮರಿ; ಮನಮಿಡಿಯುವ ವಿಡಿಯೋ ನೋಡಿ

Published On - 9:29 am, Sun, 10 October 21